'ಶ್ರೀರಾಮ ಭಾರತೀಯನಲ್ಲ, ಭಾರತದಿಂದ ನಕಲಿ ಅಯೋಧ್ಯೆ ಸೃಷ್ಟಿ'

By Kannadaprabha NewsFirst Published Jul 14, 2020, 9:07 AM IST
Highlights

ಶ್ರೀರಾಮ ಭಾರತೀಯನಲ್ಲ!| ಆಟ ಹುಟ್ಟಿದ್ದು ನೇಪಾಳದ ಅಯೋಧ್ಯೆಯಲ್ಲಿ| ಭಾರತದಿಂದ ನಕಲಿ ಅಯೋಧ್ಯೆ ಸೃಷ್ಟಿ: ಓಲಿ

ಕಾಠ್ಮಂಡು(ಜು.14): ಭಾರತೀಯ ಹಿಂದೂಗಳ ತಮ್ಮ ಅರಾಧ್ಯದೇವರೆಂದು ಪ್ರಾರ್ಥಿಸುವ ಶ್ರೀರಾಮ ಭಾರತೀಯನೇ ಅಲ್ಲ. ಆತ ನೇಪಾಳಿ ಎಂದು ಚೀನಾ ಪರ ಇರುವ ನೇಪಾಳದ ಕಮ್ಯನಿಸ್ಟ್‌ ನಾಯಕ, ಪ್ರಧಾನಿ ಕೆ.ಪಿ.ಶರ್ಮಾ ಓಲಿ ಹೊಸ ವಾದ ಮಂಡಿಸಿದ್ದಾರೆ.

ಅನಂತ ಪದ್ಮನಾಭ ದೇಗುಲ ಯಾರ ವಶ? ಸುಪ್ರೀಂನಿಂದ ಮಹತ್ತರ ತೀರ್ಪು

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಓಲಿ, ಶ್ರೀ ರಾಮನ ನಿಜವಾದ ಜನ್ಮಸ್ಥಳ ನೇಪಾಳದಲ್ಲಿದೆಯೇ ಹೊರತು ಭಾರತದಲ್ಲಿಲ್ಲ. ಶ್ರೀರಾಮ ಹುಟ್ಟಿದ ಅಯೋಧ್ಯೆ ವಾಸ್ತವವಾಗಿ ನೇಪಾಳದ ಬಿರಗುಂಜ್‌ ನಗರದ ಪಶ್ಚಿಮ ಭಾಗದಲ್ಲಿರುವ ಥೋರಿ ಬಳಿಯಿದೆ. ಆದರೆ, ನಕಲಿ ಅಯೋಧ್ಯೆಯನ್ನು ಸೃಷ್ಟಿಸಿದ ಭಾರತವು ಸಾಂಸ್ಕೃತಿಕ ಮತ್ತು ಐತಿಹಾಸಿಕ ವಸ್ತುಸ್ಥಿತಿಯನ್ನು ತಿರುಚಿದೆ.

ನೇಪಾಳದ ಜನಕಪುರದಲ್ಲಿ ಸೀತೆ ಜನಿಸಿದಂತೆ ಶ್ರೀರಾಮ ಕೂಡಾ ನೇಪಾಳದ ಅಯೋಧ್ಯೆಯಲ್ಲೇ ಜನಿಸಿದ್ದು. ಭಾರತ ತನ್ನ ದೇಶದಲ್ಲಿ ಇದೆ ಎಂದು ಹೇಳಿಕೊಂಡ ಅಯೋಧ್ಯೆಯಿಂದ ನೇಪಾಳದ ಜನಕಪುರಿಯವರೆಗೆ ರಾಜನೊಬ್ಬ ಬಂದು ವಿವಾಹವಾಗುವುದು ಸಾಧ್ಯವೇ ಇಲ್ಲ. ಏಕೆಂದರೆ ರಾಮಾಯಣ ಕಾಲದಲ್ಲಿ ಈಗಿನಂತೆ ಸಂವಹನ ವ್ಯವಸ್ಥೆ ಇರಲಿಲ್ಲ ಎಂದು ಓಲಿ ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.

ಭಾರತದೊಂದಿಗೆ ಕ್ಯಾತೆ ತೆಗೆದು ಮುಸುಡಿ ಸುಟ್ಕೊಂಡ ಚೀನಾ ಅಧ್ಯಕ್ಷ ಬಂಕರ್‌ನಲ್ಲಿ?

ಪುರಾಣಗಳ ಅನ್ವಯ ಭಾರತದ ಉತ್ತರಪ್ರದೇಶದ ಅಯೋಧ್ಯೆ ಶ್ರೀರಾಮನ ಜನ್ಮಭೂಮಿಯಾಗಿದ್ದರೆ, ಶ್ರೀರಾಮನ ಪತ್ನಿ ಸೀತಾದೇವಿಯ ಜನ್ಮಸ್ಥಳ ನೇಪಾಳ.

click me!