ಮೊದಲ ಬಾರಿ ವಾಟ್ಸಾಪ್‌ ಮೂಲಕ ಮದ್ರಾಸ್‌ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ವಿಚಾರಣೆ!

Published : May 17, 2022, 03:10 AM IST
ಮೊದಲ ಬಾರಿ ವಾಟ್ಸಾಪ್‌ ಮೂಲಕ ಮದ್ರಾಸ್‌ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ವಿಚಾರಣೆ!

ಸಾರಾಂಶ

ಇದೇ ಮೊದಲ ಬಾರಿಗೆ ಹೈಕೋರ್ಟ್ ವಾಟ್ಸಾಪ್‌ ಮೂಲಕ ವಿಚಾರಣೆ ನಡೆಸಿದ ಘಟನೆಗೆ ಮದ್ರಾಸ್‌ ಹೈಕೋರ್ಟ್ ಸಾಕ್ಷಿಯಾಗಿದೆ. ನ್ಯಾ. ಜಿ.ಆರ್‌.ಸ್ವಾಮಿನಾಥನ್‌ ಅವರು ಭಾನುವಾರ ವಾಟ್ಸಾಪ್‌ ಮೂಲಕ ವಿಚಾರಣೆ ನಡೆಸಿದ್ದಾರೆ. 

ಚೆನ್ನೈ (ಮೇ.17): ಇದೇ ಮೊದಲ ಬಾರಿಗೆ ಹೈಕೋರ್ಟ್ ವಾಟ್ಸಾಪ್‌ (Whatsapp) ಮೂಲಕ ವಿಚಾರಣೆ ನಡೆಸಿದ ಘಟನೆಗೆ ಮದ್ರಾಸ್‌ ಹೈಕೋರ್ಟ್ (Madras High Court) ಸಾಕ್ಷಿಯಾಗಿದೆ. ನ್ಯಾ. ಜಿ.ಆರ್‌.ಸ್ವಾಮಿನಾಥನ್‌ ಅವರು ಭಾನುವಾರ ವಾಟ್ಸಾಪ್‌ ಮೂಲಕ ವಿಚಾರಣೆ ನಡೆಸಿದ್ದಾರೆ. ಧರ್ಮಪುರಿಯ ಶ್ರೀ ಅಭೀಷ್ಟವರದರಾಜ ಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಕರಣವನ್ನು ತುರ್ತು ಎಂದು ಪರಿಗಣಿಸಿದ ನ್ಯಾಯಾಧೀಶರು ವಾಟ್ಸಾಪ್‌ ಮೂಲಕ ವಿಚಾರಣೆ ನಡೆಸಿದ್ದಾರೆ. ಸೋಮವಾರ ರಥೋತ್ಸವ ನಡೆಯದಿದ್ದರೆ, ಊರು ದೇವರ ಶಾಪಕ್ಕೆ ಗುರಿಯಾಗಲಿದೆ ಎಂದು ದೇವಸ್ಥಾನದ (Temple) ಟ್ರಸ್ಟಿಯಾಗಿರುವ ಪಿ.ಆರ್‌.ವಿಶ್ವನಾಥನ್‌ ಅವರು ಅರ್ಜಿ ಸಲ್ಲಿಸಿದ್ದರು. 

ಆದರೆ ನ್ಯಾಯಾಧೀಶರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಾಗರಕೊಯಿಲ್‌ಗೆ ಹೋಗಿದ್ದರಿಂದ ಅಲ್ಲಿದ್ದುಕೊಂಡೇ, ವಾಟ್ಸಾಪ್‌ ಮುಖಾಂತರ ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣವನ್ನು ನ್ಯಾಯಾಧೀಶರು, ಅರ್ಜಿದಾರರ ವಕೀಲ ಮತ್ತು ಅಡ್ವೋಕೇಟ್‌ ಜನರಲ್‌ ಒಂದೊಂದು ಜಾಗದಲ್ಲಿ ಕುಳಿತು ಆಲಿಸಿದರು. ದೇವಸ್ಥಾನದ ರಥೋತ್ಸವವನ್ನು ನಿಲ್ಲಿಸುವಂತೆ ನೀಡಲಾಗಿದ್ದ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ರಥೋತ್ಸವ ನಿಲ್ಲಿಸುವಂತೆ ಆದೇಶಿಸುವ ಹಕ್ಕು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗೆ ಇಲ್ಲ ಎಂದು ಆದೇಶಿಸಿ ಪ್ರಕರಣವನ್ನು ರದ್ದುಗೊಳಿಸಿದರು.

ಧನುಷ್ ನಮ್ಮ ಮಗ ಎಂದು ಕೋರ್ಟ್ ಮೆಟ್ಟಿಲೇರಿದ ದಂಪತಿಗಳು, ತಮಿಳು ಸ್ಟಾರ್ ಗೆ ಸಮನ್ಸ್!

ಪ್ರಕೃತಿ ಮಾತೆಗೂ ಜೀವಂತ ವ್ಯಕ್ತಿ ಸ್ಥಾನ ನೀಡಿದ ಮದ್ರಾಸ್‌ ಕೋರ್ಟ್‌: ಮಿತಿಮೀರಿದ ನಗರೀಕರಣ ಹಾಗೂ ಕೈಗಾರೀಕರಣದಿಂದಾಗಿ ನಿಸರ್ಗ ಹಾಳಾಗುತ್ತಿರುವಾಗಲೇ, ಪರಿಸರ ಸಂರಕ್ಷಣೆಗಾಗಿ ಮದ್ರಾಸ್‌ ಹೈಕೋರ್ಟ್‌ ಪ್ರಕೃತಿ (Nature) ಮಾತೆಯನ್ನು ಜೀವಂತ ವ್ಯಕ್ತಿ (Mother Nature) ಎಂದು ಘೋಷಣೆ ಮಾಡಿದೆ. ಜೀವಂತ ಮಾನವನಿಗೆ ಇರುವ ಎಲ್ಲ ಹಕ್ಕು, ಕರ್ತವ್ಯ ಹಾಗೂ ಹೊಣೆಗಾರಿಕೆಗಳೂ ಪ್ರಕೃತಿಗೆ ಇವೆ ಎಂದು ಹೇಳಿದೆ. ರಾಷ್ಟ್ರವೇ ಪೋಷಕ ಎಂಬ ತತ್ವದಡಿ ಉತ್ತರಾಖಂಡ ಹೈಕೋರ್ಟ್‌ ಗಂಗೋತ್ರಿ, ಯಮನೋತ್ರಿ ಸೇರಿದಂತೆ ಆ ರಾಜ್ಯದ ಎಲ್ಲ ನೀರ್ಗಲ್ಲುಗಳನ್ನು ಕಾನೂನುಬದ್ಧ ಸಂಸ್ಥೆಗಳು ಎಂದು ಪ್ರಕಟಿಸಿತ್ತು. ಅವುಗಳ ಸಂರಕ್ಷಣೆ ಉದ್ದೇಶದಿಂದ ಈ ಕ್ರಮ ಕೈಗೊಂಡಿತ್ತು.

Tamil Nadu ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5 ವೈದ್ಯಕೀಯ ಕೋಟಾ: ಮದ್ರಾಸ್ ಹೈಕೋರ್ಟ್

ಪ್ರಕರಣವೊಂದರ ವಿಚಾರಣೆ ವೇಳೆ ಮದುರೈ ಪೀಠದ ನ್ಯಾ ಎಸ್‌.ಶ್ರೀಮತಿ ಅವರು ಉತ್ತರಾಖಂಡ ಹೈಕೋರ್ಟ್‌ ಹೊರಡಿಸಿದ್ದ ತೀರ್ಪನ್ನು ಉಲ್ಲೇಖಿಸಿದರು. ಹಿಂದಿನ ತಲೆಮಾರುಗಳು ನಮಗೆ ಪ್ರಕೃತಿ ಮಾತೆಯನ್ನು ಶುದ್ಧ ರೂಪದಲ್ಲಿ ನೀಡಿವೆ. ಅದನ್ನು ನಮ್ಮ ಮುಂದಿನ ಪೀಳಿಗೆಗೂ ಹಸ್ತಾಂತರಿಸುವುದು ನೈತಿಕತೆ ಎಂದು ಹೇಳಿದರು. ಪ್ರಕೃತಿ ಮಾತೆಗೆ ಜೀವಂತ ವ್ಯಕ್ತಿ ಸ್ಥಾನ ನೀಡಲು ಇದು ಸಕಾಲ. ಪ್ರಕೃತಿ ಮಾತೆಗೆ ಜೀವಂತ ವ್ಯಕ್ತಿಯ ಸ್ಥಾನಮಾನ ನೀಡಲಾಗುತ್ತದೆ. ಉಳಿವು, ಸುರಕ್ಷತೆಗಾಗಿ ಬೇಕಾದ ಮೂಲಭೂತ/ಕಾನೂನು/ಸಾಂವಿಧಾನಿಕ ಹಕ್ಕುಗಳನ್ನೂ ನೀಡಲಾಗುತ್ತದೆ. ಪ್ರಕೃತಿ ಮಾತೆಯನ್ನು ಸಂರಕ್ಷಿಸಲು, ಸಾಧ್ಯವಿರುವ ಎಲ್ಲ ದಾರಿ ಬಳಸಿ ರಕ್ಷಣೆ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸೂಚನೆ ನೀಡಲಾಗುತ್ತದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು