
ನವದೆಹಲಿ(ಆ.27): ನರಕ ದೇಶ ಆಫ್ಘಾನಿಸ್ತಾನ ತೊರೆಯಲು ಅಮಾಯಕ ಜನ ಹಾತೊರೆಯುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದ ಚಿತ್ರಣ ಮನಕಲುಕುವಂತಿದೆ. ಇದರ ನಡುವೆ ಬಾಂಬ್ ದಾಳಿಗೆ ಪ್ರಾಣತೆತ್ತವರ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ ಇದುವರೆಗೆ 550 ಮಂದಿಯನ್ನು ಆಫ್ಘಾನಿಸ್ತಾನದಿಂದ ಭಾರತಕ್ಕೆ ಕರೆ ತಂದಿದೆ. ಇದೀಗ ಕೇಂದ್ರ ಸರ್ಕಾರ ಭಾರತಕ್ಕೆ ಆಗಮಿಸುವ ಆಫ್ಘಾನಿಸ್ತಾನ ನಾಗರೀಕರಿಗೆ 6 ತಿಂಗಳ ವೀಸಾ ನೀಡಲಾಗುವುದು ಎಂದಿದೆ.
ಕಾಶ್ಮೀರ ಕೈವಶ ಮಾಡಲು ತಾಲಿಬಾನ್ ನಾಯಕರ ಭೇಟಿಯಾದ ಜೈಶ್ ಇ ಮೊಹಮ್ಮದ್ ಮುಖ್ಯಸ್ಥ!
ಭಾರತಕ್ಕೆ ಆಗಮಿಸುವ ಆಫ್ಘಾನ್ ನಾಗರೀಕರಿಗೆ ಸದ್ಯ 6 ತಿಂಗಳ ವೀಸಾ ನೀಡಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ದೀರ್ಘಾವದಿ ವೀಸಾ ನೀಡುವುದು ಒಳಿತಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಹೇಳಿದೆ. ಭದ್ರತೆ ಹಾಗೂ ತಾಲಿಬಾನ್ ಉಗ್ರರ ಅಟ್ಟಹಾಸ ಕಾರಣದಿಂದ ಆಫ್ಘಾನಿಸ್ತಾನ ನಾಗರೀಕರು ಭಾರತ ಪ್ರಯಾಣಕ್ಕೆ ಇ ವೀಸಾ ಬಳಕೆ ಮಾಡಿ ಎಂದು ಕೇಂದ್ರ ಗೃಹ ಇಲಾಖೆ ಇತ್ತೀಚೆಗೆ ಹೇಳಿತ್ತು.
ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ 6 ತಿಂಗಳ ವೀಸಾ ನೀಡಲಾಗುತ್ತಿದೆ. ಇ ಎಮರ್ಜೆನ್ಸಿ ವೀಸಾ ಮೂಲಕ ಭಾರತದಲ್ಲಿ 6 ತಿಂಗಳ ಕಾಲ ಉಳಿದುಕೊಳ್ಳುವ ಅವಕಾಶವಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಆರಿಂದಮ್ ಬಗ್ಚಿ ಹೇಳಿದ್ದಾರೆ.
ಪಾಕ್ ಶನಿ ಸಂತಾನ ಭಾರತಕ್ಕೂ ಬರುತ್ತಾ? ಮಕ್ಕಳ ಮೇಲೆ ಕ್ರೌರ್ಯ!
ಇದುವರೆಗೆ ಭಾರತ 6 ವಿಮಾನದ ಮೂಲಕ 550 ಮಂದಿಯನ್ನು ಆಫ್ಘಾನಿಸ್ತಾನದಿಂದ ಸ್ಥಳಾಂತರ ಮಾಡಿದೆ. ಈ 550 ಮಂದಿಯಲ್ಲಿ 260 ಮಂದಿ ಭಾರತೀಯರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ