ಮಾಫಿಯಾ , ಕ್ರಿಮಿನಲ್ಸ್ ಕೆಮ್ಮಿದ್ರೆ...ಸರಣಿ ಎನ್‌ಕೌಂಟರ್ ಬಳಿಕ ಯೋಗಿ ಮತ್ತೊಂದು ವಾರ್ನಿಂಗ್!

By Suvarna NewsFirst Published Apr 18, 2023, 3:31 PM IST
Highlights

ಉತ್ತರ ಪ್ರದೇಶದಲ್ಲಿ ಸತತ ಎನ್‌ಕೌಂಟರ್ ಮೂಲಕ ಗ್ಯಾಂಗ್‌ಸ್ಟರ್, ಮಾಫಿಯಾ ಡಾನ್‌ಗಳನ್ನು ಮಟ್ಟಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ಹತ್ಯೆ ಬಳಿಕ ಕೋಲಾಹಲಕ್ಕೆ ಕಾರಣವಾಗಿರುವ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಮತ್ತೆ ಯೋಗಿ ಎಚ್ಚರಿಕೆಗೆ ಯುಪಿ ಸೈಲೆಂಟ್ ಆಗಿದೆ.
 

ಲಖನೌ(ಏ.18): ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ಹಾಗೂ ಸಹೋದರ ಅಶ್ರಫ್ ಪೊಲೀಸ್ ಕಸ್ಟಡಿಯಲ್ಲೇ ಹತ್ಯೆಯಾದ ಬಳಿಕ ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಮತ್ತೆ ಚರ್ಚೆಯಲ್ಲಿದೆ. ಆದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಖಡಕ್ ಸೂಚನೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾಫಿಯಾ, ಗ್ಯಾಂಗ್‌ಸ್ಟರ್ಸ್, ಕ್ರಿಮಿನಲ್ಸ್ ಸಂಪೂರ್ಣವಾಗಿ ಮಟ್ಟಹಾಕುವುದಾಗಿ ಈಗಾಗಲೇ ಯೋಗಿ ಭರವಸೆ ನೀಡಿದ್ದಾರೆ. ಇದರಂತೆ ಉಮೇಶ್ ಪಾಲ್ ಕೊಲೆ ಪ್ರಕರಣದ ಪ್ರಮುಖ 8 ಆರೋಪಿಗಳ ಪೈಕಿ ಈಗಾಗಲೇ 6 ಮಂದಿಯನ್ನು ಎನ್‌ಕೌಂಟರ್ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಇದೀಗ ಮತ್ತೊಂದು ಎಚ್ಚರಿಕೆ ನೀಡಿದೆ. ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ಸ್, ಗ್ಯಾಂಗ್‌ಸ್ಟರ್ಸ್, ಮಾಫಿಯಾ ಡಾನ್ ಯಾರೊಬ್ಬರಿಗೆ ಬೆದರಿಕೆಗೆ ಹಾಕಿದರೆ ಕತೆ ಮುಗಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಮಾಫಿಯಾ, ಗ್ಯಾಂಗ್‌ಸ್ಟರ್ಸ್, ಕ್ರಿಮಿನಲ್ಸ್ ಮಟ್ಟಹಾಕಲು ಎಲ್ಲಾ ಕ್ರಮಕೈಗೊಳ್ಳಲಾಗಿದೆ. ಎನ್‌ಕೌಂಟರ್ ಮೂಲಕವೇ ಮಾಫಿಯಾ ಕತೆ ಮುಗಿಸಿದ್ದೇವೆ. ಇದರ ಹೊರತಾಗಿ ಯಾರಾದರೂ ಕ್ರಿಮಿನಲ್ಸ್, ಮಾಫಿಯಾ ಡಾನ್‌ಗಳು, ಗ್ಯಾಂಗ್‌ಸ್ಟರ್ಸ್ ಬೆದರಿಕೆ ಹಾಕುವುದು, ವಸೂಲಿ ಮಾಡುವುದು, ದರೋಡೆ ಮಾಡಲು ಇಳಿದರೆ ಅಷ್ಟೇ ಎಂದು ಯೋಗಿ ಆದಿತ್ಯನಾಥ್ ವಾರ್ನಿಂಗ್ ನೀಡಿದ್ದಾರೆ. ಈ ಮೂಲಕ ಕ್ರಿಮಿನಲ್ಸ್‌ಗಳು ಅಟ್ಟಹಾಸ ಮೆರೆಯಲು ಆರಂಭಿಸಿದರೆ ಎನ್‌ಕೌಂಟರ್ ಮಾಡಿ ಮುಗಿಸುತ್ತೇವೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

Latest Videos

ಮೇ.4ರಂದು ಉಡುಪಿಗೆ ಮಾಫಿಯಾ ಮಟ್ಟಹಾಕಿದ ಯೋಗಿ ಆದಿತ್ಯನಾಥ್, ಭಾರಿ ಬಿಗಿ ಭದ್ರತೆ!

ಉತ್ತರ ಪ್ರದೇಶದಲ್ಲಿ ಮಾಫಿಯಾ, ಗ್ಯಾಂಗ್‌ಸ್ಟರ್ಸ್ ಯಾರಿಗೂ ಬೆದರಿಕೆ ಹಾಕಲ್ಲ. ಹಾಕುವ ಧೈರ್ಯ ಮಾಡಿದರೆ ಉಳಿಸಲ್ಲ ಎಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣಣವಾಗಿ ಸುಧಾರಿಸಿದೆ. 2017ರಕ್ಕಿಂತ ಮೊದಲು ಯುಪಿಯಲ್ಲಿನ ಪರಿಸ್ಥಿತಿ ಊಹಿಸಿಕೊಳ್ಳಿ. ಈಗ ಹೇಗೆದೆ ಅನ್ನೋದನ್ನು ದಾಖಲೆ, ಅಂಕಿ ಅಂಶಗಳ ಮೂಲಕ ಪರಿಶೀಲಿಸಿದರೆ ಎಲ್ಲವೂ ಅರಿವಾಗುತ್ತದೆ ಎಂದಿದ್ದಾರೆ. 2017ರಿಂದ 2023ರ ವರೆಗೆ ಉತ್ತರ ಪ್ರದೇಶದಲ್ಲಿ ಯಾವುದೇ ಗಲಭೆಗೆ ಅವಕಾಶ ನೀಡಿಲ್ಲ. ಕರ್ಫ್ಯೂ ಹೇರಿಲ್ಲ. ಉದ್ಯಮಿಗಳನ್ನು ಬೆದರಿಸಿ ಸುಲಿಗೆ ಮಾಡುವ ಕಾಲ ಈಗ ಬದಲಾಗಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹತ್ಯೆ ಹಿನ್ನೆಲೆಯಲ್ಲಿ ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆದೇಶಿಸಿದ್ದಾರೆ. ನಿವೃತ್ತ ನ್ಯಾಯಾಧೀಶ ನ್ಯಾ ಅರವಿಂದ ತ್ರಿಪಾಠಿ ಅವರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಲಾಗಿದ್ದು, 2 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಆಯೋಗಕ್ಕೆ ಸೂಚಿಸಲಾಗಿದೆ. ನಿವೃತ್ತ ಜಿಲ್ಲಾ ಜಡ್ಜ್‌ ಬ್ರಿಜೇಶ್‌ ಕುಮಾರ್‌ ಸೋಣಿ, ಮಾಜಿ ಡಿಜಿಪಿ ಸು¸ಕುಮಾರ್‌ ಸಮಿತಿಯ ಇತರೆ ಸದಸ್ಯರಾಗಿರಲಿದ್ದಾರೆ.

ಕರ್ನಾಟಕದಲ್ಲಿ ಆಶ್ರಯ ಪಡೆದಿರುವ ಅತೀಕ್ ಗ್ಯಾಂಗ್‌ನ ಗುಡ್ಡು ಮುಸ್ಲಿಮ್, ಟವರ್ ಲೋಕೇಶ್ ಪತ್ತೆ!

ಗ್ಯಾಂಗ್‌ಸ್ಟರ್‌ ಹಾಗೂ ಸಮಾಜವಾದಿ ಪಾರ್ಟಿ ಮಾಜಿ ಧುರೀಣ ಅತೀಕ್‌ ಅಹ್ಮದ್‌ ಹಾಗೂ ಆತನ ಸೋದರನ ಹತ್ಯೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಾದ್ಯಂತ ಕಟ್ಟೆಚ್ಚರ ಸಾರಲಾಗಿದೆ. ವಿಶೇಷವಾಗಿ ಧಾರ್ಮಿಕ ಸ್ಥಳಗಳಾದ ವಾರಾಣಸಿ, ಅಯೋಧ್ಯಾ, ಮಥುರಾದಲ್ಲಿ ಕೇಂದ್ರೀಯ ಪಡೆಗಳನ್ನು ನಿಯೋಜಿಸಿ ಭದ್ರತೆ ಬಿಗಿಗೊಳಿಸಲಾಗಿದೆ. ಅತೀಕ್ ಹಾಗೂ ಸಹೋದರ ಅಶ್ರಫ್ ಹತ್ಯೆ ಬಳಿಕ ರಾಜ್ಯದ ಎಲ್ಲಾ ಜಿಲ್ಲಾ ಉನ್ನತ ಅಧಿಕಾರಿಗಳೊಂದಿಗೆ ಯೋಗಿ ಆದಿತ್ಯನಾಥ್ ಸಭೆ ನಡೆಸಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳ ಉನ್ನತ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಭೆ ನಡೆಸಿದ್ದಾರೆ. ಪ್ರಯಾಗ್‌ರಾಜ್‌ ಘಟನೆಯ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೂ ವರದಿ ರವಾನಿಸಿದ್ದಾರೆ.

click me!