ಕೇರಳ, ಮಹಾರಾಷ್ಟ್ರಕ್ಕೆ ಮತ್ತೆ ನಿರ್ಬಂಧಿಸಿ: ಕೇಂದ್ರ ಸರ್ಕಾರದ ಸಲಹೆ!

By Suvarna NewsFirst Published Aug 28, 2021, 7:30 AM IST
Highlights

* 2 ರಾಜ್ಯಗಳಲ್ಲಿ ಕೋವಿಡ್‌ ಕೇಸು ಹೆಚ್ಚುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಕಳವಳ

* ಕೇರಳ, ಮಹಾರಾಷ್ಟ್ರಕ್ಕೆ ಮತ್ತೆ ನಿರ್ಬಂಧ ಲಾಕ್‌ಡೌನ್‌ ಭೂತ 

* ಕೇಂದ್ರ ಸರ್ಕಾರದ ಸಲಹೆ

* ರಾತ್ರಿ ಕರ್ಫ್ಯೂ ಹೇರಲು ತಾಕೀತು

ನವದೆಹಲಿ(ಆ.28): ದೇಶದಲ್ಲೇ ಅತಿಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿರುವ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ರಾತ್ರಿ ಕಫä್ರ್ಯ ಸೇರಿದಂತೆ ಸೋಂಕು ನಿಯಂತ್ರಣ ಸಲಕ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಕೇರ​ಳ​ದಲ್ಲಿ ಕಳೆದ 3 ದಿನ​ದಿಂದ ನಿತ್ಯ 30 ಸಾವಿ​ರಕ್ಕೂ ಹೆಚ್ಚು ಹಾಗೂ ಮಹಾ​ರಾ​ಷ್ಟ್ರ​ದಲ್ಲಿ ಸುಮಾರು 5 ಸಾವಿರ ಕೇಸು​ಗಳು ದಾಖ​ಲಾ​ಗು​ತ್ತಿವೆ. ದೇಶದ ಒಟ್ಟು ಸುಮಾರು 45 ಸಾವಿರ ಪ್ರಕ​ರ​ಣ​ಗ​ಳಲ್ಲಿ ಈ ರಾಜ್ಯ​ಗಳ ಪಾಲೇ ಸುಮಾರು 35 ಸಾವಿರ ಆಗಿದೆ.

ಈ ಸಂಬಂಧ ಗುರುವಾರ ಎರಡೂ ರಾಜ್ಯಗಳ ಜತೆ ಸಭೆ ನಡೆಸಿದ ಕೇಂದ್ರ ಗೃಹ ಸಚಿವಾಲಯ, ಸೋಂಕು ನಿಯಂತ್ರಣಕ್ಕೆ ಕೇರಳ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ಪಡೆಯಿತು. ಆ ಬಳಿಕ ಸೋಂಕು ನಿಯಂತ್ರಣಕ್ಕೆ ಈ ಎರಡೂ ರಾಜ್ಯಗಳು ಮತ್ತಷ್ಟುಕ್ರಮಗಳನ್ನು ಕೈಗೊಳ್ಳಲೇಬೇಕಿದೆ. ರಾತ್ರಿ ಕಫä್ರ್ಯ​ದಂಥ ನಿಯ​ಮ​ಗ​ಳನ್ನು ಜಾರಿ​ಗೊ​ಳಿ​ಸ​ಬೇ​ಕು ಎಂದಿತು. ಇದರ ಬೆನ್ನಲ್ಲೇ ಶುಕ್ರ​ವಾರ ಆರೋಗ್ಯ ಸಚಿ​ವಾ​ಲಯ ಕೂಡ ಬಿಗಿ ನಿಯ​ಮ​ಗ​ಳನ್ನು ಕೈಗೊ​ಳ್ಳ​ಬೇಕು ಎಂದೂ ನಿರ್ದೇ​ಶಿ​ಸಿದೆ.

ಅತಿಹೆಚ್ಚು ಸೋಂಕು ಪತ್ತೆಯಾಗುತ್ತಿರುವ ಪ್ರದೇಶಗಳಲ್ಲಿ ರಾತ್ರಿ ಕಫä್ರ್ಯ ಜಾರಿಯ ಬಗ್ಗೆ ಪರಿಶೀಲನೆ ಹಾಗೂ ಇಂಥ ಪ್ರದೇಶಗಳಲ್ಲಿ ಸೋಂಕಿತರ ಜತೆಗಿನ ಸಂಪರ್ಕಿತರ ಪತ್ತೆ, ಲಸಿಕೆ ಅಭಿಯಾನಕ್ಕೆ ಚುರುಕು, ಮಾಸ್ಕ್‌, ಸಾಮಾಜಿಕ ಅಂತರ ಪಾಲನೆ ಕಟ್ಟುನಿಟ್ಟುಗೊಳಿಸುವಂತೆ ಸಲಹೆ ನೀಡಲಾಗಿದೆ.

ಕೇರಳದಲ್ಲಿ ಭಾನುವಾರ ಲಾಕ್ಡೌನ್‌ ಮರು ಜಾರಿ

ರಾತ್ರಿ ಕರ್ಫ್ಯೂಗೆ ಕೇಂದ್ರ ಸರ್ಕಾರ ಸಲಹೆ ನೀಡಿದ ಬೆನ್ನಲ್ಲೇ, ಭಾನು​ವಾ​ರದ ಲಾಕ್‌​ಡೌನ್‌ ಮರುಜಾರಿಗೆ ಕೇರಳ ನಿರ್ಧ​ರಿ​ಸಿ​ದೆ. ಓಣಂ ಹಬ್ಬ ಹಾಗೂ ಇತರ ಕಾರ​ಣ​ಗ​ಳಿ​ಗಾಗಿ ಕಳೆದ 2 ವಾರಗಳಿಂದ ಭಾನುವಾರದ ಲಾಕ್‌ಡೌನ್‌ಗೆ ಪಿಣರಾಯಿ ವಿಜಯನ್‌ ಸರ್ಕಾರ ವಿನಾಯ್ತಿ ನೀಡಿತ್ತು.

ಸಂಭ್ರಮದ ಗಣೇಶ ಹಬ್ಬ ಬೇಡ: ಬಿಎಸ್‌ವೈ

ಶಿಕಾರಿಪುರ: ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಸಮಯ ಇದಲ್ಲ. ಅಕ್ಕಪಕ್ಕದ ರಾಜ್ಯಗಳಲ್ಲಿ ಕೋವಿಡ್‌ ಹೆಚ್ಚಳವಾಗಿದೆ. ಹಾಗಾಗಿ ಈ ವರ್ಷ ಹಬ್ಬವನ್ನು ಸರಳವಾಗಿ ಆಚರಿಸುವುದು ಒಳ್ಳೆಯದು. ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

click me!