ಮುಸ್ಲಿಂ ಹುಡುಗನ ಜೊತೆ ಓಡಿ ಹೋದ ಮಗಳು: ಬದುಕಿದ್ದಾಗಲೇ ಮಗಳಿಗೆ ಪಿಂಡ ಬಿಟ್ಟ ಕುಟುಂಬ

Published : Jun 12, 2023, 04:02 PM IST
ಮುಸ್ಲಿಂ ಹುಡುಗನ ಜೊತೆ ಓಡಿ ಹೋದ ಮಗಳು: ಬದುಕಿದ್ದಾಗಲೇ ಮಗಳಿಗೆ ಪಿಂಡ ಬಿಟ್ಟ ಕುಟುಂಬ

ಸಾರಾಂಶ

ಮಗಳು ಮುಸ್ಲಿಂ ಹುಡುಗನನ್ನು ಮದ್ವೆಯಾಗಿದ್ದಕ್ಕೆ ಆಕ್ರೋಶಗೊಂಡ ಆಕೆಯ ಕುಟುಂಬ ಆಕೆ ಜೀವಂತವಾಗಿರುವಾಗಲೇ ಆಕೆಯ ತಿಥಿ ಮಾಡಿ, ಊರಿಗೆಲ್ಲಾ ಊಟ ಹಾಕಿದ ವಿಚಿತ್ರ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿದೆ. 

ಜಬಲ್‌ಪುರ: ಮಗಳು ಮುಸ್ಲಿಂ ಹುಡುಗನನ್ನು ಮದ್ವೆಯಾಗಿದ್ದಕ್ಕೆ ಆಕ್ರೋಶಗೊಂಡ ಆಕೆಯ ಕುಟುಂಬ ಆಕೆ ಜೀವಂತವಾಗಿರುವಾಗಲೇ ಆಕೆಯ ತಿಥಿ ಮಾಡಿ, ಊರಿಗೆಲ್ಲಾ ಊಟ ಹಾಕಿದ ವಿಚಿತ್ರ ಘಟನೆ ಮಧ್ಯಪ್ರದೇಶದ (Madhya Pradesh) ಜಬಲ್‌ಪುರದಲ್ಲಿ ನಡೆದಿದೆ. ಆಕೆಯ ತಿಥಿಯ ಆಮಂತ್ರಣ ಪತ್ರಿಕೆಯನ್ನು ಕೂಡ ಫ್ರಿಂಟ್ ಮಾಡಿದ ಕುಟುಂಬ ಬಳಿಕ ಆಕೆಗೆ ಪಿಂಡ ಪ್ರದಾನ ಮಾಡಿ ಊರಿಗೆಲ್ಲಾ ಬೊಜ್ಜದ ಊಟ ನೀಡಿದೆ. ಏಪ್ರಿಲ್ ತಮ್ಮ ಪಾಲಿಗೆ ತಮ್ಮ ಮಗಳು ಸತ್ತಿದ್ದಾಳೆ ಎಂದು ತಿಳಿಸಲು ಈ ಕುಟುಂಬ ತಿಥಿ ಕಾಗದವನ್ನು ಸಿದ್ಧಪಡಿಸಿ ಸಂಬಂಧಿಕರು ಊರಿನವರಿಗೆಲ್ಲಾ ಹಂಚಿದ್ದಾರೆ.  ಜಬಲ್‌ಪುರದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಈ ಕುಟುಂಬ ನದಿ ನರ್ಮದೆಯ ಗ್ವಾರಿಘಾಟ್‌ಗೆ ತೆರಳಿ ಪಿಂಡ ಪ್ರದಾನ ಸೇರಿದಂತೆ ಸಾವಿನ ನಂತರ ಮಾಡುವ ಹಲವು ಆಚರಣೆಗಳನ್ನು ಮಾಡಿದ್ದಾರೆ. 

ಯುವತಿಯ ಮದ್ವೆಯಾದ ಯುವಕನ ಕಡೆಯವರು ರಿಸೆಪ್ಷನ್ ಪಾರ್ಟಿ (reception) ಆಯೋಜಿಸಿದ್ದರು. ಇದಕ್ಕೆ ಅರತಕ್ಷತೆಗಾಗಿ ಅವರು ಆಹ್ವಾನ ಪತ್ರಿಕೆಯೊಂದನ್ನು ಸಿದ್ಧಪಡಿಸಿದ್ದು, ಅದರಲ್ಲಿ  'ಹಿಂದೂ ಹುಡುಗಿ ತನ್ನ ಧರ್ಮವನ್ನು ಬದಲಿಸಿ ಮುಸ್ಲಿಂ ಆದಳು' ಎಂದು ಬರೆದಿತ್ತು ಎನ್ನಲಾಗಿದೆ. ಇದರಿಂದ ಕುದ್ದು ಹೋದ ಯುವತಿ ಮನೆಯವರು ಆಕೆ ಬದುಕಿದ್ದಾಗಲೇ ಮಗಳಿಗೆ ಪಿಂಡ ಬಿಟ್ಟಿದ್ದಾರೆ.  ಜನವರಿ 4 ರಂದು ಈ ವಿವಾಹ ನಡೆದಿದ್ದು, ಜನವರಿ 2 ರಂದೇ ಈ ಹುಡುಗಿ ಮನೆ ಬಿಟ್ಟು ಹೋಗಿದ್ದಳು. 

ಧಾರವಾಡದಲ್ಲಿ ಮತ್ತೆ ಆರಂಭವಾಯ್ತಾ ಲವ್ ಜಿಹಾದ್: ಮದುವೆ ತಡೆ ಹಿಡಿದ ಬಜರಂಗದಳ ಕಾರ್ಯಕರ್ತರು

ಇದೊಂದು ಲವ್ ಜಿಹಾದ್ (Love jihad) ಎಂದು ಆರೋಪಿಸಿ ಯುವತಿ ಮನೆಯವರು ಹಾಗೂ ಹಿಂದೂ ಸಂಘಟನೆಗಳು  ಜಬಲ್‌ಪುರ ಜಿಲ್ಲಾ ಎಸ್‌ಪಿ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿದ್ದರು.  ಹೀಗಾಗಿ ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಎರಡು ಕುಟುಂಬಗಳ ಸಮ್ಮತಿಯಿಂದಲೇ ಈ ವಿವಾಹ ನಡೆದಿದೆ ಎಂದು ವರದಿಯಾಗಿತ್ತು. ಆದರೆ ಯುವತಿ ಕುಟುಂಬ ಈ ಮಾತನ್ನು ತಿರಸ್ಕರಿಸಿದ್ದು, ನಮ್ಮ ಮಗಳು ನಮಗೆ ನಂಬಿಕೆ ದ್ರೋಹ ಮಾಡಿದ್ದಾಳೆ ಎಂದು ದೂರಿದ್ದಾರೆ. ಎರಡು ಕುಟುಂಬಗಳ ಒಪ್ಪಿಗೆಯಿಂದಲೇ ಈ ವಿವಾಹ ನಡೆದಿದೆ. ಯುವತಿಯ ಕುಟುಂಬ ಆಕೆಗೆ ಹಲವು ರೀತಿಯ ಗಿಫ್ಟ್‌ಗಳನ್ನು ಕೂಡ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

ಸಂಸದೆಯೇ ದಿ ಕೇರಳ ಸ್ಟೋರಿ ತೋರಿಸಿದ್ರೂ ಬಾರದ ಬುದ್ಧಿ! ಮುಸ್ಲಿಂ ಜೊತೆ ಪರಾರಿಯಾದವಳ ಪಾಡಿದು

ಮುಸ್ಲಿಂ ಯುವಕ (Muslim Men) ಹಾಗೂ ಯುವತಿ ಇಬ್ಬರು ಬಾಲ್ಯದಿಂದಲೂ ಗೆಳೆಯರಾಗಿದ್ದು, ಯುವಕ ಹೈಸ್ಕೂಲ್ ನಂತರ ಐಟಿಐ ಮಾಡಿದ್ದಾರೆ, ಯುವತಿ ಬಿಕಾಂ ಮುಗಿಸಿ ಬ್ಯೂಟಿಪಾರ್ಲರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು.  ಆಕೆ ನಮಗೆ ಗೊತ್ತಿಲ್ಲದೇ ಮದುವೆಯಾಗಿ ನಮಗೆ ಮೋಸ ಮಾಡಿದ್ದಾಳೆ. ಈ ಘಟನೆಯಿಂದಾಗಿ ಆಕೆಯ ತಂದೆ ಆಘಾತಕ್ಕೊಳಗಾಗಿದ್ದಾರೆ. ಆಕೆ ಜನವರಿ 2 ರಂದು ಮನೆ ಬಿಟ್ಟಿದ್ದು, ಮನೆಯಿಂದ ಏನು ತೆಗೆದುಕೊಂಡು ಹೋಗಿದ್ದಾಳೆ ಎಂಬುದೇ ತಮಗೆ ಗೊತ್ತಿಲ್ಲ ಎಂದು ಆಕೆಯ ತಾಯಿ ಹೇಳಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅರಾವಳಿ ಉಳಿಸಿ: ಜನವರಿ 7 ರಿಂದ ಯುವ ಕಾಂಗ್ರೆಸ್‌ನಿಂದ 1,000 ಕಿ.ಮೀ ಬೃಹತ್ ಪಾದಾಯಾತ್ರೆ!
ಲಕ್ನೋ: ಪ್ರಧಾನಿ ಮೋದಿ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಹೂಕುಂಡಗಳ ಲೂಟಿ; ವಿಡಿಯೋ ವೈರಲ್