ಮತ್ತೆ ಕೊರೋನಾ ಪ್ರಕರಣ ಭಾರೀ ಏರಿಕೆ : ಬಲಿಯೂ ಹೆಚ್ಚಳ

Kannadaprabha News   | Asianet News
Published : Feb 21, 2021, 10:23 AM ISTUpdated : Feb 21, 2021, 10:43 AM IST
ಮತ್ತೆ ಕೊರೋನಾ ಪ್ರಕರಣ ಭಾರೀ ಏರಿಕೆ : ಬಲಿಯೂ ಹೆಚ್ಚಳ

ಸಾರಾಂಶ

ದೇಶದಲ್ಲಿ ಮತ್ತೆ ಕೊರೋನಾ ಮಹಾಮಾರಿ ಹೆಚ್ಚಾಗಿದೆ. ದಾಖಲೆ  ಪ್ರಮಾಣದಲ್ಲಿ ಕೊರೋನಾ ಹೆಚ್ಚಳವಾಗಿದೆ. ಕೊರೋನಾದಿಂದ ಆಗುತ್ತಿರುವ ಸಾವಿನ ಸಂಖ್ಯೆಯೂ ಏರಿಕೆಯತ್ತಲೇ ಸಾಗಿದೆ. 

ನವದೆಹಲಿ (ಫೆ.21):  ದೇಶದಲ್ಲಿ ಕೊರೋನಾ ಹಾವಳಿ ಕಡಿಮೆ ಆಗುತ್ತಿದೆ ಎನ್ನುವಾಗಲೇ ಶನಿವಾರ ದೇಶದಲ್ಲಿ 13,993 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 22 ದಿನಗಳ ಅತ್ಯಧಿಕ ಏಕದಿನದ ಅಂಕಿಸಂಖ್ಯೆಯಾಗಿದೆ. ಇದೇ ವೇಳೆ, ಒಂದೇ ದಿನ 101 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಈ ಹಿಂದೆ ಜನವರಿ 29ರಂದು 18,855 ಪ್ರಕರಣಗಳು ದಾಖಲಾಗಿದ್ದವು. ಇದಾದ ನಂತರ ದೈನಂದಿನ ಪ್ರಕರಣಗಳ ಸಂಖ್ಯೆ ಇಳಿಮುಖದತ್ತ ಸಾಗಿತ್ತು. 3 ಬಾರಿ 10 ಸಾವಿರಕ್ಕಿಂತ ಕಡಿಮೆ ಕೇಸುಗಳು ವರದಿಯಾಗಿದ್ದವು.

ನೆರೆ ರಾಜ್ಯಗಳಲ್ಲಿ ಹೆಚ್ಚುತ್ತಿದೆ ಕೊರೊನಾ ಕೇಸ್‌: ಆರೋಗ್ಯ ಸಚಿವರಿಂದ ಸುದ್ಧಿಗೋಷ್ಠಿ

ಈ ನಡುವೆ, 13,993 ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1.09 ಕೋಟಿಗೆ ಏರಿದೆ. ಇದೇ ವೇಳೆ,1.06 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 1.43 ಲಕ್ಷ ಇದೆ. ಇದು ಕಳೆದ ವಾರ 1.36 ಲಕ್ಷಕ್ಕೆ ಕುಸಿದಿತ್ತು ಎಂಬುದು ಇಲ್ಲಿ ಗಮನಾರ್ಹ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ತಂಗಿಯರಿಗಾಗಿ ಅವರನ್ನು ಬಿಟ್ಟುಬಿಡಿ: ತನ್ನ ಕೊಲ್ಲಲೆತ್ನಿಸಿದ ತಂದೆಯ ಬಿಡುಗಡೆಗೆ ಬೇಡಿದ ಬಾಲಕಿ
25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ