
ಕಾಸರಗೋಡು (ಆ.13): ಕಳೆದುಹೋಯ್ತು ಅಂತ ಭಾವಿಸಿದ್ದ ವಸ್ತು ಸಿಕ್ಕಿದಾಗ ಮನಸ್ಸು ಖುಷಿಯಿಂದ ತುಂಬುತ್ತೆ. ಬಸ್ ಪ್ರಯಾಣದಲ್ಲಿ ಕಳೆದುಹೋದ ನಾಲ್ಕೂವರೆ ಪವನ್ ತಾಳಿ ವಾರದ ನಂತರ ಮನೆಯ ಹೊರಗಡೆ ಇರುವ ಸಿಟ್‌ಔಟ್‌ನಲ್ಲಿ ಸಿಕ್ಕಿದೆ. 'ಒಂಬತ್ತು ದಿನ ಇದು ನನ್ನ ಹತ್ರ ಇತ್ತು, ಮನಸ್ಸಿಗೆ ತುಂಬಾ ಬೇಜಾರಾಯ್ತು, ಅದಕ್ಕೆ ವಿಳಾಸ ಹುಡುಕಿ ತಂದು ಇಟ್ಟಿದ್ದೀನಿ..' ಎಂದು ಅನಾಮಿಕ ವ್ಯಕ್ತಿಯೊಬ್ಬ ಚೀಟಿ ಬರೆದಿಟ್ಟಿದ್ದಾರೆ. 27 ವರ್ಷಗಳ ಹಿಂದೆ ಗಂಡ ಕಟ್ಟಿದ್ದ ತಾಳಿ ಸಿಕ್ಕಿದ ಖುಷಿಯಲ್ಲಿ ಕಾಸರಗೋಡಿನ ಗೀತಾ ಇದ್ದಾರೆ.
"ಒಂಬತ್ತು ದಿನದಿಂದ ಈ ತಾಳಿ ನನ್ನ ಹತ್ರ ಇತ್ತು. ಮೊದಲು ಖುಷಿ ಪಟ್ಟೆ. ಆದರೆ, ತೆಗೆದುಕೊಳ್ಳೋದಕ್ಕೆ ಭಯ ಆಗ್ತಿತ್ತು. ವಾಟ್ಸಪ್ ಗ್ರೂಪ್‌ನಲ್ಲಿ ಮೆಸೇಜ್ ನೋಡಿದೆ. ಗಂಡ ಕಟ್ಟಿರೋ ತಾಳಿ ಅಂತ ಗೊತ್ತಾಯ್ತು. ಬೇರೆಯವರ ವಸ್ತು ಬೇಡ ಅಂತ ಅಂದುಕೊಂಡು ವಿಳಾಸ ಹುಡುಕಿ ತಂದಿಟ್ಟಿದ್ದೀನಿ. ನನ್ನ ಪರಿಚಯ ಬೇಡ. ಇಷ್ಟು ದಿನ ಇಟ್ಟುಕೊಂಡಿದ್ದಕ್ಕೆ ಕ್ಷಮಿಸಿ. ನೋವುಂಟು ಮಾಡಿದ್ದಕ್ಕೆ ಕ್ಷಮಿಸಿ"- ಅಂತಾ ಅನಾಮಿಕ ವ್ಯಕ್ತಿಯೊಬ್ಬ ಚೀಟಿ ಬರೆದು ಇಟ್ಟಿದ್ದಾರೆ.
ಗಂಡ ಹೊರಗೆ ಹೋಗುವಾಗ ವರಾಂಡದಲ್ಲಿ ತಾಳಿ ಮತ್ತು ಚೀಟಿ ನೋಡಿದ್ರಂತೆ. ತುಂಬಾ ಆಶ್ಚರ್ಯ ಆಯ್ತು. 27 ವರ್ಷದಿಂದ ತಾಳಿ ತೆಗೆದಿರಲಿಲ್ಲ. ಕಳೆದುಹೋದಾಗ ಎರಡು ಮೂರು ದಿನ ನಿದ್ದೆನೇ ಬರಲಿಲ್ಲ. ಎಲ್ಲಾ ವಾಟ್ಸಪ್ ಗ್ರೂಪ್ ಗಳಲ್ಲಿ ಹಾಕಿದ್ದೆ. ಎಲ್ಲರಿಗೂ ಧನ್ಯವಾದಗಳು. ಯಾರು ತಂದಿಟ್ಟಿದ್ರು ಅಂತ ಗೊತ್ತಿದ್ರೆ ಏನಾದ್ರೂ ಕೊಡ್ತಿದ್ದೆ ಅಂತ ಗೀತಾ ಹೇಳಿದ್ದಾರೆ.
ತಾಳಿ ಸಿಗಲ್ಲ ಅಂತಲೇ ಅಂದುಕೊಂಡಿದ್ದೆ ಅಂತ ಗೀತಾ ಅವರ ಗಂಡ ದಾಮೋದರನ್ ಹೇಳಿದ್ದಾರೆ. ದೇವರ ದಯೆ ಇದೆ. ಕಷ್ಟದಲ್ಲಿರೋರು ತೆಗೆದುಕೊಂಡಿದ್ರೆ ಅವರಿಗೆ ಕೆಟ್ಟದಾಗಲಿ ಅಂತ ಬೇಡ್ಕೋಬೇಡಿ, ಅವರಿಗೆ ಒಳ್ಳೆಯದಾಗಲಿ ಅಂತ ಬೇಡ್ಕೊಳ್ಳಿ ಅಂತ ಹೆಂಡತಿಗೆ ಹೇಳಿದ್ದೆ. ದೇವರು ಅವರ ಮನಸ್ಸು ಬದಲಾಯಿಸಿದ್ದಾನೆ. ಅಣ್ಣ ತಂದಿದ್ದ ತಾಳಿ ಇದು. ತುಂಬಾ ಅಮೂಲ್ಯವಾದದ್ದು. ಯಾರು ತಂದಿಟ್ಟಿದ್ದಾರೋ ಅವರಿಗೆ ಧನ್ಯವಾದಗಳು ಅಂತ ಗೀತಾ ಮತ್ತು ದಾಮೋದರನ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ