ಲೋಕಸಭಾ ಚುನಾವಣೆಯಲ್ಲಿ NDAಗೆ 326 ಸ್ಥಾನ: INDIA ಕೂಟಕ್ಕೆ 190 ಸ್ಥಾನ: ಟೈಮ್ಸ್‌ ನೌ ಸಮೀಕ್ಷೆ

Published : Aug 17, 2023, 07:55 AM IST
ಲೋಕಸಭಾ ಚುನಾವಣೆಯಲ್ಲಿ NDAಗೆ 326 ಸ್ಥಾನ:  INDIA ಕೂಟಕ್ಕೆ 190 ಸ್ಥಾನ: ಟೈಮ್ಸ್‌ ನೌ ಸಮೀಕ್ಷೆ

ಸಾರಾಂಶ

ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎಗೆ 296ರಿಂದ 326 ಸ್ಥಾನ ಬರಲಿವೆ ಎಂದು ‘ಟೈಮ್ಸ್‌ ನೌ’ ಹಾಗೂ ‘ಇಟಿಜಿ’ ಜಂಟಿಯಾಗಿ ನಡೆಸಿದ ಸಮೀಕ್ಷೆ ಹೇಳಿದೆ. 

ನವದೆಹಲಿ: ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎಗೆ 296ರಿಂದ 326 ಸ್ಥಾನ ಬರಲಿವೆ ಎಂದು ‘ಟೈಮ್ಸ್‌ ನೌ’ ಹಾಗೂ ‘ಇಟಿಜಿ’ ಜಂಟಿಯಾಗಿ ನಡೆಸಿದ ಸಮೀಕ್ಷೆ ಹೇಳಿದೆ. ಇದೇ ವೇಳೆ ಈಗ ತಾನೇ ರಚನೆಯಾಗಿರುವ ವಿಪಕ್ಷಗಳ ‘ಇಂಡಿಯಾ’ ಕೂಟಕ್ಕೆ 160ರಿಂದ 190 ಹಾಗೂ ಇತರರು 70-80 ಸ್ಥಾನ ಗಳಿಸಲಿದ್ದಾರೆ ಎಂದು ಅಂದಾಜಿಸಿದೆ.  ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ 353 ಸ್ಥಾನ ಬಂದಿದ್ದವು. ಈಗಿನ ಸಮೀಕ್ಷೆ ಅದಕ್ಕಿಂತ ಕಡಿಮೆ ಸೀಟು ನೀಡಿದ್ದರೂ, ನರೇಂದ್ರ ಮೋದಿ ಹ್ಯಾಟ್ರಿಕ್‌ ಬಾರಿಸುವುದು ಖಚಿತವಾಗಿದೆ. ಇನ್ನು ಎನ್‌ಡಿಎ ಶೇ.55, ಇಂಡಿಯಾ, ಶೇ.36 ಹಾಗೂ ಇತರರು ಶೇ.9ರಷ್ಟು ಮತ ಗಳಿಸಲಿದ್ದಾರೆ.

ಬಿಜೆಪಿಗೆ ಸ್ಪಷ್ಟಬಹುಮತ:
ಈ ನಡುವೆ, ಎನ್‌ಡಿಎ ಅಂಗಪಕ್ಷಗಳನ್ನು ಬದಿಗೆ ಸರಿಸಿದರೆ ಬಿಜೆಪಿಯೊಂದೇ 288ರಿಂದ 314 ಸ್ಥಾನ ಗಳಿಸಲಿದೆ. ಕಾಂಗ್ರೆಸ್‌ 62ರಿಂದ 80 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ವಿವರಿಸಿದೆ.

9 ವರ್ಷದಲ್ಲಿ 2 ಅವಿಶ್ವಾಸ ಗೆದ್ದ ಮೋದಿ: ಮಣಿಪುರಕ್ಕೆ ಕಿಚ್ಚು ಹಚ್ಚಿದವರ ಇತಿಹಾಸ ಹೇಳಿದ ಪ್ರಧಾನಿ!

ಕರ್ನಾಟಕದಲ್ಲಿ ಬಿಜೆಪಿಗೆ 20 ಸೀಟು
ನವದೆಹಲಿ: ಈಗಲೇ ಲೋಕಸಭೆ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಬಿಜೆಪಿಗೆ 18ರಿಂದ 20 ಸ್ಥಾನ ಬರಲಿವೆ. ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟ 8ರಿಂದ 10 ಸ್ಥಾನ ಗಳಿಸಬಹುದು ಎಂದು ‘ಟೈಮ್ಸ್‌ ನೌ’ ಸಮೀಕ್ಷೆ ಹೇಳಿದೆ. ಬಿಜೆಪಿಗೆ ಶೇ.44.6 ಹಾಗೂ ಇಂಡಿಯಾ ಕೂಟಕ್ಕೆ ಶೇ.43.3 ಮತಗಳು ಬರಬಹುದು ಎಂದು ಭವಿಷ್ಯ ನುಡಿಯಲಾಗಿದೆ. ಕಳೆದ ಸಲ ಬಿಜೆಪಿ 25, ಕಾಂಗ್ರೆಸ್‌ 1, ಜೆಡಿಎಸ್‌ 1 ಹಾಗೂ ಪಕ್ಷೇತರರು 1ಸ್ಥಾನ ಗೆದ್ದಿದ್ದರು

ವಿಪಕ್ಷದ ಪ್ರಶ್ನೆಗಳಿಗೆ ಮೋದಿ ಸಿಡಿಗುಂಡು: ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಗೆ ಹೀನಾಯ ಸೋಲು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು
ಶೇ.100ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಕೇರಳದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು