ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಅಘೋರಿ ಬಾಬಾರೊಬ್ಬರು ಮುಕ್ತಿ ಪಡೆದಿದ್ದು, ಅವರ ಅಂತಿಮ ಕ್ಷಣಗಳ ವೀಡಿಯೋವನ್ನು ಇನ್‌ಫ್ಲುಯೆನ್ಸರ್ ಒಬ್ಬರು ಸೋಶಿಯಲ್ ಮೀಡಿಯಾಗೆ ಹಾಕಿದ್ದು ವೈರಲ್ ಆಗಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಸಾಕಷ್ಟು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಕೂಡ ಕುಂಭ ಮೇಳದಲ್ಲಿ ಬೀಡುಬಿಟ್ಟಿದ್ದು, ಜಗತ್ತಿಗೆ ಕುಂಭ ಮೇಳದ ಅದ್ಭುತಲೋಕವನ್ನು ಸಣ್ಣ ಸಣ್ಣ ವೀಡಿಯೋಗಳ ಮೂಲಕ ತರೆದಿಡುತ್ತಿದ್ದಾರೆ. ಅದೇ ರೀತಿ ಈಗ ಕುಂಭ ಮೇಳದ ವೀಡಿಯೋವೊಂದು ವೈರಲ್ ಆಗಿದ್ದು, ಕುಂಭ ಮೇಳಕ್ಕೆ ಬಂದ ಬಾಬಾ ಅಲ್ಲೇ ಮುಕ್ತಿ ಕಂಡಿದ್ದಾರೆ ಎಂದು ಹೇಳಲಾಗುತ್ತಿರುವ ವೀಡಿಯೋವೊಂದು ಈಗ ವೈರಲ್ ಆಗುತ್ತಿದೆ.
144 ವರ್ಷ ನಂತರ ಬಂಧ ಕುಂಭ ಮೇಳದಲ್ಲಿ ಈಗಾಗಲೇ ಕೋಟ್ಯಾಂತರ ಜನ ಪುಣ್ಯಸ್ನಾನ ಮಾಡಿದ್ದಾರೆ. ಗಂಗಾ ನದಿಯ ತಟದಲ್ಲಿ ನಡೆಯುತ್ತಿರುವ ಜಗತ್ತಿನ ಅತೀ ದೊಡ್ಡ ಧಾರ್ಮಿಕ ಸಮಾಗಮವೆನಿಸಿರುವ ಈ ಕುಂಭ ಮೇಳದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು, ಶ್ರೀಮಂತ ಉದ್ಯಮಿಗಳು, ಕ್ರೀಡಾಲೋಕದ ತಾರೆಯರು ಹೀಗೆ ಈಗಾಗಲೇ ಭಾರತ ಮಾತ್ರವಲ್ಲದೇ ಜಗತ್ತಿನ ಬೇರೆ ಬೇರೆ ದೇಶಗಳ ಜನ ಆಗಮಿಸಿ ಪುಣ್ಯಸ್ನಾನ ಮಾಡಿದ್ದಾರೆ. ಜೀವನ್ಮುಕ್ತಿ, ಹಾಗೂ ಪಾಪಕರ್ಮಗಳ ಕಳೆದು ಮೋಕ್ಷಪ್ರಾಪ್ತಿಗಾಗಿ ಜನ ಇಲ್ಲಿಗೆ ಬಂದು ಪುಣ್ಯ ಸ್ನಾನ ಮಾಡಿ ಪಾವನರಾಗುತ್ತಿದ್ದಾರೆ.
ಇಲ್ಲಿ ಅಘೋರಿ ಸಾಧುಗಳು ಸೇರಿದಂತೆ ವಿವಿಧ ಸಮುದಾಯದ ಸಾಧುಗಳ ಟೆಂಟ್‌ಗಳಿದ್ದು, ಧಾರ್ಮಿಕ ಪ್ರವಚನಗಳು ನಡೆಯುತ್ತಿರುತ್ತವೆ. ಹೀಗಿರುವಾಗ ಒಬ್ಬರು ಬಾಬಾ ಇಲ್ಲೇ ಜೀವನ್ಮುಕ್ತಿ ಹೊಂದಿದ್ದಾರೆ. ಕುಂಭಮೇಳದ ಟೆಂಟ್‌ನಲ್ಲಿ ಬಾಬಾರೊಬ್ಬರು ಮುಕ್ತಿ ಪಡೆದಿದ್ದು, ಅವರ ಅಂತಿಮ ಕ್ಷಣಗಳ ವೀಡಿಯೋವನ್ನು ಇನ್‌ಫ್ಲುಯೆನ್ಸರ್ ಒಬ್ಬರು ಸೋಶಿಯಲ್ ಮೀಡಿಯಾಗೆ ಹಾಕಿದ್ದು, ವೈರಲ್ ಆಗಿದೆ. ಮಯಾಂಕ್ ಸಿಂಗ್ ಎಂಬುವವರು ಇನ್ಸ್ಟಾದಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದು, ವೀಡಿಯೋ ನೋಡಿದ ಅನೇಕರು ಬಾಬಾನಾ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಆದರೆ ಈ ಅಘೋರಿ ಬಾಬಾ ಎಲ್ಲಿಯವರು ಅವರ ಹೆಸರೇನು ಎಂಬ ಬಗ್ಗೆ ಈ ವೀಡಿಯೋದಲ್ಲಿ ಮಾಹಿತಿ ಇಲ್ಲ.
ಹಾಗೆಯೇ ಮಯಾಂಕ್ ಸಿಂಗ್ ಅವರ ಇನ್ಸ್ಟಾಗ್ರಾಮ್‌ನಲ್ಲಿ ಕುಂಭಮೇಳದ ಹಲವು ರೋಚಕ ವೀಡಿಯೋಗಳಿದ್ದು, ಒಂದೊಂದು ವೀಡಿಯೋಗಳು ಒಂದೊಂದು ಕತೆ ಹೇಳುತ್ತಿವೆ.