ಕನ್ನಡಿಗ ಲೆ|ಜ| ಬಗ್ಗವಳ್ಳಿ ರಾಜುಗೆ ಮಹತ್ವದ ಡಿಜಿಎಂಒ ಹುದ್ದೆ

Kannadaprabha News   | Asianet News
Published : Feb 21, 2021, 12:16 PM ISTUpdated : Feb 21, 2021, 12:18 PM IST
ಕನ್ನಡಿಗ ಲೆ|ಜ| ಬಗ್ಗವಳ್ಳಿ ರಾಜುಗೆ ಮಹತ್ವದ ಡಿಜಿಎಂಒ ಹುದ್ದೆ

ಸಾರಾಂಶ

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಮೂಲದ ಲೆ.ಜ ಬಗ್ಗವಳ್ಳಿ ಸೋಮಶೇಖರ ರಾಜು (ಬಿ.ಎಸ್‌. ರಾಜು) ಅವರನ್ನು ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ) ಎಂದು ನೇಮಿಸಲಾಗಿದೆ. 

ನವದೆಹಲಿ (ಫೆ.21): ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಮೂಲದ ಲೆ.ಜ ಬಗ್ಗವಳ್ಳಿ ಸೋಮಶೇಖರ ರಾಜು (ಬಿ.ಎಸ್‌. ರಾಜು) ಅವರನ್ನು ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ) ಎಂದು ನೇಮಿಸಲಾಗಿದೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಅಧಿಕಾರ ಸ್ವೀಕಾರ ಸಾಧ್ಯತೆ ಇದೆ.

ಡಿಜಿಎಂಒ ಹುದ್ದೆ ಮಹತ್ವದ್ದಾಗಿದ್ದು ದೇಶದ ಗಡಿಯಲ್ಲಿನ ಸೇನಾ ಕಾರಾರ‍ಯಚರಣೆಗಳ ಉಸ್ತುವಾರಿ ನೋಡಿಕೊಳ್ಳುತ್ತದೆ.

ಬೆದರಿದ ಚೀನಾದಿಂದ ಕುತಂತ್ರ; ಗಲ್ವಾನ್ ಘರ್ಷಣೆ ವಿಡಿಯೋ ಬಿಡುಗಡೆ ಮಾಡಿ ಪೇಚಿಗೆ ಸಿಲುಕಿದ PLA! ..

ರಾಜು ಈಗ ಕಾಶ್ಮೀರದಲ್ಲಿ ಉಗ್ರ ಕೃತ್ಯಗಳನ್ನು ನಿಗ್ರಹಿಸುವ ‘ಚಿನಾರ್‌ ಕೋರ್‌ ಪಡೆ’ ಮುಖ್ಯಸ್ಥರಾಗಿ ಕಾರ‍್ಯನಿರ್ವಹಿಸುತ್ತಿದ್ದಾರೆ. ಚಿನಾರ್‌ ಕೋರ್‌ನಲ್ಲಿ ರಾಜು ಅವರು, ‘ಹತ್ಯೆ ಬೇಡ, ಶರಣಾಗತಿಗೆ ಆದ್ಯತೆ’ ನೀತಿ ಅನುಸರಿಸಿದ್ದು, ಈ ಅವಧಿಯಲ್ಲಿ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಇಳಿದಿವೆ. ಶರಣಾಗತಿ ಹೆಚ್ಚಿವೆ. ಇತ್ತೀಚೆಗೆ ರಾಜು ಅವರಿಗೆ ಉತ್ತಮ ಯುದ್ಧ ಸೇವಾ ಪದಕ ದೊರೆತಿತ್ತು.

ಈಗ ರಾಜು ಅವರ ಸ್ಥಾನಕ್ಕೆ ಲೆ.ಜ ಡಿ.ಪಿ. ಪಾಂಡೆ ಅವರನ್ನು ನೇಮಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ