
ಗುಜರಾತ್(ಏ.13): ಉತ್ತರ ಭಾರದದಲ್ಲಿ ಬೀಡಾ, ಪಾನ್, ಮಾವ ಇಲ್ಲದೆ ಹಲವರ ಬದುಕಿಲ್ಲ. ಆದರೆ ಸದ್ಯ ಲಾಕ್‌ಡೌನ್ ತರಕಾರಿ, ಹಾಲು, ದಿನಸಿ ಹೊರತು ಪಡಿಸಿ ಇನ್ಯಾವುದು ಸಿಗುವುದಿಲ್ಲ. ಹೀಗಿರುವಾಗ ರಾಜ್‌ಕೋಟ್‌ನ ರವಿ ಭದಾನಿಯಾ ತಲೆಗೆ ಅದ್ಭುತ ಐಡಿಯಾ ಹೊಳೆದಿದೆ. ಪ್ರತಿ ಮಾವ(ಟೊಬ್ಯಾಕೋ ಮಿಶ್ರಿತ) ಪಾನ್ ಖರೀದಿಸುತ್ತಿದ್ದ ತನ್ನ ಗೆಳಯನಿಗೆ ಪೋನ್ ಕರೆ ಮಾಡಿದ್ದಾನೆ. ತನಗೆ ಎರಡು ಮಾವಾ ಕಟ್ಟಿಡಲು ಸೂಚಿಸಿದ್ದಾನೆ.
ಲಾಕ್‌ಡೌನ್ ವೇಳೆ ಕ್ರಿಕೆಟ್ ಆಡುತ್ತಿದ್ದ ಮೂವರು ಈಗ ಕಂಬಿ ಹಿಂದೆ..!..
ಲಾಕ್‌ಡೌನ್ ಕಾರಣ ಹೊರಗೆ ಹೋಗುವಂತಿಲ್ಲ, ಇನ್ನು ಪಾನ್ ಬೀಡಾಗಳು ಸಿಗುವ ಮಾತೇ ಇಲ್ಲ. ಹೀಗಾಗಿ ತನ್ನಲ್ಲಿರುವ ಡ್ರೋನ್ ಮೂಲಕ ಪಾನ್ ತರಿಸುವ ಪ್ಲಾನ್ ಮಾಡಿದ್ದಾನೆ. ಡ್ರೋನ್ ಬಳಕೆಯಿಂದ ಕಾನೂನು ಉಲ್ಲಂಘನೆಯಾಗಲ್ಲ, ಕೊರೋನಾ ಹರಡುವುದಿಲ್ಲ. ಸ್ಯಾನಿಟೈಸರ್ ಬಳಸಿದರೆ ಎಲ್ಲವೂ ಸುಸೂತ್ರ ಎಂದು ಪ್ಲಾನ್ ರೆಡಿ ಮಾಡಿದ್ದಾನೆ. ಬಳಿಕ ಗೆಳೆಯ ಮನೆಗೆ ಡ್ರೋನ್ ಬಿಟ್ಟಿದ್ದಾನೆ. ಸುಮಾರು 100 ಮೀಟರ್ ದೂರದಲ್ಲಿರುವ ಗೆಳೆಯ ಹೀರೆನ್ ಗರ್ಧಾರಿಯಾ ಎರಡು ಮಾವಾ ತಯಾರಿಸಿ ಡ್ರೋನ್‌ಗೆ ಕಟ್ಟಿದ್ದಾನೆ.
ಏ. 15 ರಿಂದ ಲಾಕ್‌ಡೌನ್ 2.0 ಶುರು; ಕೇಂದ್ರದಿಂದ ಹೊಸ ಮಾರ್ಗಸೂಚಿ ರಿಲೀಸ್
ಮಾವಾ ಹೊತ್ತ ಡ್ರೋನ್ ನೇರವಾಗಿ ರವಿ ಭದಾನಿಯ ಮನೆಯ ಟೆರೆಸ್ ಮೇಲೆ ಬಂದಿಳಿದಿದೆ. ಇದನ್ನು ರವಿ ಭದಾನಿ ವಿಡಿಯೋ ಚಿತ್ರಿಕೀರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ರವಿ ಭದಾನಿಯಾ ಐಡಿಯಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಷ್ಟೇ ಅಲ್ಲ ಇದೇ ರೀತಿ ಎರಡು ಮದ್ಯದ ಬಾಟಲಿ ತರಿಸಿಕೊಡುವಂತೆ ಹಲವರು ಕೇಳಿ ಕೊಂಡಿದ್ದಾರೆ.
ತನ್ನ ಐಡಿಯಾ, ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಂದ ಪ್ರತಿಕ್ರಿಯೆಗೆ ರವಿ ಭದಾನಿಯಾ ಹಿರಿ ಹಿರಿ ಹಿಗ್ಗಿದ್ದಾನೆ. ಇಲ್ಲಿಗೆ ಪಾನ್ ಬೀಡಾ ಕತೆ ಮುಗಿಯುವುದಿಲ್ಲ. ಕತೆಗೆ ಟ್ವಿಸ್ಟ್ ಇರೋದೆ ಇಲ್ಲಿ. ವೈರಲ್ ವಿಡಿಯೋ ರಾಜ್‌ಕೋಟ್ ಪೊಲೀಸರ ಕೈಗೂ ಸಿಕ್ಕಿದೆ. ತಕ್ಷಣವೇ ತನಿಖೆ ನಡೆಸಿದ್ದಾರೆ. ಬಳಿಕ ಲಾಕ್‌ಡೌನ್ ವೇಳೆ ಯಾವುದೇ ರೀತಿಯ ಟೋಬ್ಯಾಕೋ, ಅಲ್ಕೋಹಾಲ್, ಗುಟ್ಕಾ ಸರಬರಾಜು ಮಾಡುವಂತಿಲ್ಲ. ಇದು ಕಾನೂನು ಉಲ್ಲಂಘನೆ. ಇದರ ಅಡಿಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ