ಕೊರೋನಾಗೆ ನಲುಗಿದ ರಾಷ್ಟ್ರರಾಜಧಾನಿ ದೆಹಲಿಗೆ ಭೂಕಂಪದ ಶಾಕ್!

By Suvarna NewsFirst Published Apr 13, 2020, 6:19 PM IST
Highlights

ಕೊರೋನಾಗೆ ನಲುಗಿದ ದೆಹಲಿಗೆ ಮತ್ತೊಂದು ಏಟು| ರಾಷ್ಟ್ರ ರಾಜಧಾನಿಯಲ್ಲಿ ಎರಡು ಬಾರಿ ಭೂಕಂಪ| ಝೋನ್ ನಾಲ್ಕರಲ್ಲಿದೆ ದೆಹಲಿ

ನವದೆಹಲಿ(ಏ.13): ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ ಎರಡು ಬಾರಿ ಭೂಕಂಪವಾಗಿದೆ. ಈ ಮೂಲಕ ಕೊರೋನಾ ತಾಂಡವಕ್ಕೆ ನಲುಗಿರುವ ರಾಷ್ಟ್ರರಾಜಧಾನಿಗೆ ಮತ್ತೊಂದು ಶಾಕ್ ಲಭಿಸಿದೆ. ಸೋಮವಾರ ಮಧ್ಯಾಹ್ನ 1 ಗಂಟೆ 26 ನಿಮಿಷಕ್ಕೆ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 2.7 ಎಂದು ನಮೂದಾಗಿದೆ. ಇದಕ್ಕೂ ಮುನ್ನ ದೆಹಲಿ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಭಾನುವಾರ ಸಂಜೆ ಭೂಕಂಪದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ತೋರಿಸುತ್ತಿತ್ತು.

ಭಾರತದಲ್ಲಿ ವಿನಾಶಕಾರಿ ಭೂಕಂಪಕ್ಕೂ ಈ ಮೊದಲೂ ಸಂಭವಿಸಿವೆ. 2001ರಲ್ಲಿ ಗುಜರಾತ್‌ನ ಕಚ್ಛ್ ಕ್ಷೇತ್ರದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಸದ್ಯ ದೆಹಲಿಯಲ್ಲಿ ಸಂಭವಿಸಿರುವ ಭೂಕಂಪದಲ್ಲಿ ಯಾವುದೇ ಸಾವು ನೋವುಗಳ ಕುರಿತು ವರದಿಯಾಗಿಲ್ಲ.

ಜಮಾತ್‌ಗೆ ಹಾಜರಾದ ತಬ್ಲೀಘಿಗೆ ಕೊರೋನಾ, ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಶರಣು

ಭೂಕಂಪ ವಿಚಾರದಲ್ಲಿ ಬಹಳ ಸೂಕ್ಷ್ಮ ದೆಹಲಿ

ಭೂಕಂಪ ವಿಚಾರವವಾಗಿ ದೆಹಲಿ ಬಹಳ ಸೂಕ್ಷ್ಮ. ದೆಹಲಿ ಹಾಗೂ ಆಸುಪಾಸಿನ ಇಲಾಖೆಯನ್ನು ಭೌಗೋಳಿಕ ತಜ್ಞರು ಝೋನ್ 4ರಲ್ಲಿಟ್ಟಿದ್ದಾರೆ. ಈ ಕ್ಷೇತ್ರದಲ್ಲಿ 7.9 ರಷ್ಟು ತೀವ್ರತೆಯ ಭೂಕಂಪವೂ ಸಂಭವಿಸಬಹುದು. ಇಂತಹಹ ಭೂಕಂಪ ಸಂಭವಿಸಿದರೆ, ಜನರ ಜೀವಕ್ಕೂ ಅಪಾಯ.

ಅದೇನಿದ್ದರೂ ಸದ್ಯ ಸಂಭವಿಸಿರುವ ಭೂಕಂಪ ದೆಹಲಿಗೆ ಬಹುದೊಡ್ಡ ಹೊಡೆತ ನೀಡಿದೆ. ಈಗಾಗಲೇ ಕೊರೋನಾ ಅಟ್ಟಹಾಸ ಮಿತಿ ಮೀರಿದ್ದು, ಭೂಕಂಪ ಮತ್ತೊಂದು ಏಟು ನೀಡಿದೆ. 

click me!