ಅಮರನಾಥ ಯಾತ್ರೆ ದಾಳಿಗೆ ಪಾಕ್‌ನ ಮ್ಯಾಗ್ನೆಟಿಕ್‌ ಬಾಂಬ್‌, ಸಂಚು ವಿಫಲ!

Published : May 30, 2022, 06:19 AM IST
ಅಮರನಾಥ ಯಾತ್ರೆ ದಾಳಿಗೆ ಪಾಕ್‌ನ ಮ್ಯಾಗ್ನೆಟಿಕ್‌ ಬಾಂಬ್‌, ಸಂಚು ವಿಫಲ!

ಸಾರಾಂಶ

* ಬಾಂಬ್‌, ಗ್ರೆನೇಡ್‌ ಹೊತ್ತುತಂದಿದ್ದ ಡ್ರೋನ್‌ ಧ್ವಂಸ * ಅಮರನಾಥ ಯಾತ್ರೆ ದಾಳಿಗೆ ಪಾಕ್‌ನ ಮ್ಯಾಗ್ನೆಟಿಕ್‌ ಬಾಂಬ್‌  

ಜಮ್ಮು(ಮೇ.30): ಅಮರನಾಥ ಯಾತ್ರೆ ಮೇಲೆ ದಾಳಿಗೆ ಪಾಕಿಸ್ತಾನ ನಡೆಸಿದ್ದ ದೊಡ್ಡ ಸಂಚೊಂದನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾನುವಾರ ವಿಫಲಗೊಳಿಸಿದ್ದಾರೆ. ಪಾಕ್‌ನಿಂದ ಮ್ಯಾಗ್ನೆಟಿಕ್‌ ಬಾಂಬ್‌ ಹಾಗೂ ಗ್ರೆನೇಡ್‌ಗಳನ್ನು ಹೊತ್ತು ತಂದ ಡ್ರೋನ್‌ ಒಂದನ್ನು ಭಾನುವಾರ ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಹೊಡೆದುರುಳಿಸಲಾಗಿದೆ. ಅಮರನಾಥ ಯಾತ್ರೆ ಸೋಮವಾರದಿಂದ ಆರಂಭವಾಗಲಿದ್ದು, ಇದಕ್ಕೂ ಮುನ್ನ ಈ ಘಟನೆ ನಡೆದಿದೆ.

ಭಾನುವಾರ ಬೆಳಗ್ಗೆ ಹರಿಯಾ ಚಾಕ್‌ ಪ್ರದೇಶದಲ್ಲಿ ಡ್ರೋನ್‌ ಹಾರಿ ಬರುತ್ತಿರುವುದನ್ನು ಪೊಲೀಸ್‌ ಶೋಧ ತಂಡಗಳು ಗಮನಿಸಿವೆ. ಕೂಡಲೇ ಅದರತ್ತ ನೆಲದಿಂದಲೇ ಫೈರಿಂಗ್‌ ಮಾಡಲಾಯಿತು. ಆಗ ಅದು ಕೆಳಗೆ ಬಿತ್ತು. ಅದರಲ್ಲಿ 7 ಮ್ಯಾಗ್ನೆಟಿಕ್‌ ಬಾಂಬ್‌ಗಳು, 7 ಗ್ರೆನೇಡ್‌ಗಳು ಪತ್ತೆಯಾಗಿವೆ. ಡ್ರೋನ್‌ಗೆ ಅಳವಡಿಸಲಾಗಿರುವ ಬ್ಯಾಟರಿಗಳ ಮೇಲೆ ಚೀನಿ ಭಾಷೆಯಲ್ಲಿ ಮುದ್ರಿತ ಅಕ್ಷರಗಳಿದ್ದು, ಅದನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಮ್ಯಾಗ್ನೆಟಿಕ್‌ ಬಾಂಬ್‌?

ಇದನ್ನು ಸ್ಟಿಕ್ಕಿ ಬಾಂಬ್‌ ಎಂದು ಕರೆಯಲಾಗುತ್ತದೆ. ಗಾತ್ರದಲ್ಲಿ ಸಣ್ಣದಾಗಿರುವ ಇವುಗಳನ್ನು ಯಾವುದೇ ದೊಡ್ಡ ವಾಹನದ ಹಿಂದೆ ನಿಂತು ಕೆಲವೇ ಕ್ಷಣಗಳಲ್ಲಿ ಬಾಂಬ್‌ ಅನ್ನು ಅಂಟಿಸಿ ಹೋಗಬಹುದು. ಬಳಿಕ ದೂರದಿಂದಲೇ ರಿಮೋಟ್‌ ಕಂಟ್ರೋಲ್‌ ಮೂಲಕ ಸ್ಫೋಟ ನಡೆಸಬಹುದು. ಇದರಲ್ಲಿ ಬಾಂಬ್‌ ಇಡುವವರು ಸಿಕ್ಕಿಬೀಳುವ, ದಾಳಿಯಲ್ಲಿ ಗಾಯಗೊಳ್ಳುವ ಅಪಾಯವೂ ಇರದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಬಾನಿ ಅಳಿಯನಿಗೆ ಯಾಕೆ ಬಂತು ಇಂಥಾ ಸ್ಥಿತಿ, ಶ್ರೀರಾಮ್‌ ಲೈಫ್‌ ಇನ್ಶುರೆನ್ಸ್‌ ಪಾಲು ಮಾರಾಟಕ್ಕೆ ನಿರ್ಧಾರ!
ಟಾಟಾದ ತಾಜ್‌, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್‌ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!