ಸೆಂಥಿಲ್ ಬಾಲಾಜಿ ಬಿಡುಗಡೆ ಹೆಬಿಯಸ್ ಕಾರ್ಪಸ್ ಅರ್ಜಿ, ಮದ್ರಾಸ್ ಹೈಕೋರ್ಟ್ ವಿಭಜಿತ ತೀರ್ಪು!

Published : Jul 04, 2023, 11:05 AM ISTUpdated : Jul 04, 2023, 11:23 AM IST
ಸೆಂಥಿಲ್ ಬಾಲಾಜಿ ಬಿಡುಗಡೆ ಹೆಬಿಯಸ್ ಕಾರ್ಪಸ್ ಅರ್ಜಿ, ಮದ್ರಾಸ್ ಹೈಕೋರ್ಟ್ ವಿಭಜಿತ ತೀರ್ಪು!

ಸಾರಾಂಶ

ಉದ್ಯೋಗಕ್ಕಾಗಿ ಲಂಚ ಪ್ರಕರಣದಲ್ಲಿ ಅರೆಸ್ಟ್ ಆಗಿ ಭಾರಿ ಹೈಡ್ರಾಮ ಸೃಷ್ಟಿಯಾಗಿ ಸಚಿವ ಸೆಂಥಿಲ್ ಬಾಲಾಜಿ ಪ್ರಕರಣ ಇದೀಗ ಮತ್ತೆ ಕುತೂಹಲಕ ಕೇಂದ್ರ ಬಿಂದುವಾಗಿದೆ. ಸೆಂಥಿಲ್ ಬಿಡುಗಡೆಗಾಗಿ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ವಿಭಿಜಿತ ತೀರ್ಪು ನೀಡಿದೆ.

ಚೆನ್ನೈ(ಜು.04) ಉದ್ಯೋಗಕ್ಕಾಗಿ ಲಂಚ ಪ್ರಕರಣದಲ್ಲಿ ಜೈಲು ಪಾಲಾಗಿರುವ ತಮಿಳುನಾಡಿನ ಸಚಿವ ವಿ.ಸೆಂಥಿಲ್‌ ಬಾಲಾಜಿ ಬಿಡುಗಡಗೆ ಪತ್ನಿ ಎಸ್ ಮೆಗಲಾ ಸಲ್ಲಿಸಿದ್ದ ಹೆಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ವಿಭಜಿತ ತೀರ್ಪು ನೀಡಿದೆ. ಹೀಗಾಗಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶಾನಲಯ ಸಚಿವ ಸೆಂಥಿಲ್ ಅವರನ್ನು ಬಂಧಿಸಿದೆ. ಪತಿಯ ಬಿಡುಗಡೆಗಾಗಿ ಪತ್ನಿ ಮದ್ರಾಸ್ ಹೈಕೋರ್ಟ್‌ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದರೆ ಮದ್ರಾಸ್ ಹೈಕೋರ್ಟ್ ವಿಭಾಗಿಯ ಪೀಠ ಒಮ್ಮತದ ತೀರ್ಪು ನೀಡಿಲ್ಲ. ಹೀಗಾಗಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ.

ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಜೆ ನಿಶಾ ಬಾನು ಹಾಗೂ ಡಿ ಭರತ್ ಚಕ್ರವರ್ತಿ ಇಬ್ಬರು ಬೇರೆ ಬೇರೆ ತೀರ್ಪು ನೀಡಿದ್ದಾರೆ. ಜಸ್ಟೀಸ್ ಭಾನು ಬಿಡುಗಡೆಗೆ ಸೂಚಿಸಿದ್ದರೆ, ಚಕ್ರವರ್ತಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಇದೀಗ ಮೂರನೇ ನ್ಯಾಯಾಧೀಶರು ವಿಚಾರಣೆ ನಡೆಸಲಿದ್ದಾರೆ. ಮೂರನೇ ನ್ಯಾಯಾಧೀಶರ ಆಯ್ಕೆಯನ್ನು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇಮಕ ಮಾಡಲಿದ್ದಾರೆ.

 

ಬಂಧನಕ್ಕೆ ಒಳಪಟ್ಟ ಕೆಲವೇ ಗಂಟೆಗಳಲ್ಲಿ ತಮಿಳುನಾಡು ಸಚಿವನಿಗೆ ತುರ್ತು ಶಸ್ತ್ರಚಿಕಿತ್ಸೆ

ವಿ ಸೆಂಥಿಲ್ ಬಾಲಾಜಿ ಬಿಡುಗಡಗೆ ಪತ್ನಿ ಸಲ್ಲಿಸಿರುವ ಹೆಬಿಯಸ್ ಕಾರ್ಪಸ್ ಅರ್ಜಿ ಮಾನ್ಯವಾಗಿದೆ. ಅರ್ಜಿ ಪುರಸ್ಕರಿಸಿ ಬಿಡುಗಡೆ ತಡೆ ಹಿಡಿಯಲು ಕಾರಣಗಳಿಲ್ಲ ಎಂದಿದ್ದಾರೆ. ಆದರೆ ನ್ಯಾಯೂಮೂರ್ತಿ  ಡಿ ಭರತ್ ಚಕ್ರವರ್ತಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಭಾನು ಅವರ ಅಭಿಪ್ರಾಯ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ರಿಮಾಂಡ್ ಆದೇಶದ ಬಳಿಕವೂ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ಪರಿಗಣಿಸಬಹುದೇ ಎಂದು ನ್ಯಾಯಮೂರ್ತಿ ಚಕ್ರವರ್ತಿ ಪ್ರಶ್ನಿಸಿದ್ದಾರೆ. ಸೆಂಥಿಲ್ ಬಾಲಾಜಿ ಅವರನ್ನು ಅಕ್ರಮವಾಗಿ ಬಂಧಿಸಲಾಗಿ ಎಂದು ತೋರಿಸಲು ಯಾವುದೇ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಲಾಗುವುದು ಎಂದು ನ್ಯಾಯಮೂರ್ತಿ ಡಿ ಭರತ್ ಚಕ್ರವರ್ತಿ ಹೇಳಿದ್ದಾರೆ. 

ಜಸ್ಟೀಸ್ ಜೆ ನಿಶಾ ಭಾನು ಹಾಗೂ ಡಿ ಭರತ್ ಚಕ್ರವರ್ತಿ ಭಿನ್ನ ತೀರ್ಪು ನೀಡಿರುವ ಕಾರಣ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ವಿ ಸೆಂಥಿಲ್ ಬಾಲಾಜಿ ಪತ್ನಿ ಎಸ್ ಮೆಗಲಾ ಜೂನ್ 14 ರಂದು ಮದ್ರಾಸ್ ಹೈಕೋರ್ಟ್‌ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.  ವಿ ಸೆಂಥಿಲ್ ಪರ ವಾದ ಮಂಡಿಸಿದ ವಕೀಲ ಎನ್ ಆರ್ ಎಳಂಗಗೋ, ಬಾಲಾಜಿ ಬಂಧನ ಯಾವುದೇ ನೋಟಿಸ್ ನೀಡದೆ ಮಾಡಲಾಗಿದೆ. ಹೀಗಾಗಿ ಇದು ಅಕ್ರಮ ಎಂದು ವಾದಿಸಿದ್ದಾರೆ. 

Breaking: ತಮಿಳುನಾಡು ಸರ್ಕಾರಕ್ಕೆ ಶಾಕ್‌: ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಸಚಿವ ವಿ. ಸೆಂಥಿಲ್ ಬಾಲಾಜಿ ಬಂಧಿಸಿದ ಇಡಿ

ಸೆಂಥಿಲ್ ಬಂಧನದ ಬಳಿಕ ರಾಜಕೀಯ ಹೈಡ್ರಾಮವೇ ನಡೆದಿದೆ. ಇದರ ನಡುವೆ ರಾಜ್ಯಪಾಲರು ಸೆಂಥಿಲ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ್ದರು. ಇದು ಸಂವಿಧಾನಾತ್ಮಕ ಹೋರಾಟಕ್ಕೂ ಕಾರಣವಾಗಿತ್ತು. ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾದ ತಮಿಳುನಾಡು ಸಚಿವ ಸೆಂಥಿಲ್‌ರನ್ನು ಸರ್ಕಾರದ ಸಲಹೆ ಕೇಳದೇ ವಜಾ ಮಾಡಿ, ನಂತರ ಆ ನಿರ್ಧಾರ ಹಿಂಪಡೆದ ರಾಜ್ಯಪಾಲ ಆರ್‌.ಎನ್‌. ರವಿ ಅವರ ದ್ವಂದ್ವ ನಿಲುವಿನ ಬಗ್ಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಕಿಡಿಕಾರಿದ್ದರೆ. ಈ ಬಗ್ಗೆ ರವಿಗೆ ಪತ್ರ ಬರೆದಿರುವ ಸ್ಟಾಲಿನ್‌, ‘ಗುರುವಾರ ಸಂಜೆ 7ಕ್ಕೆ ನೀವು ನನಗೆ ಪತ್ರ ಬರೆದು ಸೆಂಥಿಲ್‌ ವಜಾ ಮಾಡಿದ್ದಾಗಿ ಹೇಳಿದಿರಿ. ರಾತ್ರಿ 11.45ಕ್ಕೆ ಮತ್ತೊಂದು ಪತ್ರ ಬರೆದು ವಜಾ ತಡೆ ಹಿಡಿದಿದ್ದೇನೆ. ವಕೀಲರ ಸಲಹೆ ಕೇಳುತ್ತಿದ್ದೇನೆ ಎಂದಿರಿ. ನೀವು ಯಾರ ಸಲಹೆ ಕೇಳದೇ ವಜಾ ಮಾಡಿದ್ದಿರಿ ಎಂಬುದು ಇದರ ಅರ್ಥ’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು