ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ದಿನಾಂಕ ಪ್ರಕಟ

By Santosh Naik  |  First Published Oct 15, 2024, 4:01 PM IST

ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೂ ನವೆಂಬರ್ 13 ರಂದು ಉಪಚುನಾವಣೆ ನಡೆಯಲಿದೆ.


ನವದೆಹಲಿ (ಅ.15):  ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ. ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಸಮಿತಿ ತಿಳಿಸಿದೆ. ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಾದ ಶಿಗ್ಗಾಂವಿ, ಸಂಡೂರು ಹಾಗೂ ಚೆನ್ನಪಟ್ಟಣ ಕ್ಷೇತ್ರಗಳಿಗೂ ಉಪಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ. ನವೆಂಬರ್ 13 ರಂದು ಈ ಮೂರೂ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ತಿಳಿಸಿದೆ. ಮಹಾರಾಷ್ಟ್ರದ ಎಲ್ಲಾ 288 ವಿಧಾನಸಭಾ ಕ್ಷೇತ್ರಗಳಿದ್ದರೆ, ಜಾರ್ಖಂಡ್‌ನಲ್ಲಿ 81 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಅವರ ಶಿವಸೇನೆ, ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಒಳಗೊಂಡಿರುವ ಆಡಳಿತಾರೂಢ ಮಹಾಯುತಿ  ಮೈತ್ರಿಕೂಟವು ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ( ಅನ್ನು ಒಳಗೊಂಡಿರುವ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ವಿರುದ್ಧ ಸ್ಪರ್ಧಿಸಲಿದೆ. 

2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಒಟ್ಟು 288 ವಿಧಾನಸಭಾ ಸ್ಥಾನಗಳಲ್ಲಿ 105 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಮೈತ್ರಿಕೂಟದ ಪಾಲುದಾರ ಶಿವಸೇನೆ 56 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ-ಶಿವಸೇನೆ ಮೈತ್ರಿಕೂಟ ಸರ್ಕಾರ ರಚಿಸಲು ಅನುಕೂಲಕರ ಬಹುಮತವನ್ನು ಹೊಂದಿತ್ತು.

Tap to resize

Latest Videos

ಆದರೆ, ಮುಖ್ಯಮಂತ್ರಿ ಸ್ಥಾನದ ಮೇಲಿನ ಅಧಿಕಾರದ ಹೋರಾಟವು ಎರಡು ಪಕ್ಷಗಳ ನಡುವೆ ವಿಭಜನೆಗೆ ಕಾರಣವಾಯಿತು. ಮಹಾ ವಿಕಾಸ್ ಅಘಾಡಿ (MVA) ಮೈತ್ರಿಯ ಅಡಿಯಲ್ಲಿ ಶಿವಸೇನೆ ಅಂತಿಮವಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP) ಮತ್ತು ಕಾಂಗ್ರೆಸ್‌ನೊಂದಿಗೆ ಸರ್ಕಾರವನ್ನು ರಚಿಸಿತು. ಶಿವಸೇನೆಯಿಂದ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದರು.

ಜಾರ್ಖಂಡ್‌ ವಿಧಾನಸಭೆ ಚುನಾವಣೆ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್‌ನಲ್ಲಿರುವ ಪಕ್ಷವಾದ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸಲು ಬಿಜೆಪಿ ಹೋರಾಟ ನಡೆಸಲಿದೆ. 2019 ರ ಜಾರ್ಖಂಡ್ ಅಸೆಂಬ್ಲಿ ಚುನಾವಣೆಯಲ್ಲಿ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಒಳಗೊಂಡ ಜೆಎಂಎಂ ನೇತೃತ್ವದ ಮೈತ್ರಿಯು ವಿಧಾನಸಭೆಯ 81 ಸ್ಥಾನಗಳಲ್ಲಿ 47 ಸ್ಥಾನಗಳನ್ನು ಗೆದ್ದು ಪ್ರಮುಖ ಗೆಲುವು ಸಾಧಿಸಿತ್ತು.

ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಆಸ್ಪತ್ರೆಗೆ ದಾಖಲು: ಪುತ್ರ ಆದಿತ್ಯ ಹೇಳಿದ್ದೇನು?

ಜೆಎಂಎಂ 30 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಕಾಂಗ್ರೆಸ್ 16 ಸ್ಥಾನಗಳನ್ನು ಮತ್ತು ಆರ್‌ಜೆಡಿ 1 ಸ್ಥಾನವನ್ನು ಗೆದ್ದಿತ್ತು. ಚುನಾವಣೆಗೂ ಮುನ್ನ ಅಧಿಕಾರದಲ್ಲಿದ್ದ ಬಿಜೆಪಿ 25 ಸ್ಥಾನ ಗಳಿಸಿತ್ತು. ಚುನಾವಣೆಯ ನಂತರ ಜೆಎಂಎಂ ನಾಯಕ ಹೇಮಂತ್ ಸೊರೆನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಈ ಬಾರಿ ಹೇಮಂತ್‌ ಸೊರೆನ್‌ ಅಧಿಕಾರ ಉಳಿಸಿಕೊಳ್ಳಲು ಕಠಿಣ ಶ್ರಮ ಪಡಬೇಕಾಗಿದೆ. ಆಪಾದಿತ ಭೂಹಗರಣದ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅವರು ಜೈಲಿಗೂ ಹೋಗಿ ಬಂದಿದ್ದಾರೆ. ಜೈಲಿಗೆ ಹೋದ ಅವಧಿಯಲ್ಲಿ ಈಗ ಬಿಜೆಪಿಯಲ್ಲಿರುವ ಚಂಪೈ ಸೊರೆನ್‌ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಮಹಾರಾಷ್ಟ್ರ ವಿಧಾನಸೌಧದ 3ನೇ ಮಹಡಿಯಿಂದ ಜಿಗಿದು ಉಪಸ್ಪೀಕರ್, ಸಂಸದನಿಂದ ಹೈಡ್ರಾಮಾ!

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವಿವರ

ಚುನಾವಣಾ ಕಾರ್ಯ ಏಕೈಕ ಹಂತ (288 ಕ್ಷೇತ್ರ)
ನೋಟಿಫಿಕೇಶನ್‌ ಅಕ್ಟೋಬರ್‌ 22, ಮಂಗಳವಾರ
ನಾಮಪತ್ರಕ್ಕೆ ಅಂತಿಮ ದಿನ ಅಕ್ಟೋಬರ್‌ 29, ಮಂಗಳವಾರ
ನಾಮಪತ್ರ ಪರಿಶೀಲನೆ ಅಕ್ಟೋಬರ್‌ 30, ಬುಧವಾರ
ನಾಮಪತ್ರ ಹಿಂಪಡೆಯಲು ಕೊನೇ ದಿನ ನವೆಂಬರ್‌ 4, ಸೋಮವಾರ
ಮತದಾನ ನವೆಂಬರ್‌ 20, ಬುಧವಾರ
ಫಲಿತಾಂಶ ನವೆಂಬರ್‌ 23, ಶನಿವಾರ

ಜಾರ್ಖಂಡ್‌ ವಿಧಾನಸಭೆ ಚುನಾವಣೆ ವಿವರ

ಚುನಾವಣಾ ಕಾರ್ಯ ಮೊದಲ ಹಂತ (43 ಕ್ಷೇತ್ರ) 2ನೇ ಹಂತ (38 ಕ್ಷೇತ್ರ)
ನೋಟಿಫಿಕೇಶನ್‌ ಅಕ್ಟೋಬರ್‌ 18, ಶುಕ್ರವಾರ ಅಕ್ಟೋಬರ್‌ 22, ಮಂಗಳವಾರ
ನಾಮಪತ್ರಕ್ಕೆ ಅಂತಿಮ ದಿನ ಅಕ್ಟೋಬರ್‌ 25, ಶುಕ್ರವಾರ ಅಕ್ಟೋಬರ್‌ 29, ಮಂಗಳವಾರ
ನಾಮಪತ್ರ ಪರಿಶೀಲನೆ ಅಕ್ಟೋಬರ್‌ 28, ಸೋಮವಾರ ಅಕ್ಟೋಬರ್‌ 30, ಬುಧವಾರ
ನಾಮಪತ್ರ ವಾಪಾಸ್‌ ಅಕ್ಟೋಬರ್‌ 30, ಬುಧವಾರ ನವೆಂಬರ್‌ 1, ಶುಕ್ರವಾರ
ಮತದಾನ ನವೆಂಬರ್‌ 13, ಬುಧವಾರ ನವೆಂಬರ್‌ 20, ಬುಧವಾರ
ಫಲಿತಾಂಶ ನವೆಂಬರ್‌ 23, ಶನಿವಾರ ನವೆಂಬರ್‌ 23, ಶನಿವಾರ

 

click me!