ಮಹಾರಾಷ್ಟ್ರ ಸಿಎಂ ಶಿಂಧೆಗೆ ಇಂದು ವಿಶ್ವಾಸ ಪರೀಕ್ಷೆ..!

Published : Jul 04, 2022, 05:15 AM IST
ಮಹಾರಾಷ್ಟ್ರ ಸಿಎಂ ಶಿಂಧೆಗೆ ಇಂದು ವಿಶ್ವಾಸ ಪರೀಕ್ಷೆ..!

ಸಾರಾಂಶ

*  ಸುಲಭವಾಗಿ ಬಹುಮತ ಸಾಬೀತು ಸಾಧ್ಯತೆ *  ಯಾವುದೇ ಸ್ಥಿತಿಯಲ್ಲೂ ಶಿಂಧೆ ಸೇಫ್‌ *  ಇಂದು ವಿಶ್ವಾಸಮತ ಸಾಬೀತುಪಡಿಸಲಿರುವ ಏಕನಾಥ ಶಿಂಧೆ   

ಮುಂಬೈ(ಜು.04):  ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ವಿರುದ್ಧ ಬಂಡಾಯ ಸಾರಿ ಬಿಜೆಪಿ ಜತೆ ಮೈತ್ರಿ ಸರ್ಕಾರ ರಚಿಸಿ ಮುಖ್ಯಮಂತ್ರಿಯೂ ಆಗಿರುವ ಏಕನಾಥ ಶಿಂಧೆ ಅವರು ಇಂದು(ಸೋಮವಾರ) ವಿಶ್ವಾಸಮತ ಸಾಬೀತುಪಡಿಸಲಿದ್ದಾರೆ.

ಬಹುಮತ ಸಾಬೀತಿಗೆ ಮುನ್ನಾ ದಿನವಾದ ಭಾನುವಾರ ನಡೆದ, ‘ಸೆಮಿಫೈನಲ್‌’ನಂತೆ ಬಿಂಬಿತವಾಗಿದ್ದ ಸ್ಪೀಕರ್‌ ಚುನಾವಣೆಯಲ್ಲಿ ಶಿಂಧೆ ಬಣ ಹಾಗೂ ಬಿಜೆಪಿ ಮೈತ್ರಿಕೂಟದಿಂದ ಸ್ಪರ್ಧಿಸಿದ್ದ ಬಿಜೆಪಿಯ ರಾಹುಲ್‌ ನಾರ್ವೇಕರ್‌ ಭಾರಿ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ನಾರ್ವೇಕರ್‌ 164 ಮತಗಳನ್ನು ಗಳಿಸಿದ್ದರೆ, ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್‌ ಪಕ್ಷಗಳನ್ನು ಒಳಗೊಂಡಿರುವ ಮಹಾ ಅಘಾಡಿ ಅಭ್ಯರ್ಥಿ 107 ಮತಗಳನ್ನಷ್ಟೇ ಪಡೆದಿದ್ದಾರೆ. ಇದು ಸೋಮವಾರದ ವಿಶ್ವಾಸಮತ ಪರೀಕ್ಷೆ ವೇಳೆಯೂ ಪ್ರತಿಫಲಿತವಾಗುವ ಎಲ್ಲ ಸಾಧ್ಯತೆ ಇದೆ. ಮತಗಳ ಅಂತರ ಹೆಚ್ಚಿರುವ ಕಾರಣ ಸೋಮವಾರದ ವಿಶ್ವಾಸಮತ ಪರೀಕ್ಷೆಯನ್ನು ಅತ್ಯಂತ ಸುಲಭವಾಗಿ ಶಿಂಧೆ ಗೆಲ್ಲುವುದು ಖಚಿತ ಎಂದು ವಿಶ್ಲೇಷಿಸಲಾಗುತ್ತಿದೆ.

ನನಗೆ 50 ಶಾಸಕರ ಬೆಂಬಲ, ತೆರೆಮರೆ ರಾಜಕೀಯ ಬಿಟ್ಟು ಹೋಟೆಲ್‌ನಿಂದ ಹೊರಬಂದ ಶಿಂಧೆ!

ಯಾವುದೇ ಸ್ಥಿತಿಯಲ್ಲೂ ಶಿಂಧೆ ಸೇಫ್‌:

ಶಿಂಧೆ ಬಣದಲ್ಲಿ ಗುರುತಿಸಿಕೊಂಡಿರುವ 16 ಶಾಸಕರನ್ನು ಅಮಾನತುಗೊಳಿಸಬೇಕು ಎಂದು ಶಿವಸೇನೆ ಈಗಾಗಲೇ ಸುಪ್ರೀಂಕೋರ್ಚ್‌ ಕದ ಬಡಿದಿದೆ. ಒಂದು ವೇಳೆ, ಆ ಪಕ್ಷದ ಬೇಡಿಕೆಗೆ ಸುಪ್ರೀಂಕೋರ್ಟ್‌ ಅಸ್ತು ಎಂದರೂ ಶಿಂಧೆಗೆ ಸಮಸ್ಯೆಯಾಗುವುದಿಲ್ಲ.

ಮಕ್ಕಳ ಸಾವನ್ನು ಕಣ್ಣೆದುರೇ ಕಂಡಿದ್ದ ಏಕನಾಥ್ ಶಿಂಧೆ, ಇಂದು ಇಡಿ ಶಿವಸೇನೆಯೆ ಅವರ ಬೆನ್ನಹಿಂದೆ!

ಸ್ಪೀಕರ್‌ ಚುನಾವಣೆಯಲ್ಲಿ 164 ಶಾಸಕರು ಬಿಜೆಪಿ- ಶಿಂಧೆ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಅದರಲ್ಲಿ 16 ಶಾಸಕರ ಮತ ಖೋತಾ ಆದರೂ ಬಿಜೆಪಿ- ಶಿಂಧೆ ಬಣದ ಬಲ 148ಕ್ಕೆ ಕುಸಿಯುತ್ತದೆ. ಆಗ ಸದನದ ಬಲವೂ 271ಕ್ಕೆ ಕುಸಿಯಲಿದ್ದು, ಬಹುಮತಕ್ಕೆ 136 ಸ್ಥಾನ ಬೇಕಾಗುತ್ತವೆ. ಹೀಗಾಗಿ ಬಂಡಾಯ ನಾಯಕನಿಗೆ ಆಗಲೂ ಬಹುಮತ ದೊರೆಯಲಿದೆ. ಮತ್ತೊಂದೆಡೆ, ಸ್ಪೀಕರ್‌ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ (2) ಹಾಗೂ ಎಂಐಎಂ ಪಕ್ಷದ (1) ಶಾಸಕರು ಮತ ಚಲಾವಣೆ ಮಾಡಿಲ್ಲ. ಅವರು ಸೋಮವಾರ ಅಘಾಡಿ ಪರ ನಿಂತರೂ ಯಾವುದೇ ವ್ಯತ್ಯಾಸವಾಗುವುದಿಲ್ಲ.

ಉದ್ಧವ್‌ ಠಾಕ್ರೆಗೆ ಪರಿಸ್ಥಿತಿ ಹೇಗಿದೆಯೆಂದರೆ, ಶಿವಸೇನೆಯ ಎಲ್ಲ 39 ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರೂ, ಶಿಂಧೆ ಮ್ಯಾಜಿಕ್‌ ಸಂಖ್ಯೆಯ ಗಡಿ ದಾಟಲಿದ್ದಾರೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸದ್ಯ 1 ಸ್ಥಾನ ಖಾಲಿ ಇದೆ. ಹೀಗಾಗಿ ಬಹುಮತಕ್ಕೆ 144 ಸ್ಥಾನಗಳು ಬೇಕು. ಶಿಂಧೆ ಬಣದ ಪರ 164 ಮತಗಳು ಇದ್ದು, ಆ ಪೈಕಿ 39 ಮತಗಳು ಖೋತಾ ಆದರೆ ಶಿಂಧೆ- ಬಿಜೆಪಿ ಕೂಟದ ಸಂಖ್ಯಾಬಲ 125ಕ್ಕೆ ಕುಸಿಯಲಿದೆ. ಆಗ ಸದನದ ಬಲವೂ 248ಕ್ಕೆ ಇಳಿಯಲಿದ್ದು, ಬಹುಮತಕ್ಕೆ 125 ಮತಗಳು ಬೇಕಾಗುವುದರಿಂದ ಆಗಲೂ ಶಿಂಧೆ ಸೇಫ್‌.

ವಿಧಾನಸಭೆ ಬಲಾಬಲ ಒಟ್ಟು ಸ್ಥಾನ 288
ಬಹುಮತಕ್ಕೆ 144
ಬಿಜೆಪಿ+ಶಿಂಧೆ ಬಣ+ಇತರರು 164
ಮಹಾ ವಿಕಾಸ ಅಘಾಡಿ 112
ಇತರರು 11
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು