ಬಹುಮತ ಪಡೆಯದ ಬಿಜೆಪಿಗೆ ಶಾಕ್ ನೀಡಿ ಸರ್ಕಾರ ರಚಿಸುತ್ತಾ ಇಂಡಿಯಾ ಒಕ್ಕೂಟ?

Published : Jun 04, 2024, 09:27 PM IST
ಬಹುಮತ ಪಡೆಯದ ಬಿಜೆಪಿಗೆ ಶಾಕ್ ನೀಡಿ ಸರ್ಕಾರ ರಚಿಸುತ್ತಾ ಇಂಡಿಯಾ ಒಕ್ಕೂಟ?

ಸಾರಾಂಶ

ಬಿಜೆಪಿ ಬಹುಮತ ಪಡೆಯಲು ವಿಫಲವಾಗಿದೆ. ಇತ್ತ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹಗಳು ಹೆಚ್ಚಾಗುತ್ತಿದೆ. ಇದರ ನಡುವೆ ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ. ಕೊನೆಯ ಹಂತದಲ್ಲಿ ಎನ್‌ಡಿಎಗೆ ಶಾಕ್ ನೀಡಿ ಇಂಡಿಯಾ ಮೈತ್ರಿ ಸರ್ಕಾರ ರಚಿಸುತ್ತಾ?

ನವದೆಹಲಿ(ಜೂನ್ 04) ಲೋಕಸಭಾ ಚುನಾವಣೆಯಲ್ಲಿ ತೀರ್ಪು ಬಿಜೆಪಿ ತಳಮಳಕ್ಕೆ ಕಾರಣವಾಗಿದೆ. ಕಳೆದ 2 ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿದ್ದ ಬಿಜೆಪಿ ಇದೀಗ 240ರ ಗಡಿ ದಾಟಿಲ್ಲ. ಇತ್ತ ಎನ್‌ಡಿಎ ಮೈತ್ರಿ ಕೂಟ 300ರ ಗಡಿ ದಾಟಿಲ್ಲ. ಎನ್‌ಡಿಎ ಮೈತ್ರಿ ಸರ್ಕಾರ ರಚನೆಯಾಗುವ ಸಾಧ್ಯತೆಗಳು ಗೋಚರಿಸುತ್ತಿದೆ. ಆದರೆ ಇದರ ನಡುವೆ ಇಂಡಿಯಾ ಮೈತ್ರಿ ಕೂಟ ಸರ್ಕಾರ ರಚಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. 233 ಸ್ಥಾನದಲ್ಲಿ ಮುನ್ನಡೆ ಸಾಧಿಸಿರುವ ಇಂಡಿಯಾ ಮೈತ್ರಿಗೆ ಸರ್ಕಾರ ರಚಿಸಲು 39 ಸ್ಥಾನದ ಅವಶ್ಯಕತೆ ಇದೆ. ಹಳೇ ಮಿತ್ರರ ವಾಪಸ್ ಕರೆದು ಸರ್ಕಾರ ರಚಿಸುವ ಸಾಧ್ಯತೆಯನ್ನೂ ಕಾಂಗ್ರೆಸ್ ತಳ್ಳಿ ಹಾಕಿಲ್ಲ.

ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಯಕರು ಕುತೂಹಲ ಬಿಚ್ತಿಟ್ಟಿದ್ದಾರೆ. ಸರ್ಕಾರ ರಚಿಸುವ ಕುರಿತು ಮಿತ್ರ ಪಕ್ಷಗಳ ಜೊತೆ ಚರ್ಚಿಸಲಿದ್ದೇವೆ ಎಂದು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಎಲ್ಲವೂ ಇಲ್ಲೇ ಹೇಳಿದರೆ ಮೋದಿಗೆ ತಿಳಿಯಲಿದೆ. ಈ ವಿಚಾರದಲ್ಲಿ ಮೋದಿ ಚತುರ ಎಂದು ಖರ್ಗೆ ಹೇಳಿದ್ದಾರೆ. ಈ ಮೂಲಕ ಸರ್ಕಾರ ರಚನೆ ಕುರಿತು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ. 

1996ರ ಬಳಿಕ ಮೊದಲ ಬಾರಿಗೆ ಒಂದೇ ಕೂಟಕ್ಕೆ 3ನೇ ಬಾರಿಗೆ ಅಧಿಕಾರ, ಜನತೆಗೆ ಮೋದಿ ಧನ್ಯವಾದ!

ಜೆಡಿಯು,ಟಿಡಿಪಿಯತ್ತ ಕಾಂಗ್ರೆಸ್ ಚಿತ್ತ
ಇಂಡಿಯಾ ಮೈತ್ರಿ ಸರ್ಕಾರ ರಚಿಸಲು ಸರಿಸುಮಾರು 40 ಸ್ಥಾನಗಳ ಅವಶ್ಯಕತೆ ಇದೆ. ಒಂದಷ್ಟು ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆದುಕೊಳ್ಳಲು ಕಸರತ್ತು ನಡೆಯುತ್ತಿದೆ. ಇದರ ಜೊತೆಗೆ ಎನ್‌ಡಿಎ ಮೈತ್ರಿ ಭಾಗವಾಗಿರುವ ನಿತೀಶ್ ಕುಮಾರ್ ಜೆಡಿಯು ಹಾಗೂ ಚಂದ್ರಬಾಬು ನಾಯ್ಡು ಟಿಡಿಪಿಯನ್ನು ತಮ್ಮತ್ತ ಸೆಳೆಯಲು ತಯಾರಿಗಳು ನಡೆಯುತ್ತಿದೆ ಅನ್ನೋ ಮಾಹಿತಿಗಳು ಹರಿದಾಡುತ್ತಿದೆ.

ಬಿಹಾರದಲ್ಲಿ ಜೆಡಿಯು 12 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಆಂಧ್ರ ಪ್ರದೇಶದಲ್ಲಿ ಟಿಡಿಪಿ 16 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ಈ ಎರಡೂ ಪಕ್ಷಗಳನ್ನು ಇಂಡಿಯಾ ಮೈತ್ರಿ ಕೂಟಕ್ಕೆ ಸೇರಿಸಿಕೊಂಡರೆ ಒಟ್ಟು 28 ಸ್ಥಾನಗಳು ಸಗಲಿದೆ. ಇನ್ನುಳಿದ 11 ಸ್ಥಾನಗಳನ್ನು ಪಕ್ಷೇತರ ಮೂಲಕ ಹೊಂದಿಸಿಕೊಳ್ಳುವ ಪ್ಲಾನ್ ಕೂಡ ನಡೆಯುತ್ತಿದೆ.

3ನೇ ಅವಧಿಯಲ್ಲಿ ದೊಡ್ಡ ನಿರ್ಧಾರ ಜಾರಿ, ಮಹತ್ವದ ಸುಳಿವು ನೀಡಿದ ಪ್ರಧಾನಿ ಮೋದಿ!

ಎನ್‌ಡಿಎ ಮೈತ್ರಿ ಕೂಟ ಸದ್ಯ ಬಹುಮತದ ಮುನ್ನಡೆ ಪಡೆದುಕೊಂಡಿದೆ. 292 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ನೈಜ ಗೆಲುವು ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟಕ್ಕೆ ಸಲ್ಲಬೇಕು. ಬಿಜೆಪಿ ಅತೀ ದೊಡ್ಡ ಪಕ್ಷವಾದರೂ ನೈತಿಕ ಸೋಲು ಅಪ್ಪಳಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?