
ಪ್ರಯಾಗರಾಜ್(ಜ.29) ವಿಶ್ವದ ಅತೀ ದೊಡ್ಡ ಧಾರ್ಮಿಕ ಹಬ್ಬ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿಕ ಪ್ರಕರಣದಲ್ಲಿ 40ಕ್ಕೂ ಹೆಚ್ತು ಭಕ್ತರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಈ ಪೈಕಿ 10 ಮಂದಿ ಮೃತಪಟ್ಟಿರುವುದಾಗಿ ಮೂಲಗಳು ವರದಿ ಮಾಡಿದೆ. ಘಟನೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಇದೀಗ ಮೋದಿ ಪರಿಸ್ಥಿತಿಯನ್ನು ನಿರಂತರವಾಗಿ ಅವಲೋಕಿಸುತ್ತಿದ್ದಾರೆ. ಇತ್ತ ಸಿಎಂ ಯೋಗಿ ಆದಿತ್ಯನಾಥ್ ಭಕ್ತರಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಎಲ್ಲರೂ ಸಂಗಮ ಬಳಿ ಅಮೃತಸ್ನಾನಕ್ಕೆ ಪ್ರಯತ್ನಿಸಬೇಡಿ, ಎಲ್ಲಿದ್ದೀರೋ ಅಲ್ಲೇ ವ್ಯವಸ್ಥೆ ಮಾಡಿರುವ ಸ್ನಾನ ಘಟ್ಟದಲ್ಲಿ ಪುಣ್ಯಸ್ನಾನ ಮಾಡಲು ಮನವಿ ಮಾಡಿದ್ದಾರೆ. ಇದೇ ವೇಳೆ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಮಹಾಕುಂಭ ಮೇಳದಲ್ಲಿ ಆಡಳಿತ ಮಂಡಳಿ ನೀಡುವ ಸೂಚನೆಯನ್ನು ಪಾಲಿಸಿ, ತ್ರಿವೇಣಿ ಸಂಗಮದ ಬಳಿ ಬಂದು ಸ್ನಾನ ಮಾಡುವ ಸಾಹಸ ಮಾಡಬೇಡಿ. ಪುಣ್ಯಸ್ನಾನಕ್ಕೆ ಹಲವು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಆತುರ ಬೇಡ, ಎಲ್ಲಾ ಭಕ್ತರಿಗೂ ಅಮೃತ ಸ್ನಾನಕ್ಕೆ ಅವಕಾಶವಿದೆ ಎಂದು ಯೋಗಿ ಆದಿತ್ಯನಾಥ್ ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಮಹಾಕುಂಭ ಮೇಳದ ಕಾಲ್ತುಳಿತ ಪರಿಸ್ಥಿತಿ ನಿಯಂತ್ರಣ, ಸಾಧುಗಳಿಂದ ಅಮೃತ ಸ್ನಾನ ರದ್ದು!
ಇತ್ತ ಯೋಗಿ ಆದಿತ್ಯನಾಥ್ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಇಂದು ಮೌನಿ ಅಮವಾಸ್ಯೆ ಹಿನ್ನಲೆಯಲ್ಲಿ 10 ಕೋಟಿ ಭಕ್ಕರು ಪುಣ್ಯಸ್ನಾನ ಮಾಡುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ಈಗಾಗಲೇ ಸುಮಾರು 5 ಕೋಟಿ ಮಂದಿ ಪುಣ್ಯಸ್ನಾನ ಮಾಡಿದ್ದಾರೆ. ಭಾರಿ ಸಂಖ್ಯೆಯಲ್ಲಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನಕ್ಕೆ ಧಾವಿಸಿದ ಕಾರಣ ಕಾಲ್ತುಳಿತ ಸಂಭವಿಸಿದೆ. ಗಾಯಾಳುಗಳ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೂರು ಬಾರಿ ಯೋಗಿ ಆದಿತ್ಯನಾಥ್ ಜೊತೆ ಫೋನ್ ಮೂಲಕ ಮಾತನಾಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ಸೂಚಿಸಿದ್ದಾರೆ. ಸಂಪೂರ್ಣ ಪರಿಸ್ಥಿತಿಯನ್ನು ಮೋದಿ ನಿರಂತರ ಅವಲೋಕಿಸುತ್ತಿದ್ದಾರೆ.
ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದ ನಂತರ ಜಗದ್ಗುರು ಸ್ವಾಮಿ ರಾಂಭದ್ರಾಚಾರ್ಯರು ಬುಧವಾರ ಭಕ್ತರಿಗೆ ಸಂಗಮ ಘಾಟ್‌ನಲ್ಲಿ ಪುಣ್ಯಸ್ನಾನಕ್ಕೆ ಪಟ್ಟು ಹಿಡಿಯಬೇಡಿ. ಇಂದು ಭಕ್ತರ ಸಂಖ್ಯೆ ಹೆಚ್ಚಿದೆ. ಹೀಗಾಗಿ ನೀವಿರುವ ಹತ್ತಿದ ಘಾಟ್‌ನಲ್ಲಿ ಸ್ನಾನ ಮಾಡಲು ರಾಂಭದ್ರಾಚಾರ್ಯರು ಮನವಿ ಮಾಡಿದ್ದಾರೆ. ಇದೇ ವೇಳೆ ಎಲ್ಲೂ ಕೂಡ ದಾವಂತ ಬೇಡ. ಕ್ಯಾಂಪ್‌ನಿಂದ ಬೇಗನೆ ಹೊರಹೋಗುವ ಪ್ರಯತ್ನ ಮಾಡಬೇಡಿ. ಶಾಂತವಾಗಿ ನಿಯಮ ಪಾಲಿಸಿ ಎಂದು ಮನವಿ ಮಾಡಿದ್ದಾರೆ.
ಈ ಸಮಯದಲ್ಲಿ ಇಡೀ ಗಂಗಾ ಮತ್ತು ಯಮುನಾ ಅಮೃತ
ಆಧ್ಯಾತ್ಮಿಕ ಗುರು ದೇವಕಿನಂದನ್ ಠಾಕೂರ್ ಜನರಿಗೆ ಕೇವಲ ಸಂಗಮ ಘಾಟ್‌ನಲ್ಲಿ ಸ್ನಾನ ಮಾಡುವುದರ ಬಗ್ಗೆ ಒತ್ತಾಯಿಸದಿರಲು ಮನವಿ ಮಾಡಿದರು. ಬದಲಾಗಿ ಗಂಗಾ ಮತ್ತು ಯಮುನಾದಲ್ಲಿ ಎಲ್ಲಿ ಬೇಕಾದರೂ ಸ್ನಾನ ಮಾಡಿ "ನಾನು ಸಂಗಮ ಘಾಟ್‌ಗೆ ಹೋಗಲಿಲ್ಲ ಏಕೆಂದರೆ ಅಲ್ಲಿ ಜನಸಂದಣಿ ತುಂಬಾ ಹೆಚ್ಚಿತ್ತು. ಜನರು ಕೇವಲ ಸಂಗಮ ಘಾಟ್‌ನಲ್ಲಿ ಸ್ನಾನ ಮಾಡುವುದರ ಬಗ್ಗೆ ಒತ್ತಾಯಿಸದಿರಲು ನಾನು ಮನವಿ ಮಾಡುತ್ತೇನೆ. ಇಡೀ ಗಂಗಾ ಮತ್ತು ಯಮುನಾ ನದಿ ಈ ಸಮಯದಲ್ಲಿ 'ಅಮೃತ ಎಂದಿದ್ದಾರೆ.
ಲಂಡನ್‌ಗಿಂತ ದುಬಾರಿ ಮಹಾಕುಂಭ ಮೇಳ ಪ್ರಯಾಣ, ಬೆಂಗಳೂರಿನಿಂದ ವಿಮಾನ ದರ ಎಷ್ಟು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ