ಮೇಡಮ್ ಮಗಳಿಗೆ ಹೊಡೀಬೇಡಿ, ತಾಯಿ ಇಲ್ಲದೆ ಬೆಳೆಸಿದ್ದೇನೆ, ಟೀಚರ್ ಮುಂದೆ ಕಣ್ಣೀರಿಟ್ಟ ತಂದೆ

Published : Jan 20, 2026, 05:00 PM IST
Father Daughter

ಸಾರಾಂಶ

ಮೇಡಮ್ ಮಗಳಿಗೆ ಹೊಡೀಬೇಡಿ ಟೀಚರ್, ಆಕೆಗೆ ತಾಯಿ ಇಲ್ಲ, ನಾನು ಏಕಾಂಗಿಯಾಗಿ ಬೆಳೆಸಿದ್ದೇನೆ ಎಂದು ಮಗಳ ಅಪ್ಪಿಕೊಂಡು ಟೀಚರ್ ಮುಂದೆ ತಂದೆಯ ಕಣ್ಮೀರಿನ ವಿಡಿಯೋ ಹಲವರ ಕಣ್ಣಾಲಿ ತೇವಗೊಳಿಸಿದೆ. 

ಗೋರಖ್‌ಪುರ (ಜ.20) ಟೀಚರ್ ಹೊಡೆಯುತ್ತಾರೆ ನಾನು ಶಾಲೆಗೆ ಹೋಗಲ್ಲ ಎಂದು ಅಳುತ್ತಿದ್ದ ಮಗಳ ಕಣ್ಣೀರು ನೋಡಿ ತಂದೆ ಕಣ್ಣೀರಾಗಿದ್ದಾರೆ. ಮಗಳನ್ನು ಕರೆದುಕೊಂಡು ನೇರವಾಗಿ ಶಾಲೆ ಬಂದ ತಂದೆ, ಆಕೆಯ ತರಗತಿಗೆ ತೆರಳಿ ಆಕೆಯ ಜೊತೆಗೆ ಬೆಂಚ್‌ನಲ್ಲಿ ಕುಳಿತುಕೊಂಡು ತರಗತಿ ಟೀಚರ್‌ಗೆ ಕಣ್ಣೀರಿನ ಮನವಿ ಮಾಡಿದ್ದಾರೆ. ದಯವಿಟ್ಟು ಮೇಡಂ, ನನ್ನ ಮಗಳಿಗೆ ಹೊಡೆಯಬೇಡಿ, ಆಕೆಗೆ ತಾಯಿ ಇಲ್ಲ. ನಾನು ಏಕಾಂಗಿಯಾಗಿ ಮಗಳನ್ನು ಬೆಳೆಸಿದ್ದೇನೆ, ಆಕೆಯೆ ಹೊಡೆಯಬೇಡಿ ಎಂದು ಮಗಳನ್ನು ಅಪ್ಪಿಕೊಂಡು ತಂದೆ ಕಣ್ಣೀರಿಟ್ಟ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.

ಮಗಳ ನಗುವಿಗೆ ತಂದೆಯ ಶತಪ್ರಯತ್ನ

ತಾಯಿ ಇಲ್ಲದ ಕಾರಣ ಮಗಳನ್ನು ಕಷ್ಟಪಟ್ಟು ಬೆಳೆಸಿದ್ದಾರೆ. ಮಗಳು ಕಣ್ಣಿನಿಂದ ಒಂದು ಹನಿ ಕಣ್ಣೀರು ಬಿದ್ದರೂ ತಂದೆಗೆ ಸಹಿಸಿಕೊಲ್ಲಾಗದ ನೋವು. ತನ್ನ ಮಗಳಿಗೆ ತಾಯಿ ಪ್ರೀತಿ ಆರೆಕೆ ಸಿಗಲಿಲ್ಲ ಅನ್ನೋ ಕೊರಗು. ಹೀಗಾಗಿ ಮಗಳ ನಗುವಿಗಾಗಿ ಆತ ಸರ್ವಸ್ವವನ್ನೇ ಮುಡಿಪಾಗಿಟ್ಟಿದ್ದ. ಬಡ ಮಧ್ಯಮ ಕುಟುಂಬದ ಈತ ಮಗಳನ್ನು ಶಾಲೆಗೆ ಸೇರಿಸಿದ್ದ. ಆದರೆ ಕೆಲ ವಾರಗಳಿಂದ ಮಗಳು ಮನೆಗೆ ಬಂದು ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಳು. ಆದರೆ ಮಗಳ ಮನ ಒಲಿಸಿ ಪ್ರತಿ ದಿನ ಮಗಳನ್ನು ಶಾಲೆಗೆ ಕಳುಹಿಸಿದ್ದ ತಂದೆಗೆ ಪ್ರತಿ ದಿನ ಸವಾಲಾಗಿತ್ತು.

ಅಸಹಾಯಕನಾಗಿ ಟೀಚರ್ ಮುಂದೆ ತಂದೆಯ ಕಣ್ಣೀರು

ಆದರೆ ಇತ್ತೀಚೆಗೆ ಮಗಳು ತಾನು ಶಾಲೆಗೆ ಹೋಗಲ್ಲ, ಟೀಟರ್ ಹೊಡೆಯುತ್ತಾರೆ ಎಂದಿದ್ದಾಳೆ. ಈ ಮಾತು ಕೇಳಿ ತಂದೆಗೆ ಆಘಾತವಾಗಿದೆ. ತಾಯಿ ಇಲ್ಲದ ಕೊರಗಿನಲ್ಲಿರುವ ಮಗಳು ಇದೀಗ ಹೊಡೆಯುತ್ತಾರೆ ಎಂದು ಕಣ್ಣೀರಿಟ್ಟಾಗ ತಂದೆಗೆ ದಿಕ್ಕೇ ತೋಚಲಿಲ್ಲ. ಮಗಳಿಗೆ ಸಮಾಧಾನ ಮಾಡಿದ ತಂದೆ, ತಾನು ಟೀಚರ್ ಬಳಿ ಮಾತನಾಡುತ್ತೇನೆ. ಯಾವತ್ತೂ ಹೊಡೆಯಲ್ಲ ಎಂದು ಸಮಾಧಾನ ಪಡಿಸಿದ್ದಾರೆ. ಬಳಿಕ ಮಗಳನ್ನು ಕರೆದುಕೊಂಡು ಶಾಲೆಗೆ ಆಗಮಿಸಿದ ತಂದೆ ತರಗತಿಗೆ ತೆರಳಿದ್ದಾರೆ. ಅಸಹಾಯಕರಾಗಿ ಕುಳಿತ ತಂದೆ ಟೀಚರ್ ಬಳಿ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ದಯವಿಟ್ಟು ಮೇಡಂ, ನನ್ನ ಮಗಳಿಗೆ ಹೊಡೆಯಬೇಡಿ, ಆಕೆ ಶಾಲೆಗೆ ಬರಲು ಅಳುತ್ತಿದ್ದಾಳೆ. ಆಕೆಯ ಕಣ್ಣೀರು ನನಗೆ ನೋಡಲು ಸಾಧ್ಯವಿಲ್ಲ. ಆಕೆ ತಾಯಿ ಇಲ್ಲದೆ ಬೆಳೆದಿದ್ದಾಳೆ. ತಾಯಿ ಅಗಲಿಕೆ ನೋವು ಆಕೆಗೆ ಬರಬಾರದು ನಾನು ಪ್ರಯತ್ನಿಸುತ್ತಿದ್ದೇನೆ. ಕೈಮುಗಿದು ಬೇಡಿಕೊಳ್ಳುತ್ತೇನೆ, ಆಕೆಯ ಹೊಡೆಯಬೇಡಿ ಎಂದು ತಂದೆ ಟೀಚರ್ ಮುಂದೆ ಕಣ್ಣೀರಿಟ್ಟಿದ್ದಾರೆ.

ಮಗಳನ್ನು ಅಪ್ಪಿಕೊಂಡು ತಂದೆ ಟೀಚರ್ ಮುಂದೆ ತಂದೆ ಕಣ್ಣೀರಿಟ್ಟಿದ್ದಾರೆ. ತಂದೆ ಕಣ್ಮೀರಿಡುತ್ತಿರುವುದನ್ನು ನೋಡಿ ಮಗಳು ಕೂಡ ಕಣ್ಣೀರಿಟ್ಟಿದ್ದಾರೆ. ಇತರ ಶಾಲಾ ಮಕ್ಕಳು ಕೂಡ ಭಾವುಕರಾಗಿದ್ದಾರೆ. ಈ ಘಟನೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ತಂದೆಯ ಅಸಹಾಯಕತೆ, ನೋವು, ಮಗಳನ ಮೇಲಿನ ಪ್ರೀತಿ, ತಾಯಿ ಇಲ್ಲದ ಕೊರಗು ಎಲ್ಲವೂ ಚರ್ಚೆಯಾಗುತ್ತಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಾಲ ಕಟ್ಟುವ ಸಲುವಾಗಿ 100ಕ್ಕೂ ಅಧಿಕ ಪುರುಷರ ಜೊತೆ ಹೆಂಡ್ತಿಯ ಸೆ*ಕ್ಸ್‌; ವಿಡಿಯೋ ಮಾಡಿ ಹಣ ವಸೂಲಿ ಮಾಡ್ತಿದ್ದ ಗಂಡ!
2026 5 ರಾಶಿಗೆ ಅತ್ಯುತ್ತಮ ವರ್ಷ, ಕೈ ತುಂಬಾ ಹಣ ಜೊತೆ ಕೋಟ್ಯಾಧಿಪತಿ ಯೋಗ ಬಾಬಾ ವಂಗಾ ಪ್ರಕಾರ