72ರ ವೃದ್ಧನ ಕೈ ಹಿಡಿದ 27ರ ಯುವತಿ: ಹಿಂದೂ ಸಂಪ್ರದಾಯದಂತೆ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ

Published : Sep 22, 2025, 11:00 AM IST
Hindu Wedding

ಸಾರಾಂಶ

ರಾಜಸ್ಥಾನದ ಜೋಧ್‌ಪುರದಲ್ಲಿ, 72 ವರ್ಷದ ಉಕ್ರೇನ್ ಮೂಲದ ಸ್ಟಾನಿಸ್ಲಾವ್ ಹಾಗೂ 27 ವರ್ಷದ ಅನ್ಹೆಲಿನಾ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ನಾಲ್ಕು ವರ್ಷಗಳ ಲಿವ್-ಇನ್ ಸಂಬಂಧದ ನಂತರ ಹಸೆಮಣೆ ಏರಿದ ಈ ಜೋಡಿಯ ವಯಸ್ಸಿನ ಅಂತರವು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

72ರ ವೃದ್ಧನ ಕೈ ಹಿಡಿದ 27ರ ಯುವತಿ:

ಸೆಲೆಬ್ರಿಟಿಗಳ ಮದುವೆ ಹಾಗೂ ರಾಜಮನೆತನದ ರೋಮಾಂಚಕ ಸಂಸ್ಕೃತಿಗೆ ಹೆಸರಾಗಿರುವ ರಾಜಸ್ಥಾನದ ಜೈಪುರದಲ್ಲಿ ಅಪರೂಪದ ಮದುವೆಯೊಂದು ನಡೆಯಿತು. 27ರ ಹರೆಯದ ಯುವತಿಯೊಬ್ಬಳು 72ರ ಹರೆಯದ ವೃದ್ಧನ ಕೈ ಹಿಡಿದು ಅಚ್ಚರಿ ಮೂಡಿಸಿದರು. ಉಕ್ರೇನ್ ಮೂಲದ ಈ ಜೋಡಿ ರಾಜಸ್ಥಾನದ ಜೋಧ್‌ಪುರದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು. 72 ವರ್ಷದ ಸ್ಟಾನಿಸ್ಲಾವ್ ಹಾಗೂ 27 ವರ್ಷದ ಅನ್ಹೆಲಿನಾ ಹಿಂದೂ ಸಂಪ್ರದಾಯದಂತೆ ಮದುವೆ ಆದ ಉಕ್ರೇನ್ ಜೋಡಿ. ಈ ಜೋಡಿ 4 ವರ್ಷಗಳ ಕಾಲ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದು, ತಮ್ಮ ಈ ಸಂಬಂಧಕ್ಕೆ ಮದುವೆಯ ಮುದ್ರೆಯೊತ್ತಿದ್ದಾರೆ. ಈ ಜೋಡಿ ಉದಯ್‌ಪುರ ಅಥವಾ ಜೈಪುರದಲ್ಲಿ ಮದುವೆ ಆಗುವ ಬಗ್ಗೆ ಯೋಚನೆ ಮಾಡಿದರೂ ಕಡೆಗೆ ಜೋಧ್‌ಪುರದಲ್ಲಿ ಹಸೆಮಣೆಗೆ ಕಾಲಿರಿಸಿದ್ದಾರೆ.

ಜೋಧ್‌ಪುರದಲ್ಲಿ ಹಿಂದೂ ಸಂಪ್ರದಾಯದಂತೆ ಅದ್ಧೂರಿ ವಿವಾಹ

ಉಕ್ರೇನಿಯನ್ ಮೂಲದ ವಧು ಹಾಗೂ ವರ ತಮ್ಮ ಮದುವೆಯ ಈ ವಿಶೇಷ ದಿನದಂದು ಭಾರತೀಯ ಧಿರಿಸಿನಲ್ಲಿ ಕಂಗೊಳಿಸಿದ್ದಾರೆ. ವರ ಶೇರ್ವಾನಿ ಹಾಗೂ ಪೇಟಾ ಧರಿಸಿದ್ದರೆ ವಧು ಸಂಪ್ರದಾಯಿಕ ಮಾರ್ವಾಡಿ ವಧು ಧರಿಸುವಂತಹ ಧಿರಿಸು ಧರಿಸಿದ್ದಾರೆ. ಜೋಧ್‌ಪುರದ ಹೊಟೇಲ್‌ನಲ್ಲಿ ನಡೆದ ಈ ಮದುವೆಯಲ್ಲಿ ವಧುವರರ ಸ್ನೇಹಿತರು ಪರಿಚಯಸ್ಥರು ಹಾಗೂ ಸ್ಥಳೀಯರು ಭಾಗಿಯಾಗಿ ಭಾರತೀಯ ಸಂಪ್ರದಾಯದಂತೆ ವಿವಾಹ ನಡೆಸಿಕೊಟ್ಟರು. ಹಳದಿ ಅಥವಾ ಅರಿಶಿಣ ಶಾಸ್ತ್ರದೊಂದಿಗೆ ಆರಂಭವಾದ ಮದುವೆಯ ಆಚರಣೆಗಳು ಸಂಜೆ ಮದುವೆಯ ದಿಬ್ಬಣ ಕಾರ್ಯಕ್ರಮದೊಂದಿಗೆ ಮುಕ್ತಾಯವಾಯ್ತು.

ಭಾರತೀಯ ಧಿರಿಸಿನಲ್ಲಿ ಮಿಂಚಿದ ಉಕ್ರೇನ್ ಜೋಡಿ

ದಂಪತಿ ಸಪ್ತಪದಿ ತುಳಿಯುವುದಕ್ಕೂ ಮೊದಲು ಪುರೋಹಿತರು ಪಾಣಿಗ್ರಹಣ ಮತ್ತು ಹತ್ಲೆವಾ ಎಂಬ ಸಂಪ್ರದಾಯವೂ ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಂಪ್ರದಾಯಿಕ ವಿಧಿವಿಧಾನಗಳನ್ನು ಈ ನವಜೋಡಿಯ ಕೈಯಲ್ಲಿ ಮಾಡಿಸಿದರು. ಈ ಮದುವೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಅನೇಕರಿಗೆ ಇವರ ನಡುವಿನ ವಯಸ್ಸಿನ ಅಂತರ ಹುಬ್ಬೇರುವಂತೆ ಮಾಡಿದೆ. ಕೆಲವರು ಇವರು ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ. ಇನ್ನೂ ಕೆಲವರು ಇವರ ನಡುವಿನ ವಯಸ್ಸಿನ ಅಂತರ ನೋಡಿ ಶುಗರ್ ಡ್ಯಾಡಿ ಎಂದು ಚೇಡಿಸಿದ್ದಾರೆ. ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ವಯಸ್ಸಿನ ಅಂತರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ:

ಇನ್ನೂ ಕೆಲವರು ಅಜ್ಜ ಹಾಗೂ ಮೊಮ್ಮಗಳು ಎಂದು ಕಾಮೆಂಟ್ ಮಾಡಿದ್ದಾರೆ. ಆತನಿಗೆ ನೆಮ್ಮದಿ ಹಾಗೂ ಯೌವ್ವನ ಬೇಕು, ಆಕೆಗೆ ಆತನ ಹಣ ಬೇಕು ಹಾಗೆಯೇ ಆತನಿಗಿರುವ ದಿನಗಳು ಕಡಿಮೆ ಎಂಬುದರ ಅರಿವು ಆಕೆಗಿದೆ ಎಂದು ಕೆಲವರು ಟೀಕಿಸಿದ್ದಾರೆ. ವಯಸ್ಸು ದೊಡ್ಡ ವಿಷ್ಯ ಅಲ್ಲ ಹಣದ ವಿಷ್ಯ ಇದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಇವರ ವಯಸ್ಸಿನ ಅಂತರದ ವಿಚಾರವೇ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ:  ಯುವ ದಸರಾದಲ್ಲಿ ಧೂಳೆಬ್ಬಿಸಿದ ಚಿಪ್ಸ್ ಮಾರೋ ಹುಡುಗನ ಡಾನ್ಸ್.. ಸಾಥ್ ಕೊಟ್ಟ ಮೈಸೂರ್ ಹುಡ್ಗಿ... ವೀಡಿಯೋ ಭಾರಿ ವೈರಲ್

ಇದನ್ನೂ ಓದಿ: ಮುದ್ದು ಮಾಡೋದೇ ಕೆಲಸ : ಸಂಬಳ 30 ಲಕ್ಷ

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌