30 ದಿನಕ್ಕೆ ಆಫೀಸ್ ಮುಂದಿರ್‌ಬೇಕ್, 7 BMW ಕಾರಿಗೆ ಬೇಡಿಕೆ ಇಟ್ಟ ಭ್ರಷ್ಟಾಚಾರ ವಿರೋಧಿ ಲೋಕಪಾಲ

Published : Oct 21, 2025, 08:13 PM IST
BMW

ಸಾರಾಂಶ

ಮೂವತ್ ದಿನಕ್ಕೆ ಆಫೀಸ್ ಮುಂದಿರ್‌ಬೇಕ್, 7 BMW ಕಾರಿಗೆ ಬೇಡಿಕೆ ಇಟ್ಟ ಭ್ರಷ್ಟಾಚಾರ ವಿರೋಧಿ ಲೋಕಪಾಲ , ಈ ಟೆಂಡರ್ ಭಾರಿ ವಿವಾದ ಸೃಷ್ಟಿಯಾಗಿದೆ. 60 ರಿಂದ 70 ಲಕ್ಷ ರೂಪಾಯಿ ಬೆಲೆಯ ಕಾರುಗಳಿಗೆ ಆರ್ಡರ್ ನೀಡಿದ್ದಾರೆ. ಇದು ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. 

ನವದೆಹಲಿ (ಅ.21) ಭಾರತದಲ್ಲಿ ಭ್ರಷ್ಟಾಚಾರ ತಡೆಗಟ್ಟಲು, ಜನಸಾಮಾನ್ಯರಿಗೆ ಸೌಲಭ್ಯಗಳು, ಸರ್ಕಾರದ ಯೋಜನೆಗಳು ಸರಿಯಾಗಿ ತಲುಪುತ್ತಿದೆಯೇ? ಸೋರಿಕೆಯಾಗುತ್ತಿದೆಯಾ ಅನ್ನೋ ಕುರಿತು ಹದ್ದಿನ ಕಣ್ಣಿಡುವ ಲೋಕಪಾಲ ಸಂಸ್ಥೆ ಇದೀಗ ಭಾರಿ ವಿವಾದದಲ್ಲಿ ಸಿಲುಕಿಕೊಂಡಿದೆ. ಲೋಕಪಾಲ ಸಂಸ್ಥೆ ಇದೀಗ ತಮಗೆ ಏಳು BMW ಕಾರು ಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾರೆ. 60 ರಿಂದ 70 ಲಕ್ಷ ರೂಪಾಯಿ ಮೌಲ್ಯದ ಈ ಕಾರಿನ ಒಟ್ಟು ಬೆಲೆ ಸರಿಸುಮಾರು 5 ಕೋಟಿ ರೂಪಾಯಿ. ಹೊಸ ಕಾರು ಖರೀದಿಸಲು ಟೆಂಡರ್ ನೀಡಿದ್ದಾರೆ. 30 ದಿನಗಳ ಒಳಗಡೆ ಕಾರು ತಮ್ಮ ಕಚೇರಿಯಲ್ಲಿರಬೇಕು ಎಂದು ಆರ್ಡರ್ ಕೊಟ್ಟಿದ್ದಾರೆ.

BMW3 ಸೀರಿಸ್ 330 LI ಸೆಡಾನ್ ಕಾರು

ದೆಹಲಿಯ ವಸಂತ್ ಕುಂಜ್‌ನಲ್ಲಿ ಲೋಕಪಾಲ ಕಚೇರಿ ಇದೆ. ಇದರಲ್ಲಿ 7 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ 7 BMW ಕಾರು ಬೇಕು ಎಂದು ಆರ್ಡರ್ ಕೊಟ್ಟಿದ್ದಾರೆ. BMW3 ಸೀರಿಸ್ 330 LI ಸೆಡಾನ್ ಕಾರು ಇದಾಗಿದೆ. ಅತ್ಯಂತ ಐಷಾರಾಮಿ ಕಾರನ್ನೇ ಲೋಕಪಾಲ ಅಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ.

ಲೋಕಪಾಲ ಟೆಂಡರ್‌ನಲ್ಲಿ ಏನಿದೆ?

ಲೋಕಪಾಲ ಅಧಿಕಾರಿಗಳು ಪ್ರತಿಷ್ಠಿತ ಎಜೆನ್ಸಿಗಳಿಂದ ಮುಕ್ತ ಟ್ರೆಂಡರ್ ಆಹ್ವಾನಿಸಿದೆ. ಅದಿಕಾರಿಗಳಿಗೆ 7 BMW3 ಸೀರಿಸ್ 330 LI ಕಾರಿಗೆ ಟೆಂಡರ್ ಆಹ್ವಾನಿಸಿದೆ. ಅಕ್ಟೋಬರ್ 17 ರಿಂದ ನವೆಂಬರ್ 6 ಮಧ್ಯಾಹ್ನ 3 ಗಂಟೆ ಒಳಗೆ ಟೆಂಡರ್ ಸಲ್ಲಿಕೆ ಮಾಡಬೇಕು. ಇನ್ನು ಟೆಂಡರ್ ಅಂತಿಮಗೊಳ್ಳುವ ಎಜೆನ್ಸಿ 30 ದಿನದಲ್ಲಿ ಕಾರನ್ನು ನಮ್ಮ ಕಚೇರಿ ಮುಂದೆ ತಂದು ನಿಲ್ಲಿಸಬೇಕು ಎಂದು ಸೂಚಿಸಿದೆ.

7 ದಿನದ ಟ್ರೈನಿಂಗ್

ಕಾರು ಡೆಲಿವರಿ ಮಾಡುವುದು ಮಾತ್ರವಲ್ಲ, ಇದರ ಡ್ರೈವರ್‌ಗಳಿಗೆ 7 ದಿನದ ಟ್ರೈನಿಂಗ ನೀಡಬೇಕು. ಎಲ್ಲಾ ಮಾಹಿತಿಗಳನ್ನು ಡ್ರೈವರ್ ಹಾಗೂ ಅಧಿಕಾರಿಗಳಿಗೆ ನೀಡಬೇಕು. ಅಧಿಕಾರಿಗಳು ಹಾಗೂ ಚಾಲಕರು ತರಬೇತಿ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಟೆಂಡರ್‌ನಲ್ಲಿ ಹೇಳಿದೆ.

ಭಾರಿ ವಿವಾದ ಸೃಷ್ಟಿಸಿದ ಲೋಕಪಾಲರ ಟೆಂಡರ್

ಲೋಕಪಾಲ ಸಂಸ್ಥೆ ಅಧಿಕಾರಿಗಳು BMW ಕಾರಿಗೆ ಬೇಡಿಕೆ ಇಟ್ಟಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಭ್ರಷ್ಟಚಾರಾ ವಿರೋಧಿ ಸಂಸ್ಥೆಯಾಗಿ ಕೆಲಸ ಮಾಡಬೇಕಿದ್ದ ಸಂಸ್ಥೆ ಸಪ್ಪೆಯಾಗಿದೆ. ಲೋಕಪಾಲ ಅಧಿಕಾರಿಗಳಿಗೆ ಓಡಾಡಲು ಸರ್ಕಾರದ ವಾಹನವಿದೆ. ಆದರೆ ಈ ವಾಹನ ಸಾಲದು ಎಂದು ಇದೀಗ ಐಷಾರಾಮಿ ಕಾರಿನ ಬೇಡಿಕೆ ಇಟ್ಟಿದೆ. ಇದು ಭ್ರಷ್ಟಾಚಾರ ವಿರುದ್ದ ಹೋರಾಡವು ಸಂಸ್ಥೆಯೇ ಅನ್ನೋದು ಅನುಮಾನ ಮೂಡುತ್ತಿದೆ ಎಂದು ಹಲವು ನಾಯಕರು ಟೀಕಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್