ಏನಿದು ಜಗನ್ ಸರ್ಕಾರದ ಎಗ್ ಪಫ್ ಸ್ಕ್ಯಾಂಡಲ್‌: ಆಂಧ್ರ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸುತ್ತಾ ಪ್ರಕರಣ?

By Anusha Kb  |  First Published Aug 21, 2024, 12:35 PM IST

ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಮೇಲೆ 5 ವರ್ಷಗಳ ಅವಧಿಯಲ್ಲಿ ಎಗ್ ಪಫ್ ಗಾಗಿ 3.62 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಆಡಳಿತಾರೂಢ ಟಿಡಿಪಿ ಮತ್ತು ವಿರೋಧ ಪಕ್ಷ ವೈಎಸ್‌ಆರ್‌ಸಿಪಿ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.


ಅಮರಾವತಿ: ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹಾಗೂ ಪವನ್‌ ಕಲ್ಯಾಣ್ ನೇತೃತ್ವದ ಜನಸೇನಾ ಸಮ್ಮಿಶ್ರ ಸರ್ಕಾರ ಜಾರಿಗೆ ಬಂದ ಮೇಲೆ ಆಂಧ್ರ ಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಮೇಲೆ ಒಂದಾದ ಮೇಲೊಂದರಂತೆ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಅದೇ ರೀತಿ ಈಗ ಆಂಧ್ರ ಮಾಜಿ ಸಿಎಂ ವೈಎಸ್‌ಆರ್ ಪಕ್ಷದ ಮುಖ್ಯಸ್ಥ ಜಗನ್ಮೋಹನ್ ರೆಡ್ಡಿ ಮೇಲೆ ಹೊಸ ಆರೋಪವೊಂದು ಕೇಳಿ ಬಂದಿದೆ. ಅದೇನು ಎಂಬ ಬಗ್ಗೆ ಇಲ್ಲಿದೆ ಡಿಟೇಲ್ಡ್ ಸ್ಟೋರಿ

ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಸರ್ಕಾರ ಆಂಧ್ರ ಪ್ರದೇಶದಲ್ಲಿ ಆಡಳಿತದಲ್ಲಿದ್ದ 5 ವರ್ಷಗಳಲ್ಲಿ ಅಂದರೆ 2019ರಿಂದ 2024ರವರೆಗೆ ಎಗ್‌ ಪಪ್ಸಿಗಾಗಿ (ಮೊಟ್ಟೆಯನ್ನು ಸ್ಟಪ್ ಮಾಡಿರುವ ತಿನಿಸು) ಬರೋಬ್ಬರಿ 3.62 ಕೋಟಿಯನ್ನು ವೆಚ್ಚ ಮಾಡಿದೆಯಂತೆ. ಈ ವಿಚಾರವೂ ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಎಗ್‌ ಪಪ್ಸ್ ಹೆಸರಿನಲ್ಲಿ ಜಗನ್ ರೆಡ್ಡಿ ಸರ್ಕಾರ 3.62 ಕೋಟಿ ಹಣವನ್ನು ದುರ್ಬಳಕೆ ಮಾಡಿದೆ ಎಂದು ವೈಎಸ್‌ಆರ್ ನಾಯಕರು ಆರೋಪಿಸಿದ್ದು, ಈ ವಿವಾದವೀಗ ಆಡಳಿತರೂಢ ಟಿಡಿಪಿ ಸರ್ಕಾರ ಹಾಗೂ ವಿರೋಧ ಪಕ್ಷ ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿ ನಡುವೆ ನಡೆಯುತ್ತಿರುವ ಕೆಸರೆರಚಾಟಕ್ಕೆ ಈಗ  ಹೊಸ ವಿಚಾರ ಸಿಕ್ಕಂತಾಗಿದೆ. 

The CMO reportedly spent ₹3.62 crore on egg puffs over the last five years, averaging ₹72 lakh per year.

The report states that the CMO consumed 993 egg puffs daily, totaling 18 lakh egg puffs in five years. pic.twitter.com/82PRilmciU

— Kolly Censor (@KollyCensor)

Same Ruddudu

TDP spent 25 Lakhs for this Fake Propaganda on YSJagan

Same Content https://t.co/w1jEDL77WW pic.twitter.com/tyHr4QaZuw

— Govt Critic (@VikkiRazzz)

Latest Videos

undefined

 

ಈ ಆರೋಪದ ಪ್ರಕಾರ, ಸಿಎಂ ಸಚಿವಾಲಯ ಸಿಬ್ಬಂದಿ ಪ್ರತಿದಿನವೂ ಅಂದಾಜು 993 ಎಗ್‌ಪಪ್ಸುಗಳನ್ನು ತಿಂದಿದ್ದಾರೆ. ಇದರಿಂದ ವಾರ್ಷಿಕವಾಗಿ 72 ಲಕ್ಷ ರೂಪಾಯಿ ಈ ಸಿಂಗಲ್ ತಿನಿಸಿಗೆ ಖರ್ಚಾಗಿದೆ. ಹೀಗೆ ಒಟ್ಟು 5 ವರ್ಷಗಳಲ್ಲಿ 18 ಲಕ್ಷ ಎಗ್‌ಪಪ್ಸುಗಳನ್ನು ಸಿಎಂ ಕಚೇರಿ ಸಿಬ್ಬಂದಿಗಳು ಸೇವಿಸಿದ್ದಾರೆ. ಇದು ಜಗನ್‌ ರೆಡ್ಡಿ ಅವಧಿಯಲ್ಲಿ ಸಾರ್ವಜನಿಕ ನಿಧಿಯನ್ನು ದುರುಪಯೋಗಪಡಿಸಿಕೊಂಡ ಗಂಭೀರ ಪ್ರಕರಣ ಎಂಬ ಆರೋಪ ಕೇಳಿ ಬಂದಿದೆ. 

ವಿಧಾನಸಭಾ ಚುನಾವಣೆಯಲ್ಲಿ ಆಂಧ್ರ ಪ್ರದೇಶದಲ್ಲಿ ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಸರ್ಕಾರ ಹೀನಾಯವಾಗಿ ಸೋತ ಬಳಿಕ ಆಂಧ್ರಪ್ರದೇಶದಲ್ಲಿ ಎನ್‌ಡಿಎ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಇದು ಇತ್ತೀಚೆಗೆ ಜಗನ್ ಸರ್ಕಾರದ ಅವಧಿಯಲ್ಲಿ ನಡೆದ ಹಣಕಾಸಿನ ಅಕ್ರಮಗಳ ಬಗ್ಗೆ ತನಿಖೆಗೆ ಆದೇಶಿಸಿತ್ತು. ಇದಾದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಇದು ಈಗ ಆಂಧ್ರ ಪ್ರದೇಶದ ಎಗ್ ಪಪ್ ಸ್ಕ್ಯಾಂಡಲ್ ಎಂದೇ  ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ಇದು ಜಗನ್ ಮೋಹನ್ ಅವರ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮಕ್ಕೆ ಇನ್ನೊಂದು ಸೇರ್ಪಡೆ ಎನ್ನಲಾಗುತ್ತಿದೆ. ಇತ್ತೀಚೆಗೆ ಐಷಾರಾಮಿ ರುಷಿಕೊಂಡ ಪ್ಯಾಲೇಸ್‌ ನಿರ್ಮಾಣದಿಂದ ಜಗನ್ ಸಾಕಷ್ಟು ಸುದ್ದಿಯಾಗಿದ್ದರು. ಇದರ ಜೊತೆಗೆ ವೈಯಕ್ತಿಕ ಬಳಕೆಗೆ ವಿಶೇಷ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳನ್ನು ಬಳಸಿದ ಆರೋಪವೂ ಜಗನ್ ಮೇಲಿದೆ. 

ಟಿಬಿ ಡ್ಯಾಂ ಪ್ರಾಧಿಕಾರದಲ್ಲಿ ಆಂಧ್ರದ್ದೇ ಪ್ರಾಬಲ್ಯ, ಕಾಯಂ ಅಧಿಕಾರಿ ನೇಮಕಕ್ಕೆ ರಾಜ್ಯ ಸರ್ಕಾರ ಧ್ವನಿ ಎತ್ತಲಿ

ಆದರೆ ಆಂಧ್ರ ಸರ್ಕಾರದ ಈ ಆರೋಪಕ್ಕೆ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಎಗ್ ಪಪ್‌ ಸ್ಕ್ಯಾಂಡಲ್‌ ಆರೋಪವೂ ಜಗನ್ ಪಕ್ಷದ ಘನತೆಯನ್ನು ಹಾಳು ಮಾಡುವುದಕ್ಕೆ ಟಿಡಿಪಿ ನಾಯಕರು ಮಾಡುತ್ತಿರುವ ಉದ್ದೇಶಪೂರ್ವಕ ಸಂಚು ಆಗಿದೆ ಎಂದು ದೂರಿದ್ದಾರೆ. ಅಲ್ಲದೇ ಇದೊಂದು ಫೇಕ್ ನ್ಯೂಸ್ ಎಂದು ಹೇಳುತ್ತಿರುವ ಟಿಡಿಪಿ ನಾಯಕರು, ಇದಕ್ಕೂ ಹಿಂದಿನ ಚಂದ್ರಬಾಬು ನಾಯ್ಡು ನೇತೃತ್ವದ  ಟಿಡಿಪಿ ಸರ್ಕಾರವೂ ಬರೀ ಉಪಹಾರಕ್ಕಾಗಿ ಐದು ವರ್ಷಗಳಲ್ಲಿ ಅಂದರೆ 2014ರಿಂದ 2019ರವರೆಗೆ 8.5 ಕೋಟಿ ವ್ಯಯ ಮಾಡಿತ್ತು ಎಂದು ಆರೋಪಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಿಡಿಪಿ ವಕ್ತಾರರು, ವೈಎಸ್‌ಆರ್‌ಪಿಸಿ ನಾಯಕರ ಆರೋಪಕ್ಕೆ ಯಾವುದೇ ಆಧಾರ ಇಲ್ಲ ಎಂದು ಹೇಳಿದ್ದಾರೆ.  ಆದರೆ ಈ ಎಗ್ ಪಪ್ ಸ್ಕ್ಯಾಂಡಲ್‌ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್‌ಗೆ ಕಾರಣವಾಗಿದೆ. 

ಕೊಲಂಬಿಯಾದ ಡ್ರಗ್‌ ದೊರೆ ಪ್ಯಾಬ್ಲೋ ಎಸ್ಕೋಬಾರ್‌ಗೆ ಜಗನ್‌ರೆಡ್ಡಿ ಹೋಲಿಸಿದ ಚಂದ್ರಬಾಬು ನಾಯ್ಡು

click me!