Yusuf Pathan: TMC ತೊರೆದ ಯೂಸುಫ್ ಪಠಾಣ್‌ಗೆ ಒಲಿದ ಅದೃಷ್ಟ, BJP ಸರ್ಕಾರದಿಂದ ಕೋಟಿ ಕೋಟಿ ಮೌಲ್ಯದ ಫ್ಲ್ಯಾಟ್ ಗಿಫ್ಟ್

Published : Oct 20, 2026, 03:16 PM IST
yusuf pathan

ಸಾರಾಂಶ

ಟಿಎಂಸಿ ಪಕ್ಷ ತೊರೆದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್‌ಗೆ ಗುಜರಾತ್ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ. ವಡೋದರದಲ್ಲಿ ಕಳೆದ 14 ವರ್ಷಗಳಿಂದ ಅವರು ಪಡೆಯಲು ಹೋರಾಡುತ್ತಿದ್ದ 20.53 ಕೋಟಿ ರೂ. ಮೌಲ್ಯದ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್, ತೃಣಮೂಲ ಕಾಂಗ್ರೆಸ್‌ನಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಪಶ್ಚಿಮ ಬಂಗಾಳದ ಪಶ್ಚಿಮ ಬರ್ಹಾಂಪುರ ಕ್ಷೇತ್ರದಿಂದ 2024ರ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಸೋಲಿನ ಬಳಿಕ ಟಿಎಂಸಿಯಿಂದ ಹೊರ ಬಂದಿದ್ದರು. ಟಿಎಂಸಿ ಪಕ್ಷದಿಂದ ಹೊಸ ಬಂದ ಬೆನ್ನಲ್ಲೇ, ಗುಜರಾತ್‌ನಲ್ಲಿರುವ ಬಿಜೆಪಿ ಸರ್ಕಾರ ವಡೋದರದಲ್ಲಿರುವ 978 ಚದರ ಮೀಟರ್ ಸ್ಥಳವನ್ನು ನೀಡಿದೆ.

ಟಿಎಂಸಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದ ಯೂಸುಫ್ ಪಠಾಣ್

ಈ ಕುರಿತಂತೆ ವಡೋದರ ಪಾಲಿಕೆ ಈ ಕುರಿತಂತೆ ಆದೇಶ ನೀಡಿದೆ. ಆದರೆ ಯೂಸಫ್ ತನ್ನ ಮನೆಯ ಪಕ್ಕದಲ್ಲಿರುವ ಸ್ಥಳವನ್ನು ಖರೀದಿಸಲು ಬೇಕಾದ ಅನುಮತಿಗಳು ಇನ್ನು ಪೆಂಡಿಂಗ್ ಇತ್ತು. ಎರಡು ತಿಂಗಳ ಹಿಂದಷ್ಟೇ ಯೂಸುಫ್ ಪಠಾಣ್ ಅವರೊಂದಿಗೆ 19 ಮಂದಿ ಸಂಸದರು ಮಮತಾ ಅವರೊಂದಿಗೆ ಅಸಮಾಧಾನಗೊಂಡು ಟಿಎಂಸಿ ಪಕ್ಷಕ್ಕೆ ಗುಡ್ ಬೈ ಹೇಳಿ, ನ್ಯಾಷನಲ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

14 ವರ್ಷಗಳಿಂದ ಹೋರಾಟ ಮಾಡುತ್ತಿರುವ ಮಾಜಿ ಕ್ರಿಕೆಟಿಗ

ಯೂಸುಫ್ ಪಠಾಣ್ ಮನೆಯ ಪಕ್ಕದಲ್ಲೇ ಇರುವ ಈ ಸ್ಥಳವನ್ನು ಖರೀದಿಸಲು ಕಳೆದ 14 ವರ್ಷಗಳಿಂದ ಹೋರಾಟ ಮಾಡುತ್ತಿದ್ದರು. ಅಂತರಾಷ್ಟ್ರೀಯ ಕ್ರಿಕೆಟಿಗನಾದ ತನಗೆ ಫ್ಲಾಟ್ ನೀಡಬೇಕು ಎಂದು 2012ರಲ್ಲಿಯೇ ಪಾಲಿಕೆಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರೊಂದಿಗೆ ಪಾಲಿಕೆ 99 ಪಕ್ಷಕ್ಕೆ ಲೀಜ್ ನೀಡುವ ಪ್ರಕ್ರಿಯೆಯನ್ನು ಆರಂಭ ಮಾಡಿತ್ತು. ಆದರೆ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ನಡೆಸದೆ ಸ್ಥಳವನ್ನು ಲೀಜ್‌ಗೆ ನೀಡಿದನ್ನು ಗುಜರಾತ್ ನಗರಾಭಿವೃದ್ಧಿ ಇಲಾಖೆ ತಿರಸ್ಕಾರ ಮಾಡಿತ್ತು. ಆದರೆ ಆ ವೇಳೆಗಾಗಲೇ ಯೂಸುಫ್, ಆ ಭೂಮಿಗೆ ಕಾಂಪೌಂಡ್ ನಿರ್ಮಾಣ ಮಾಡಿ ವಶಕ್ಕೆ ಪಡೆದುಕೊಂಡಿದ್ದರು ಎಂಬ ಆರೋಪ ಎದುರಾಗಿತ್ತು.

20.53 ಕೋಟಿ ರೂ. ಮೌಲ್ಯದ ಭೂಮಿ ಗಿಫ್ಟ್

2024ರ ಚುನಾವಣೆಯಲ್ಲಿ ಯೂಸುಫ್ ಪಠಾಣ್ ಟಿಎಂಸಿನಿಂದ ಸಂಸದರಾಗಿ ಆಯ್ಕೆಯಾದ ಬಳಿಕ ಈ ಸ್ಥಳದಲ್ಲಿರುವ ಆಕ್ರಮಣ ನಿರ್ಮಾಣವನ್ನು ತೆರವು ಮಾಡಲು ನೋಟಿಸ್ ನೀಡಲಾಗಿತ್ತು. ಇದರೊಂದಿಗೆ ಯೂಸುಫ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಯೂಸುಫ್ ವಿರುದ್ಧವಾಗಿ ದೂರು ನೀಡಿತ್ತು. ಅಲ್ಲದೇ ಅಧಿಕಾರಿಗಳ ನಡೆಯ ವಿರುದ್ಧ ಕೋರ್ಟ್ ಬೇಸರ ಹೊರ ಹಾಕಿತ್ತು. ಆದರೆ ಇದರ ನಡುವೆ 2023ರ ಆಗಸ್ಟ್‌ 31ರಂದು ಅರ್ಜಿಯನ್ನು ಯೂಸುಫ್ ವಾಪಸ್ ಪಡೆದುಕೊಂಡಿದ್ದರು.

ಯೂಸುಫ್ ಪಠಾಣ್ ಅರ್ಜಿ ಸಲ್ಲಿಕೆ ಮಾಡಿದ್ದ ಭೂಮಿಯ ಬೆಲೆ ಸುಮಾರು 20.53 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಆದರೆ ಯೂಸುಫ್, ಟಿಎಂಸಿಯಿಂದ ಹೊರ ಬಂದ ಕೆಲವೇ ದಿನಗಳಲ್ಲಿ ಗುಜರಾತ್ ಸರ್ಕಾರ ಫ್ಲ್ಯಾಟ್ ನೀಡುವಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 978 ಚದರ ಮೀಟರ್ ಸ್ಥಳದಲ್ಲಿ 500 ಮೀಟರ್ ಸ್ಥಳವನ್ನು ಪಠಾಣ್ ಅವರಿಗೆ ಉಡುಗೊರೆಯಾಗಿ ನೀಡಿದೆ. ಅಲ್ಲದೇ ಉಳಿದ ಸ್ಥಳವನ್ನು ರಿಯಾಯಿತಿ ದರದಲ್ಲಿ 478 ಚದರ ಮೀಟರ್ ಸ್ಥಳವನ್ನ ನೀಡಲು ಅನುಮತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೋಡೋಕೆ ಮಾಮರ, 537 ಸಾವುಗಳಿಗೆ ಈ ಮರದ್ದೇ ಲಿಂಕ್! ಕೇರಳದಲ್ಲಿನ ಈ ಸಾವಿನ ಮರದ ಹಿಂದಿನ ರಹಸ್ಯವೇನು?
ಟಿಎಂಸಿ ತೊರೆದ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್‌ಗೆ ಬಿಗ್ ರಿಲೀಫ್: 14 ವರ್ಷಗಳ ಹಳೆಯ ಭೂ ವಿವಾದ ಬಗೆಹರಿಸಿದ ಗುಜರಾತ್ ಸರ್ಕಾರ