ಏರ್‌ಇಂಡಿಯಾ ನೇಮಕಾತಿಗೆ ಇಂಡಿಗೋ ಸಿಬ್ಬಂದಿ ದಿಢೀರ್ ರಜೆ, 900ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಬ!

Published : Jul 03, 2022, 08:19 PM IST
ಏರ್‌ಇಂಡಿಯಾ ನೇಮಕಾತಿಗೆ ಇಂಡಿಗೋ ಸಿಬ್ಬಂದಿ ದಿಢೀರ್ ರಜೆ, 900ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಬ!

ಸಾರಾಂಶ

ದೇಶಾದ್ಯಂತ ಇಂಡಿಗೋ ಹಾರಾಟದಲ್ಲಿ ವ್ಯತ್ಯಯ ಪ್ರಯಾಣಿಕರ ಪರದಾಟ, ಇಂಡಿಗೋಗೆ ಸಂಕಟ ಶೇ.50 ರಷ್ಟು ವಿಮಾನಕ್ಕೆ ಕ್ಯಾಬಿನ್ ಕ್ರೂ ಕೊರತೆ

ನವದೆಹಲಿ(ಜು.03): ದೇಶಾದ್ಯಂತ ಬರೋಬ್ಬರಿ 900ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಟ ವಿಳಂಬವಾಗಿದೆ. ಸಿಬ್ಬಂದಿಗಳ ಕೊರತೆಯಿಂದ ಇಂಡಿಗೋ ವಿಮಾನ ಹಾರಟದಲ್ಲಿ ವ್ಯತ್ಯಯವಾಗಿದೆ. ಈ ಪ್ರಕರಣದ ಕುರಿತು DGCA ತನಿಖೆಗೆ ಆದೇಶಿಸಿದೆ.

ಮೂಲಗಳ ಪ್ರಕಾರ ಏರ್ ಇಂಡಿಯಾ ವಿಮಾನ ಸಂಸ್ಥೆ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಹೀಗಾಗಿ ಇಂಡಿಗೋ ವಿಮಾನ ಸಂಸ್ಥೆ ಸಿಬ್ಬಂದಿಗಳು ಆರೋಗ್ಯ ಸಮಸ್ಯೆ ಎಂದು ರಜೆ ಹಾಕಿದ್ದಾರೆ. ಶನಿವಾರ(ಜು.02) ರಂದು ಏಕಾಏಕಿ ಹಲವರು ಆರೋಗ್ಯ ಸಮಸ್ಯೆ ಕಾರಣ ನೀಡಿ ರಜೆ ಹಾಕಿದ್ದಾರೆ. ಹೀಗಾಗಿ ನಿಗದಿತ ಸಮಯದಲ್ಲಿ ಟೇಕ್ ಆಫ್ ಆಗಬೇಕಿದ್ದ ಇಂಡಿಗೋ ವಿಮಾನಗಳು ಸಿಬ್ಬಂದಿ ಕೊರತೆಯಿಂದ ಹಾರಾಟ ನಡೆಸಿಲ್ಲ.

ಶನಿವಾರ ಬರೋಬ್ಬರಿ 900ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಗಿದೆ. ಏರ್ ಇಂಡಿಯಾ ಎರಡನೇ ಹಂತದ ನೇಮಕಾತಿ ನಡೆಸಿದೆ. ಇದಕ್ಕಾಗಿ ಸಿಬ್ಬಂದಿಗಳು ರಜೆ ಹಾಕಿ ಹೋಗಿದ್ದಾರೆ ಅನ್ನೋ ಮಾಹಿತಿಗಳು ಬಹಿರಂಗವಾಗಿದೆ. 

ಸ್ಟೈಸ್ ಜೆಟ್ ಹಾಗೂ ಇಂಡಿಗೋ ಮೇಲೆ ಕಳಪೆ ಸರ್ವೀಸ್ ನ ಗರಿಷ್ಠ ದೂರು!

ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಶನ್(DGCA) ಈ ಪ್ರಕರಣದ ಕುರಿತು ತನಿಖೆಗ ಆದೇಶಿಸಿದೆ. ಈ ಪ್ರಕರಣ ಗಂಭೀರವಾಗಿದೆ. ವಿಮಾನ ನಿಗಿದಿತ ಸಮಯಕ್ಕೆ ಹಾರಟ ನಡೆಸಬೇಕು.ಕೊಂಚ ವಿಳಂಬವಾದರೂ ಪ್ರಯಾಣಕರಿಗೆ ಅನಾನೂಕಲ ಮಾತ್ರವಲ್ಲ, ಅಪಾಯದ ಸಾಧ್ಯತೆ ಹೆಚ್ಚು. ಹೀಗಾಗಿ ಏಕಾಏಕಿ ಶೇಕಡಾ 50ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿರುವುದು ಇದೇ ಮೊದಲು. ಪ್ರಕರಣದ ತನಿಖೆಗೆ ಕೋರಲಾಗಿದೆ ಎಂದು DGCA ಮುಖ್ಯಸ್ಥ ಅರುಣ್ ಕುಮಾರ್ ಹೇಳಿದ್ದಾರೆ.

ಇಂಡಿಗೋ ಸಂಸ್ಥೆಗೆ ಒಂದರ ಮೇಲೊಂದರಂತೆ ಹೊಡೆತ ಬೀಳುತ್ತಿದೆ. ಇತ್ತೀಚೆಗೆ ವಿಕಲಚೇತನ ಬಾಲಕನ ವಿಚಾರದಲ್ಲಿ ಅಹಂ ಮರೆದಿದ್ದ ಇಂಡಿಗೋ ಸಂಸ್ಥೆಗೆ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. 

ವಿಮಾನಕ್ಕೆ ವಿಕಲಚೇತನ ಮಗು ಹತ್ತಿಸದ ಇಂಡಿಗೋಗೆ 5 ಲಕ್ಷ ದಂಡ
ಅಂಗವಿಕಲ ಮಗುವನ್ನು ವಿಮಾನಕ್ಕೆ ಹತ್ತಿಸಲು ಹಿಂದೇಟು ಹಾಕಿದ ಇಂಡಿಗೋ ಏರ್‌ಲೈನ್ಸ್‌ಗೆ ವಿಮಾನಯಾನ ನಿಯಂತ್ರಣ ಪ್ರಾಧಿಕಾರ ‘ಡಿಜಿಸಿಎ’, 5 ಲಕ್ಷ ರು. ದಂಡ ವಿಧಿಸಿತ್ತು. ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ಅಂಗವಿಕಲ ಮಗುವಿಗೆ ಇಂಡಿಗೋ ಏರ್‌ಲೈನ್ಸ್‌ ವಿಮಾನ ಏರಲು ಅವಕಾಶ ಕೊಡದೇ ಇರುವುದು ಭಾರೀ ಟೀಕೆಗೆ ಗುರಿಯಾಗಿತ್ತು. ‘ಬಾಲಕನು ಹೆದರಿದಂತೆ ಕಾಣುತ್ತಾನೆ’ ಎಂಬ ನೆಪದಲ್ಲಿ ವಿಮಾನ ಏರದಂತೆ ಸಿಬ್ಬಂದಿ ತಡೆದಿದ್ದರು. ಈ ಘಟನೆಯ ಬಗ್ಗೆ ತನಿಖೆ ನಡೆಸಲು ಡಿಜಿಸಿಎ, ಮೇ 9 ರಂದು ಸಮಿತಿಯನ್ನು ನೇಮಕ ಮಾಡಿದ್ದರು.

‘ಹೆದರಿದ್ದ ಅಂಗವಿಕಲ ಬಾಲಕನನ್ನು ಶಾಂತಗೊಳಿಸುವ ಬದಲು ಆತನಿಗೆ ವಿಮಾನ ಏರದಂತೆ ತಡೆದಿದ್ದು ಕರ್ತವ್ಯಲೋಪ’ ಎಂದು ಪರಿಗಣಿಸಿರುವ ಡಿಜಿಸಿಎ, ಇಂಡಿಗೋಗೆ 5 ಲಕ್ಷ ರು. ದಂಡ ವಿಧಿಸಿದೆ.

ಇಂಡಿಗೋ ಗಗನಸಖಿ ಕಣ್ಣೀರಿನ ವಿದಾಯ: ವೈರಲ್‌ ವಿಡಿಯೋಗೆ ಮನಸೋತ ನೆಟ್ಟಿಗರು

ಇಂಡಿಗೋ ಪೈಲಟ್‌ಗಳಿಂದ ತುರ್ತು ಸಂವಹನ ವ್ಯವಸ್ಥೆ ದುರ್ಬಳಕೆ
ವಿಮಾನದಲ್ಲಿ ಯಾವುದೇ ತೊಂದರೆ ಇರುವ ಸಂದರ್ಭದಲ್ಲಿ ತುರ್ತು ಸಂವಹನಕ್ಕೆಂದು ಇರುವ 121.4 ಮೆಗಾಹಟ್‌್ರ್ಜ ಫ್ರೀಕ್ವೆನ್ಸಿ (ತರಂಗಾಂತರ)ಯನ್ನು ಇಂಡಿಗೋದ 7 ಪೈಲಟ್‌ಗಳು ದುರ್ಬಳಕೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.ಏ.9ರಂದು ಇಂಡಿಗೋದ 7 ಪೈಲಟ್‌ಗಳು ಈ ಫ್ರೀಕೆನ್ವಿ ಬಳಸಿಕೊಂಡು ಅದರಲ್ಲಿ ತಮ್ಮ ವೇತನ ಸಮಸ್ಯೆಗಳ ಕುರಿತು ಅವಹೇಳಕಾರಿ ಪದ ಬಳಸಿ ಸಂವಾದ ನಡೆಸಿದ್ದು ಪತ್ತೆಯಾಗಿದೆ. ಈ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ತನಿಖೆಗೆ ಆದೇಶಿಸಿದೆ. ಆದರೆ ಇಂಡಿಗೋ ಸಂಸ್ಥೆ ಈ ಕುರಿತು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ