ಕಟಕಟೆಯಲ್ಲಿ ಬಿಜೆಪಿಯ 'ಕಮಲ' ಚಿಹ್ನೆ! ಮದ್ರಾಸ್‌ ಹೈಕೋರ್ಟ್‌ನಲ್ಲಿ ಭವಿಷ್ಯ ನಿರ್ಧಾರ!

By Suvarna NewsFirst Published Dec 8, 2023, 11:30 PM IST
Highlights

ಇಷ್ಟು ವರ್ಷಗಳ ಕಾಲ ಬಿಜೆಪಿ ಅಂದರೆ ನೆನಪಾಗೋದು, ಕಮಲದ ಹೂವು. ಆದರೆ, ಈಗ ಬಿಜೆಪಿ ಪಕ್ಷದ ಚುನಾವಣಾ ಚಿಹ್ನೆಯಾಗಿರುವ ಕಮಲದ ಹೂವಿಗೆ ಆಕ್ಷೇಪ ಎದುರಾಗಿದೆ.
 

ಚೆನ್ನೈ (ಡಿ.8): ಮದ್ರಾಸ್‌ ಹೈಕೋರ್ಟಿನಲ್ಲೊಂದು ಅಸಾಮಾನ್ಯ ದಾವೆಯೊಂದು ದಾಖಲಾಗಿದೆ. ತಮಿಳುನಾಡಿನಲ್ಲಿ ಬಿಜೆಪಿಯ ರಾಜಕೀಯ ಪ್ರಭಾವ ಅಥವಾ ಉಪಸ್ಥಿತಿ ನಗಣ್ಯವೆಂದೇ ಹೇಳಬಹುದು. ಆದರೆ ಬಿಜೆಪಿಯ 'ಚಿಹ್ನೆ'ಯನ್ನು ಮಾತ್ರ ಈಗ ಕಟಕಟೆಯಲ್ಲಿ ನಿಲ್ಲಿಸಲಾಗಿದೆ! ಬಿಜೆಪಿಯ ಚಿಹ್ನೆಯಾಗಿರುವ ಕಮಲವು  ರಾಷ್ಟ್ರೀಯ ಹೂವಾಗಿದ್ದು, ಧಾರ್ಮಿಕ ಸಂಕೇತವೂ ಆಗಿದೆ. ಹಾಗಾಗಿ ಅದನ್ನ ರಾಜಕೀಯ ಪಕ್ಷದ ಚಿಹ್ನೆಯಾಗಿ ಬಳಸುವುದು  ರಾಷ್ಟ್ರೀಯ ಸಮಗ್ರತೆಗೆ ಅಗೌರವ ತೋರಿದಂತೆ ಎಂದು ರಮೇಶ್‌ ಎಂಬುವವರು  ಮದ್ರಾಸ್‌ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಚಿಹ್ನೆ ನೀಡುವಾಗ ಭಾರತೀಯ ಚುನಾವಣಾ ಆಯೋಗವು ತನ್ನದೇ ನೀತಿ-ನಿಯಮಗಳನ್ನು ಉಲ್ಲಂಘಿಸಿದೆ ಎಂದು  ತಮಿಳುನಾಡು ಕೇಂದ್ರಿತ ಅಹಿಂಸಾ ಸೋಶಿಯಲಿಸ್ಟ್‌ ಪಕ್ಷದ ಮುಖ್ಯಸ್ಥರಾಗಿರುವ ರಮೇಶ್‌ ವಾದಿಸಿದ್ದಾರೆ. ಈ ರೀತಿಯ ಪಕ್ಷಪಾತದಿಂದಾಗಿ ಇತರ ಪಕ್ಷಗಳಿಗೆ ಅನ್ಯಾಯವಾಗುತ್ತಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಎಸ್‌ವಿ  ಗಂಗಾಪುರ್‌ವಾಲಾ ಹಾಗೂ ನ್ಯಾ| ಡಿ. ಭರತ ಚಕ್ರವರ್ತಿ ದ್ವಿಸದಸ್ಯ ಪೀಠ  ದಾವೆಯ ಹಿಂದಿನ ಸದುದ್ದೇಶವನ್ನು ಖಾತ್ರಿಪಡಿಸಲು 20 ಸಾವಿರ ರೂಪಾಯಿಗಳನ್ನು ಡಿಪಾಸಿಟ್‌ ಮಾಡಲು ಅರ್ಜಿದಾರರಿಗೆ ಸೂಚಿಸಿದ್ದಾರೆ. ಈ ಹಿಂದೆ ಸದ್ರಿ ವಿಷಯದ ಬಗ್ಗೆ ವಿಚಾರಣೆ ನಡೆದಿದ್ದು, ಈಗಾಗಲೇ  ತೀರ್ಮಾನವಾಗಿದ್ದರೆ, ಡಿಪಾಸಿಟ್‌ ಮೊತ್ತವನ್ನು ಜಪ್ತಿಮಾಡಲಾಗುವುದು ಎಂದು ಹೈಕೋರ್ಟ್‌ ಎಚ್ಚರಿಸಿದೆ.  

Latest Videos

ಕೇಂದ್ರ ಸಂಪುಟಕ್ಕೆ 3 ಸಚಿವರ ರಾಜೀನಾಮೆ: 4 ಸಚಿವರಿಗೆ ಹೆಚ್ಚುವರಿ ಖಾತೆ; ಶೋಭಾಗೆ ಆಹಾರ, ಆರ್‌ಸಿಗೆ ಜಲಶಕ್ತಿ ಖಾತೆ 

ಡಿ. 18ರೊಳಗೆ 20 ಸಾವಿರ ರೂ.ಗಳನ್ನು ಡಿಪಾಸಿಟ್‌ ಮಾಡುವಂತೆ ಸೂಚಿಸಿರುವ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ  ನ್ಯಾ| ಎಸ್‌ವಿ  ಗಂಗಾಪುರ್‌ವಾಲಾ ಡಿ.18 ರಂದು ಅರ್ಜಿ ವಿಚಾರಣೆಯನ್ನು ಮುಂದೂಡಿದ್ದಾರೆ.

ಲೀಲಾವತಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ!

click me!