*ಸೋದರಳಿಯ, ಸೊಸೆಗೆ ಮನೆ ಹಸ್ತಾಂತರಕ್ಕೆ ಸೂಚನೆ
*ಸ್ಮಾರಕವನ್ನಾಗಿ ಪರಿವರ್ತಿಸಿ ಕಳೆದ ಜನವರಿಯಲ್ಲಿ ಉದ್ಘಾಟನೆ
*ಸರ್ಕಾರದ ಆದೇಶವನ್ನು ವಜಾ ಮಾಡಿದ ಮದ್ರಾಸ್ ಹೈಕೋರ್ಟ್
ಚೆನ್ನೈ(ನ.25): ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ (J. Jayalalithaa) ಅವರ ‘ವೇದ ನಿಲಯಂ’ (Veda Nilayam) ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸುವ ಈ ಹಿಂದಿನ ಎಐಎಡಿಎಂಕೆ (AIADMK) ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ (Madras High Court) ಬುಧವಾರ ವಜಾ ಮಾಡಿದೆ. ಅಲ್ಲದೆ ಸ್ವಾಧೀನ ಪಡಿಸಿಕೊಂಡಿರುವ ವೇದ ನಿಲಯಂ ನಿವಾಸವನ್ನು ಜಯಲಲಿತಾ ಸೋದರ ಸೊಸೆ ದೀಪಾ (Deepa) ಮತ್ತು ಸೋದರಳಿಯ ದೀಪಕ್ ಜಯರಾಮ್ (Deepak Jayaram) ಅವರಿಗೆ ಹಸ್ತಾಂತರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
2016ರಲ್ಲಿ ಮೃತಪಟ್ಟಜಯಾ ನಿವಾಸವನ್ನು ಹಿಂದಿನ ಎಐಎಡಿಎಂಕೆ ಸರ್ಕಾರ ಸ್ಮಾರಕವನ್ನಾಗಿ (Memorial) ಪರಿವರ್ತಿಸಿ ಕಳೆದ ಜನವರಿಯಲ್ಲಿ ಉದ್ಘಾಟಿಸಿತ್ತು. ಸರ್ಕಾರದ ಈ ನಿರ್ಧಾರದ ವಿರುದ್ಧ ದೀಪಾ, ದೀಪಕ್ ಕೋರ್ಟ್ ಮೆಟ್ಟಿಲೇರಿದ್ದರು. ‘ಜಯಲಲಿತಾ ಅವರು ವಿವಿಧ ಕಾರಣಗಳಿಂದ ಉಯಿಲು ಬರೆಯಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ. ಬಹುಶಃ ಅವರ ವಿರುದ್ಧ ಇದ್ದ ಪ್ರಕರಣಗಳು, ಇಕ್ಕಟ್ಟಿನ ರಾಜಕೀಯ ಸನ್ನಿವೇಶದ ಕಾರಣಗಳಿಂದ ಮತ್ತು ಅವರಿಗೆ ತಾವು ಸಾಯಬಹುದು ಎನ್ನುವುದು ಗೊತ್ತಿಲ್ಲದ ಕಾರಣದಿಂದ ವಿಲ್ ಬರೆದಿರಲಿಲ್ಲ’ ಎಂದು ಅರ್ಜಿಯಲ್ಲಿ ಹೇಳಿದ್ದರು.
undefined
'ಈಗಾಗಲೇ ಜಯಾ ಹೆಸರಲ್ಲಿ ಒಂದು ಸ್ಮಾರಕ ಇದೆ'
ಈ ವಾದ ಒಪ್ಪಿದ ಕೋರ್ಟ್ ಈಗಾಗಲೇ ಜಯಾ ಹೆಸರಲ್ಲಿ ಒಂದು ಸ್ಮಾರಕ ಇದೆ. ಇನ್ನೊಂದು ಸ್ಮಾರಕದ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿ, ಮನೆ ಹಸ್ತಾಂತಕ್ಕೆ ಸೂಚಿಸಿತು. 1967ರಲ್ಲಿ ಜಯಾ ಅವರ ತಾಯಿ ಸಂಧ್ಯಾ (Sandhya) ಈ ಮನೆಯನ್ನು 1.32 ಲಕ್ಷಕ್ಕೆ ಖರೀದಿಸಿದ್ದರು. ಬಳಿಕ ಅಕ್ಕಪಕ್ಕದ ಜಾಗವನ್ನು ಖರೀದಿಸಿದ್ದ ಜಯಾ, ಅದನ್ನು ದೊಡ್ಡ ಬಂಗಲೆಯನ್ನಾಗಿಸಿದ್ದರು (Bungalow). ಈ ಮನೆ ಇದೀಗ 100 ಕೋಟಿ ರು. ಬೆಲೆ ಬಾಳುತ್ತದೆ.
Suicide; ಭೌತಶಾಸ್ತ್ರ ಶಿಕ್ಷಕನಿಂದ ನಿರಂತರ ದೌರ್ಜನ್ಯ, ನೇಣಿಗೆ ಶರಣಾದ ಪಿಯು ಸ್ಟುಡೆಂಟ್!
ನಿವಾಸದ ಕೀಗಳನ್ನು ಮೂರು ವಾರಗಳಲ್ಲಿ ಇಬ್ಬರಿಗೆ ಹಸ್ತಾಂತರಿಸಬೇಕು ಮತ್ತು ಆಸ್ತಿಯ ಮೇಲೆ ಬಾಕಿ ಇರುವ ತೆರಿಗೆಯನ್ನು ಸಂಗ್ರಹಿಸಲು ಆದಾಯ ತೆರಿಗೆ ಇಲಾಖೆ (Income tax department) ತನ್ನ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು ಎಂದು ನ್ಯಾಯಾಲಯ ಹೇಳಿದೆ. ನಿವಾಸದ ಖರೀದಿ ಬೆಲೆಯಾಗಿ ಸರ್ಕಾರವು ಠೇವಣಿ (deposite) ಇರಿಸಿದ್ದ 67.9 ಕೋಟಿ ರೂ. ಗಳನ್ನು ಹಿಂಪಡೆಯಬಹುದು ಎಂದು ನ್ಯಾಯಾಲಯ ತಿಳಿಸಿದೆ.
Tamilnadu ಸರ್ಕಾರದಿಂದ 6 ಸಾವಿರ ಕೋಟಿ ಚಿನ್ನದ ಸಾಲ ಮನ್ನಾ
ತಮಿಳುನಾಡು (Tamilnadu) ಸಹಕಾರಿ ಸಂಘಗಳಲ್ಲಿ ಚಿನ್ನ ಅಡ ಇಟ್ಟು ಪಡೆದ ಸಾಲವನ್ನು (Loan) ಸರ್ಕಾರ ಮನ್ನಾ ಮಾಡಿದೆ. ಇದು ಅಂದಾಜು 6 ಸಾವಿರ ಕೋಟಿಯಷ್ಟಾಗುತ್ತಿದ್ದು, ಈ ಬಗ್ಗೆ ಸಿಎಂ ಎಂ.ಕೆ.ಸ್ಟಾಲಿನ್ (MK Stalin) ಆದೇಶ ಹೊರಡಿಸಿದ್ದಾರೆ. ಗ್ರಾಹಕರ 5 ಗ್ರಾಂವರೆಗಿನ ಸಾಲವನ್ನು ಮನ್ನಾ ಮಾಡಿದ್ದು, ಉಳಿದ ಮೊತ್ತವಟ್ಟು ಕಟ್ಟಿ ಗ್ರಾಹಕರು ತಮ್ಮ ಆಭರಣ (Jewells) ಬಿಡಿಸಿಕೊಳ್ಳಬಹುದಾಗಿದೆ. ಸರ್ಕಾರದ ಈ ಆದೇಶದಿಂದ ಸುಮಾರು 16 ಲಕ್ಷ ಮಂದಿಗೆ ಅನುಕೂಲವಾಗಲಿದ್ದು, ಫಲಾನುಭವಿಗಳು ರೇಷನ್ ಕಾರ್ಡ್ (Ration Card) ಹೊಂದಿರಬೇಕು. 2021ರ ಮಾರ್ಚ್ 31ರವರೆಗೆ ಚಿನ್ನ ಅಡ ಇಟ್ಟವರು ಇದರ ಫಲಾನುಭವಿಗಳಾಗಿದ್ದು, ಅವರು ಎಷ್ಟೇ ಅಡ ಇಟ್ಟಿದ್ದರೂ ಸರ್ಕಾರ 5 ಗ್ರಾಂ ಮೇಲಿನ ಸಾಲವನ್ನು ಸರ್ಕಾರ ಮನ್ನಾ (Tamilnadu govt) ಮಾಡಲಿದೆ.
ಕನ್ನಡ ಶಾಲೆಯಲ್ಲಿ ತಮಿಳು ಮಕ್ಕಳು : ರಾಜ್ಯ ಗಡಿ ಭಾಗದಲ್ಲಿರುವ ಶಾಲೆ
ಈ ಬಗ್ಗೆ ಮಾರ್ಗಸೂಚಿ ಕೂಡ ಹೊರಬಿದಿದ್ದು, ಈಗ ಚಿನ್ನದ (Gold) ಸಾಲ ಕೊಡಿಸುತ್ತೇನೆಂದು ವಂಚಿಸುವವರ ಬಗ್ಗೆ ಎಚ್ಚರವಿರಿ ಎಂದೂ ತಿಳಿಸಲಾಗಿದೆ. ಕಳೆದ ಚುನಾವಣೆ ವೇಳೆ ಇದು ಸ್ಟಾಲಿನ್‌ರ ಪ್ರಮುಖ ಭರವಸೆಯಾಗಿತ್ತು.