
ಭಾರತದಲ್ಲಿ ಬಹುತೇಕ ಊರ ಜಾತ್ರೆಗಳು, ಕೃಷಿ ಮೇಳ ಸೇರಿದಂತೆ ವಿವಿಧ ರೀತಿಯ ದೊಡ್ಡ ದೊಡ್ಡ ಮೇಳ ಜಾತ್ರೆಗಳಲ್ಲಿ ನೀವು ಮರಣ ಬಾವಿಯಂತಹ ಸಾಹಸ ಕ್ರೀಡೆಯನ್ನು ನೋಡಿರಬಹುದು. ಇದರಲ್ಲಿ ಕೆಲ ಸ್ಟಂಟ್ ಮಾಸ್ಟರ್‌ಗಳು ಬಾವಿಯಾಕಾರದ ಅಗಲವಾದ ಪ್ರದೇಶದಲ್ಲಿ ಕಬ್ಬಿಣದಿಂದ ನಿರ್ಮಿಸಿದ್ದ ನೇರವಾದ ಗೋಡೆಯ ಮೇಲೆ ಬೈಕ್‌ಗಳನ್ನು ಕಾರುಗಳನ್ನು ಚಲಾಯಿಸುವ ಸಾಹಸ ಮಾಡುವ ಮೂಲಕ ಜನರಿಗೆ ಮನೋರಂಜನೆ ನೀಡುತ್ತಾರೆ. ಹೀಗೆ ಸ್ಟಂಟ್ ಮಾಡುತ್ತಿದ್ದ ವೇಳೆ, ಸ್ಟಂಟ್ ಮಾಸ್ಟರ್ ಒಬ್ಬ ಬೈಕ್ ಮೇಲೆ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಂತಹ ಆಘಾತಕಾರಿ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ವೈರಲ್ ಆಗಿದೆ.
ಚಾಲಕನಿಲ್ಲದಿದ್ದರೂ ಒಂದು ಗಂಟೆ ಓಡಿದ ಬೈಕ್
ಉತ್ತರ ಪ್ರದೇಶದ ಮಹಾರಾಜಗಂಜ್‌ನ ಪಂಚಮುಖಿ ಶಿವ ದೇವಾಲಯದ ಆವರಣದಲ್ಲಿ ಸೋಮವಾರ ಸಂಜೆ ನಡೆದ ಸಾವನ್ ಜಾತ್ರೆಯ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ಆಶ್ಚರ್ಯವೆಂದರೆ ಸವಾರ ಬೈಕ್‌ನಿಂದ ಬಿದ್ದ ನಂತರವೂ ಮೋಟಾರ್ ಸೈಕಲ್ ಸುಮಾರು ಒಂದು ಗಂಟೆಗಳ ಕಾಲ ಚಾಲಕನಿಲ್ಲದೆ ಬಾವಿಯ ಲಂಬವಾದ ಗೋಡೆಗಳ ಮೇಲೆ ಅತಿ ವೇಗದಲ್ಲಿ ಸುತ್ತುತ್ತಲೇ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದು, ಬಾವಿಯ ಗೋಡೆಗಳ ಉದ್ದಕ್ಕೂ ಬೈಕ್ ಓಡುತ್ತಿರುವುದು ಕಾಣುತ್ತಿದ್ದು, ಇದರ ಜೊತೆಗೆ ಮರಣ ಬಾವಿಯ ಹೊಂಡದಲ್ಲಿ ಎರಡು ಕಾರುಗಳು, ಒಂದು ಬೈಕ್ ಮತ್ತು ಕೆಲವು ಜನರು ಇರುವುದನ್ನು ವೀಡಿಯೋದಲ್ಲಿ ನೋಡಬಹುದು. ಇತ್ತ ಬೈಕ್‌ನಿಂದ ಬಿದ್ದ ಸ್ಟಂಟ್ ಮ್ಯಾನ್ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಆತ ಸುರಕ್ಷತಾ ನಿಯಮಗಳನ್ನು ಕೂಡ ಫಾಲೋ ಮಾಡಿರಲಿಲ್ಲ, ತಲೆಗೆ ಹೆಲ್ಮೆಟ್ ಕೂಡ ಧರಿಸಿರಲಿಲ್ಲ ಎಂದು ವರದಿಯಾಗಿದೆ. ಜುಲೈ 28ರಂದು ಈ ಘಟನೆ ನಡೆದಿದೆ.
ಈ ಮರಣಬಾವಿ ನಡೆಸುವವರು ಸರಿಯಾದ ಅನುಮತಿಯನ್ನು ಪಡೆದಿರಲಿಲ್ಲ ಎಂದು ಸ್ಥಳೀಯಾಡಳಿತ ಹೇಳಿದೆ. ಈ ಮರಣ ಬಾವಿಯನ್ನು ಹಿಂದಿಯಲ್ಲಿ ಮೌತ್ ಕಾ ಕುಂವಾ ಎಂದು ಕರೆಯಲಾಗುತ್ತದೆ. ಇಂಗ್ಲೀಷ್‌ನಲ್ಲಿ ಡೆತ್ ಆಫ್ ವೆಲ್ ಎಂದು ಕರೆಯಲ್ಪಡುವ ಈ ಸಾಹಸ ಕ್ರೀಡೆಯೂ ಭಾರತದಲ್ಲಿ 1950 ಹಾಗೂ 60ರ ಸಮಯದಲ್ಲಿ ಆರಂಭವಾಯ್ತು. ಅಮೆರಿಕಾ ಮೂಲದ ಈ ಸಾಹಸ ಕ್ರೀಡೆ ಮೊದಲು ಆರಂಭವಾಗಿದ್ದು, 1900ರಲ್ಲಿ. ಇತಿಹಾಸದಲ್ಲಿ ದಾಖಲಾಗಿರುವ ಮಾಹಿತಿಯಂತೆ ಆರಂಭದ ದಿನಗಳಲ್ಲಿ ಈ ಮರಣ ಬಾವಿಯಲ್ಲಿ ಕೇವಲ ಸೈಕಲನ್ನು ಮಾತ್ರ ಓಡಿಸಲಾಗುತ್ತಿತ್ತು. ನಂತರದಲ್ಲಿ ಬೈಕ್ ಹಾಗೂ ಇನ್ನು ಸ್ವಲ್ಪ ಕಾಲ ಮುಂದುವರೆದಂತೆ ಬೈಕನ್ನು ಬಳಸಲಾಗುತ್ತಿತ್ತು.
ಜನರಿರುವಾಗಲೇ ಮುರಿದು ಬಿದ್ದ 360 ಡಿಗ್ರಿ ರೈಡ್ ಮೆಷಿನ್
ಜಾತ್ರೆಗಳಲ್ಲಿ ಮನೋರಂಜನೆ ಪಾರ್ಕ್‌ಗಳಲ್ಲಿ ಈ ರೀತಿಯ ಅವಘಡಗಳು ಸಂಭವಿಸುವುದು ಹೊಸದೇನಲ್ಲ, ಕೆಲದಿನಗಳ ಹಿಂದಷ್ಟೇ ಸೌದಿ ಅರೇಬಿಯಾದ ತೈಫ್‌ನಲ್ಲಿರುವ ಮನೋರಂಜನಾ ಪಾರ್ಕ್‌ನಲ್ಲಿ 360 ಡಿಗ್ರಿ ಎಂದು ಕರೆಯಲ್ಪಡುವ ಸಾಹಸಿ ಕ್ರೀಡೆಯೊಂದರ ಸಾಧನವೂ ಅದರಲ್ಲಿ ಜನರು ಸವಾರಿ ಮಾಡುತ್ತಿರುವಾಗಲೇ ಅರ್ಧದಿಂದ ಕುಸಿದು ಬಿದ್ದು 23 ಜನ ಗಾಯಗೊಂಡಂತಹ ಘಟನೆ ನಡೆದಿತ್ತು. ಅದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಅಲ್ಲಿನ ಖಲೀಜ್ ಟೈಮ್ಸ್ ವರದಿಯ ಪ್ರಕಾರ, ಗುರುವಾರ ತೈಫ್‌ನ ಅಲ್ ಹಡಾ ಪ್ರದೇಶದ ಗ್ರೀನ್ ಮೌಂಟೇನ್ ಪಾರ್ಕ್‌ನಲ್ಲಿ ಈ ಘಟನೆ ಸಂಭವಿಸಿತ್ತು.
360 ಎಂದು ಕರೆಯಲ್ಪಡುವ ರೋಮಾಂಚಕ ಸವಾರಿ ಯಂತ್ರವೊಂದು ಅರ್ಧದಿಂದ ತುಂಡಾಗಿ ಬಿದ್ದಿದೆ. ಈ ಘಟನೆ ಕ್ಯಾಮರಾಗಳಲ್ಲಿ ಸೆರೆ ಆಗಿದ್ದು, ಈ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ, ಈ ಮೋಜಿನ ರೈಡ್‌ನ ಕಂಬವು ಅತಿ ವೇಗದಲ್ಲಿ ಹಿಂದಕ್ಕೆ ಸರಿದು, ಎದುರು ಬದಿಯಲ್ಲಿ ನಿಂತಿದ್ದ ಕೆಲವು ವ್ಯಕ್ತಿಗಳಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಲ್ಲಿದ್ದ ಕೆಲವರು ಗಾಯಗೊಂಡಿದ್ದಾರೆ. ಜೊತೆಗೆ ಮುರಿದು ಬಿದ್ದಾಗ ಇನ್ನೂ ಕುಳಿತಿದ್ದ ಅದರಲ್ಲಿ ಕುಳಿತಿದ್ದ ಕೆಲವರು ಗಾಯಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ