ಲಕ್ನೋ: ಮಗಳೊಬ್ಬಳು ತನ್ನ ತಾಯಿಯ ಶವದೊಂದಿಗೆ ಹತ್ತಕ್ಕೂ ಹೆಚ್ಚು ದಿನ ಕಳೆದ ಆಘಾತಕಾರಿ ಘಟನೆ ಉತ್ತರಪ್ರದೇಶದ ಲಕ್ನೋದ ಇಂದಿರಾನಗರದಲ್ಲಿ ನಡೆದಿದೆ. ಹೀಗೆ ತಾಯಿಯ ಶವದೊಂದಿಗೆ ವಾಸ ಮಾಡುತ್ತಿದ್ದ ಯುವತಿಯನ್ನು 26 ವರ್ಷದ ಅಂಕಿತಾ ದೀಕ್ಷಿತ್ ಎಂದು ಗುರುತಿಸಲಾಗಿದೆ. ಮನೆಯಲ್ಲಿ ತಾಯಿಯ ಶವ ಒಂದು ಕೋಣೆಯಲ್ಲಿದ್ದರೆ ಮಗಳು ಇನ್ನೊಂದು ಕೋಣೆಯಲ್ಲಿ ವಾಸಿಸುತ್ತಿದ್ದಳು. ಈಕೆ ತಾಯಿ ತೀರಿಕೊಂಡ ವಿಚಾರವನ್ನು ಬಂಧುಗಳಿಗಾಗಲಿ ನೆರೆಹೊರೆಯವರಿಗಾಗಲಿ ತಿಳಿಸಿಲ್ಲ.
ಆದರೆ ಶವ ಕೊಳೆತ ನಂತರ ಗಬ್ಬು ವಾಸನೆ ಬರಲು ಶುರುವಾಗಿದ್ದರಿಂದ ನೆರೆ ಹೊರೆಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಲಕ್ನೋ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಲ್ಲಿ ಯುವತಿ ಅಂಕಿತಾ ದೀಕ್ಷಿತ್ ತಾಯಿ ಸುನೀತಾ ದೀಕ್ಷಿತ್ (Sunita Dixit) ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುನೀತಾ ಅವರು ಹಿಂದೂಸ್ತಾನ್ ಎರೋನಾಟಿಕಲ್ ಲಿಮಿಟೆಡ್‌ನಲ್ಲಿ (Hindustan Aeronautics Limited) ಕೆಲಸದಲ್ಲಿದ್ದು ನಿವೃತ್ತರಾಗಿದ್ದರು.
21 ವರ್ಷಗಳ ಕಾಲ ಪತ್ನಿಯ ಶವದೊಂದಿಗೆ ವಾಸಿಸಿದ ವ್ಯಕ್ತಿ
ಆರಂಭದಲ್ಲಿ ಮನೆಗೆ ಪೊಲೀಸರು ಆಗಮಿಸಿದಾಗ ಮನೆಯ ಮುಖ್ಯ ಬಾಗಿಲು ಬಂದ್ ಆಗಿತ್ತು. ಆದರೆ ಒಳಭಾಘದಲ್ಲಿ ಯುವತಿಯ ಧ್ವನಿ ಕೇಳಿಸುತ್ತಿತ್ತು. ಆದರೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಅಂಕಿತಾ ದೀಕ್ಷಿತ್ ಮನೆಯ ಬಾಗಿಲು ತೆಗೆಯದೇ ಪ್ರತಿಭಟನೆ ನಡೆಸಲು ಶುರು ಮಾಡಿದ್ದಳು. ಹೀಗಾಗಿ ಪೊಲೀಸರ ಮುಂದೆ ಬಾಗಿಲು ಒಡೆಯುವುದರ ಹೊರತಾಗಿ ಬೇರೆ ದಾರಿ ಇರಲಿಲ್ಲ. ಹೀಗಾಗಿ ಸ್ಥಳಕ್ಕೆ ಬಡಗಿಯನ್ನು ಕರೆಸಿದ ಪೊಲೀಸರು ಆತನ ಮೂಲಕ ಮನೆಯ ಬಾಗಿಲು ತೆಗೆಸಿ ಒಳ ಪ್ರವೇಶಿಸಿದರು. ಮನೆ ಪ್ರವೇಶಿಸಿದ ಲಕ್ನೋ ಪೊಲೀಸರಿಗೆ ಅಂಕಿತಾ ಮಿಶ್ರಾ ಒಂದು ಕೋಣೆಯಲ್ಲಿರುವುದು ಕಂಡು ಬಂದಿದೆ. ಹಾಗೆಯೇ ತಾಯಿ ದೇಹ ಇನ್ನೊಂದು ರೂಮ್‌ನಲ್ಲಿರುವುದು ಕಂಡು ಬಂದಿದೆ. ಅಲ್ಲದೇ ಅಂಕಿತಾ ಮಿಶ್ರಾ ಮಾನಸಿಕ ಆರೋಗ್ಯ ಸರಿ ಇಲ್ಲ ಎಂಬುದು ಗೊತ್ತಾಗಿದೆ.
Udupi: ಮನೆಯೊಂದರಲ್ಲಿ ತಾಯಿ ಮಗಳ ಶವ ಪತ್ತೆ, ಸಾವಿನ ಹಿಂದೆ ಅನುಮಾನದ ಹುತ್ತ
ಶವದೊಂದಿಗೆ ಯುವತಿ ಇರುವುದನ್ನು ನೋಡಿ ಪೊಲೀಸರು ಶಾಕ್‌ಗೆ ಒಳಗಾಗಿದ್ದಾರೆ. ಈ ಹುಡುಗಿ ಜಾಸ್ತಿ ಮಾತನಾಡುತ್ತಿರಲಿಲ್ಲ ಅಲ್ಲದೇ ಪೊಲೀಸರು ಹಲವು ಪ್ರಶ್ನೆ ಕೇಳಿದ ಬಳಿಕ ಮೃತ ಮಹಿಳೆ ಆಕೆಯ ತಾಯಿ ಎಂಬುದು ಗೊತ್ತಾಗಿದೆ. ಅಲ್ಲದೇ ತಾಯಿ ಮೃತಪಟ್ಟು ಈಗಾಗಲೇ ಹತ್ತು ದಿನಗಳೇ ಎಂಬುದು ತಿಳಿದು ಬಂದಿದೆ. ನಂತರ ಪೊಲೀಸರು ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮಹಿಳೆಯ ಸಾವಿಗೆ ಕಾರಣ ಏನಿರಬಹುದು ಎಂದು ತಿಳಿದು ಬರಲಿದೆ.
ಮೃತ ಸುನೀತಾ ದೀಕ್ಷಿತ್ ಹೆಚ್‌ಎಎಲ್‌ನಲ್ಲಿ ಇಂಜಿನಿಯರ್ ಆಗಿದ್ದು ಸೇವೆಯಿಂದ ನಿವೃತ್ತಿಗೊಂಡಿದ್ದರು, 10 ವರ್ಷಗಳ ಹಿಂದೆ ಗಂಡ ರಜನೀಶ್ ದೀಕ್ಷಿತ್‌ನಿಂದ (Rajneesh Dixit) ವಿಚ್ಛೇದನಕ್ಕೊಳಗಾಗಿದ್ದರು. ಅಲ್ಲದೇ ಕ್ಯಾನ್ಸರ್‌ನಿಂದಲೂ (cancer) ಬಳಲುತ್ತಿದ್ದ ಅವರು ತಮ್ಮ 26 ವರ್ಷದ ಪುತ್ರಿಯ ಸಹಾಯದಿಂದ ಬದುಕುತ್ತಿದ್ದರು.
ಕೆಲ ದಿನಗಳ ಹಿಂದೆ ಥೈಲ್ಯಾಂಡ್‌ನ (Thailand) ವ್ಯಕ್ತಿಯೊಬ್ಬ 21 ವರ್ಷಗಳಿಂದ ತನ್ನ ಪತ್ನಿಯ ಶವದೊಂದಿಗೆ ವಾಸಿಸುತ್ತಿದ್ದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿತ್ತು. ಆದರೆ ಆತನೇ ಇತ್ತೀಚೆಗೆ ತನ್ನ ಮೃತ ಹೆಂಡತಿಯ ಶವವನ್ನು ಅಂತ್ಯಸಂಸ್ಕಾರ ಮಾಡುವ ಮೂಲಕ ಈ ವಿಚಾರಕ್ಕೆ ಆತ ವಿದಾಯ ಹೇಳಲು ನಿರ್ಧರಿಸಿದ್ದ. ಆದರೆ ಇದನ್ನು ಗಮನಿಸಿದ ಓರ್ವನಿಗೆ ಈತನ ಹೆಂಡತಿ 20 ವರ್ಷಗಳ ಹಿಂದೆಯೇ ತೀರಿ ಹೋಗಿರುವುದು ನೆನಪಿಗೆ ಬಂದಿದೆ ಇದರಿಂದ ಆತನಿಗೆ ಇದು ವಿಚಿತ್ರವೆನಿಸಿ ಘಟನೆ ವ್ಯಾಪಕವಾಗಿ ಹಬ್ಬಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ