ನನಗೊಬ್ಬಳಿಗೆ ನಾಚಿಕೆ ಆಗ್ತಿದೆ? ಮದುವೆಯ ಮೊದಲ ದಿನದ ವಿಡಿಯೋ ಹಂಚಿಕೊಂಡ ದಂಪತಿ

By Mahmad Rafik  |  First Published Dec 25, 2024, 2:44 PM IST

ಅರೇಂಜ್ ಮ್ಯಾರೇಜ್ ಆದ ಜೋಡಿಯ ಮದುವೆಯಾದ ಮೊದಲ ದಿನದ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಧು-ವರರ ನಡುವಿನ ಮುದ್ದಾದ ಸಂಭಾಷಣೆ ಮತ್ತು ಮನೆಯವರ ಕಾಲೆಳೆಯುವಿಕೆ ವಿಡಿಯೋದಲ್ಲಿದೆ.


ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ  ಒಂದಕ್ಕಿಂತ ಒಂದರಂತೆ ಹಲವು ವಿಡಿಯೋಗಳು  ವೈರಲ್ ಆಗುತ್ತಿರುತ್ತವೆ, ಕೆಲವು ವಿಡಿಯೋಗಳು ನಗು ತರಿಸಿದ್ರೆ, ಒಂದಿಷ್ಟು ನಮ್ಮ ಜೀವನದಲ್ಲಿ ಹೀಗೆ ಆಗಿತ್ತಾ ಅನ್ನುವಂತೆ ಮಾಡುತ್ತವೆ. ಇತ್ತೀಚೆಗಷ್ಟೇ ದಂಪತಿ ತಮ್ಮ ಫಸ್ಟ್ ನೈಟ್ ವಿಡಿಯೋ ಹಂಚಿಕೊಂಡು ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಇದೀಗ ಅಂತಹವುದೇ ಒಂದು ವಿಡಿಯೋ  ವೈರಲ್ ಆಗಿದ್ದು, ಆದ್ರೆ ಇದು ಕೊಂಚ ವಿಭಿನ್ನವಾಗಿದೆ. ಅರೇಂಜ್ ಮ್ಯಾರೇಜ್ ಆದ ಜೋಡಿಯ ಮದುವೆಯಾದ ಮೊದಲ ದಿನ ಹೇಗಿರುತ್ತೆ ಎಂಬುದನ್ನು ತೋರಿಸಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. 

ವೈರಲ್ ಆಗಿರುವ ವಿಡಿಯೋದಲ್ಲಿ ಕಾಣುವ ಜೋಡಿ ಮದುವೆ ಹಿಂದಿನ ದಿನವೇ ನಡೆದಿರುತ್ತದೆ ಮತ್ತು ಮೊದಲ ರಾತ್ರಿ ಆಗಿರುತ್ತದೆ. ವರನ ಮೇಲೆ ವಧು ಕೈ ಹಾಕಿರುವ ದೃಶ್ಯದಿಂದ ವಿಡಿಯೋ ಶುರುವಾಗುತ್ತದೆ. ನಂತರ ವಧು, ಕೋಣೆಯಿಂದ ಇಬ್ಬರು ಜೊತೆಯಾಗಿಯೇ ಕೋಣೆಯಿಂದ ಹೋಗೋಣ. ನನಗೆ ಒಬ್ಬಳೇ ಹೋಗಲು ಮುಜುಗರ ಆಗುತ್ತಿದೆ ಎಂದು ಹೇಳುತ್ತಾಳೆ. ನಂತರ ಶೇವಿಂಗ್ ಮಾಡಿಕೊಳ್ಳುತ್ತಿರುವ ವರ, ಎರಡು ನಿಮಿಷದಲ್ಲಿ ಬಂದೆ ಎಂದು ಹೇಳುತ್ತಾನೆ. 

Tap to resize

Latest Videos

undefined

ಕೋಣೆಯಿಂದ ಹೊರಗೆ ಹೋಗುವಾ ದುಪ್ಪಟ್ಟಾ, ತಲೆ ಮೇಲೆ ಹಾಕಿಕೊಳ್ಳಬೇಕಾ ಅಥವಾ ಹಾಗೆ ಇರ್ಲಾ ಎಂದು ವಧು ಕೇಳಿದ್ದಕ್ಕೆ ವರ ನಿಮ್ಮಿಷ್ಟ ಎಂದು ಉತ್ತರಿಸುತ್ತಾನೆ. ಇಬ್ಬರು ಮೆಟ್ಟಿಲು ಇಳಿದು ಕೆಳಗೆ ಬರುತ್ತಿದ್ದಂತೆ ಮನೆಯವರು, ಯಾಕೆ ರಾತ್ರಿ ನಿದ್ದೆ ಮಾಡಿಲ್ಲವಾ? ಸುಸ್ತು ಆದಂತೆ ಕಾಣಿಸುತ್ತಿದ್ದೀರಿ ಎಂದು ಕಾಲೆಳೆಯುತ್ತಾರೆ. ಇದಕ್ಕೆ ವಧು-ವರ ನಾಚಿಕೊಂಡು ಬೇರೆ ಕಡೆ ಹೋಗುತ್ತಾರೆ. 

ಇದನ್ನೂ ಓದಿ: ಅಪ್ಪನಿಗೆ ಪೌಡರ್, ಲಿಪ್‌ಸ್ಟಿಕ್ ಹಾಕಿ ಮೇಕಪ್ ಮಾಡಿದ ಮಗಳು: ಮುದ್ದಾದ ವಿಡಿಯೋ ವೈರಲ್

ನಂತರ ವಧು ತನ್ನ ಬಟ್ಟೆಗಳನ್ನು ಇರಿಸಲು ಜಾಗವಿಲ್ಲ ಎಂದಾಗ ವರ, ತನ್ನ ಕಬರ್ಡ್‌ನಲ್ಲಿ ಜಾಗ ಮಾಡಿಕೊಡುತ್ತೇನೆ ಎಂದು ಹೇಳುತ್ತಾನೆ. ಮತ್ತೆ ಬ್ಯಾಗ್‌ ಹಿಡಿದು ಕುಳಿತುಕೊಳ್ಳುವ ವರ, ಚಾರ್ಜರ್ ಇಲ್ಲಿಯೇ ಇಟ್ಟಿದ್ದೆ? ಎಲ್ಲಿ ಹೋಯ್ತು ಎಂದು ಹೇಳುತ್ತಾ ಹುಡುಕುತ್ತಿರುತ್ತಾನೆ. ಆಗ ವಧು ಏನಾಯ್ತು ಅಂದಾಗ, ನಾನು ಹಾಗೆ ಒಬ್ಬನೇ ಮಾತಾಡಿಕೊಳ್ಳುತ್ತಿರುತ್ತೇನೆ ಅಂದಾಗ, ಚಾರ್ಜರ್ ತೋರಿಸುವ ವಧು, ಇನ್ಮುಂದೆ ನಿಮ್ಮೊಂದಿಗೆ ಮಾತನಾಡಲು ನಾನಿದ್ದೇನೆ ಎಂದು ಹೇಳಿ ನಗುತ್ತಾಳೆ. 

ಸದ್ಯ ಈ ನವಜೋಡಿಯ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. @Prof_Cheems ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡು Golden Days Of Marriage ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಫೋಟೋ ಹಾಕಿ, ಎರಡು ವರ್ಷದ ನಂತರ ಎಂದು ಬರೆದು ಕಮೆಂಟ್ ಮಾಡಿದ್ದಾರೆ. ಮದುವೆಯಾದ 5-10 ವರ್ಷಗಳ ನಂತರ ಸಾಂಸರಿಕ ಜೀವನ ಹೇಗಿರುತ್ತೆ ಎಂಬುದನ್ನು ತೋರಿಸಿ ಎಂದು ನೆಟ್ಟಿಗರ ಕಮೆಂಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಟೇಕಾಫ್ ಆಗ್ತಿದ್ದಂತೆ ಖಾಲಿಯಾಯ್ತು 1.8 ಲಕ್ಷ ಮೌಲ್ಯದ 15 ಲೀಟರ್ ಮದ್ಯ; ಪ್ರಯಾಣಿಕರ ವಿಲಕ್ಷಣ ವರ್ತನೆ ವಿಡಿಯೋ ವೈರಲ್

Golden Days Of Marriage 🥰 pic.twitter.com/601r7cHVKA

— Prof cheems ॐ (@Prof_Cheems)
click me!