
ಪುಣೆ (ಏ.28): ಮಂಗಗಳ ಉಪಟಳ ತಡೆಯುವ ಉದ್ದೇಶದಿಂದ, ಜನವಸತಿ ಪ್ರದೇಶಗಳಲ್ಲಿರುವ ಮಂಗಗಳನ್ನು ಸುರಕ್ಷಿತವಾಗಿ ಹಿಡಿದುಕೊಡುವವರಿಗೆ ಮಹಾರಾಷ್ಟ್ರ ಸರ್ಕಾರ 600 ರು. ಬಹುಮಾನ ಘೋಷಿಸಿದೆ.
ಇದರನ್ವಯ ಪ್ರತಿ ಮಂಗವನ್ನು ಹಿಡಿದುಕೊಟ್ಟಾಗಲೂ ಈ ಮೊತ್ತ ಪಡೆಯಬಹುದಾಗಿದೆ. ಕಂದಾಯ ಮತ್ತು ಅರಣ್ಯ ಇಲಾಖೆಯು ಏ.22ರಂದು ಈ ಯೋಜನೆಯನ್ನು ಘೋಷಿಸಿದೆ.
ಮಂಗಗಳ ಸುರಕ್ಷತೆ ದೃಷ್ಟಿಯಿಂದ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನೂ ಜಾರಿಗೊಳಿಸಿದೆ. ಮಂಗಗಳನ್ನು ಬಲೆ ಅಥವಾ ಪಂಜರಗಳಂತಹ ಸುರಕ್ಷಿತ ವಿಧಾನಗಳನ್ನು ಬಳಸಿ ಸೆರೆಹಿಡಿಯಬೇಕು. ಪ್ರತಿ ಕಾರ್ಯಾಚರಣೆಯನ್ನು ಫೋಟೊ ಸಾಕ್ಷ್ಯಗಳೊಂದಿಗೆ ದಾಖಲಿಸಬೇಕು. ಸೆರೆ ಹಿಡಿದ ನಂತರ, ಅವುಗಳನ್ನು ಮಾನವ ವಾಸಸ್ಥಳಗಳಿಂದ ಕನಿಷ್ಠ 10 ಕಿ.ಮೀ. ದೂರದಲ್ಲಿರುವ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸಬೇಕು ಎಂದು ತಿಳಿಸಿದೆ.
ನೇರವಾಗಿ ಮಂಗಗಳ ಕಣ್ಣು ದಿಟ್ಟಿಸಬೇಡಿ (Avoid Direct Eye Contact): ಮಂಗಗಳ ಕಣ್ಣನ್ನು ನೇರವಾಗಿ ನೋಡುವುದು ಅವುಗಳಿಗೆ ಕೆಣಕಿದಂತೆ ಅಥವಾ ಬೆದರಿಕೆ ಹಾಕಿದಂತೆ ಭಾಸವಾಗುತ್ತದೆ. ಇದು ಅವುಗಳನ್ನು ಹೆಚ್ಚು ಆಕ್ರಮಣಕಾರಿಯಾಗಿಸಬಹುದು. ಆದ್ದರಿಂದ, ಕಣ್ಣುಗಳನ್ನು ಕೆಳಕ್ಕೆ ಇರಿಸಿ ಅಥವಾ ಬೇರೆಡೆ ನೋಡಿ.
ನಾವು ನಗುವಾಗ ಅಥವಾ ಗಾಬರಿಯಾದಾಗ ಹಲ್ಲು ತೋರಿಸುತ್ತೇವೆ. ಆದರೆ ಮಂಗಗಳ ಲೋಕದಲ್ಲಿ ಹಲ್ಲು ತೋರಿಸುವುದು 'ದಾಳಿ ಮಾಡುತ್ತೇನೆ' ಎಂಬ ಸಂಕೇತವಾಗಿದೆ. ಆದ್ದರಿಂದ ಬಾಯಿ ಮುಚ್ಚಿಕೊಂಡಿರುವುದು ಉತ್ತಮ.
ನೀವು ಓಡಲು ಪ್ರಾರಂಭಿಸಿದರೆ, ಮಂಗಗಳು ನಿಮ್ಮನ್ನು ಬೆನ್ನಟ್ಟುತ್ತವೆ. ಅದರ ಬದಲಿಗೆ, ಶಾಂತವಾಗಿ ಮತ್ತು ನಿಧಾನವಾಗಿ ಅಲ್ಲಿಂದ ಹಿಂದಕ್ಕೆ ಹೆಜ್ಜೆ ಇಡುತ್ತಾ ದೂರ ಸರಿಯಿರಿ.
ನಿಮ್ಮ ಕೈಯಲ್ಲಿರುವ ಆಹಾರವನ್ನು ನೋಡಿ ಮಂಗಗಳು ಬರುತ್ತಿದ್ದರೆ, ಅದನ್ನು ಬೆದರಿಸಲು ಪ್ರಯತ್ನಿಸಬೇಡಿ, ಅವುಗಳಿಗೆ ನಿಮ್ಮ ಬಳಿ ಆಹಾರವಿದೆ ಎಂದು ತಿಳಿದರೆ ಅವು ನಿಮ್ಮ ಮೇಲೆ ಹತ್ತುತ್ತವೆ. ಆಹಾರವಿದ್ದರೆ ಅದನ್ನು ದೂರಕ್ಕೆ ಎಸೆದು ನೀವು ವಿರುದ್ಧ ದಿಕ್ಕಿನಲ್ಲಿ ಸಾಗಿ.
ನೆನಪಿಡಿ ಚೀರಾಡಬೇಡಿ (Don't Scream): ಜೋರಾಗಿ ಕಿರುಚುವುದು ಅಥವಾ ಶಬ್ದ ಮಾಡುವುದು ಮಂಗಗಳನ್ನು ಇನ್ನಷ್ಟು ಕೆರಳಿಸಬಹುದು. ಶಾಂತವಾಗಿರುವುದು ಅತ್ಯಂತ ಮುಖ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ