
ನವದೆಹಲಿ (ಫೆ.15): 2024ರ ಲೋಕಸಭೆ ಚುನಾವಣೆಯಲ್ಲಿ ಜಯಿಸಿದ ಪ್ರತಿ ಅಭ್ಯರ್ಥಿ ಸರಾಸರಿ 57.23 ಲಕ್ಷ ರು. ಖರ್ಚು ಮಾಡಿದ್ದಾರೆ ಎಂದು ಚುನಾವಣಾ ಆಯೋಗದ ವರದಿ ಹೇಳಿದೆ. ಇನ್ನೊಂದು ಕುತೂಹಲದ ವಿಷಯವೆಂದರೆ ಕಾಂಗ್ರೆಸ್‌ನ ಶಶಿ ತರೂರ್ ಸೇರಿ 15 ಸಂಸದರು 91.75 ಲಕ್ಷ ರು.ಗಿಂತ ಹೆಚ್ಚು ಖರ್ಚು ಮಾಡಿದ್ದು, ಇದರಲ್ಲಿ ತರೂರ್ ನಂ.1 ಸ್ಥಾನ (94.89 ಲಕ್ಷ ರು. ವೆಚ್ಚ) ಪಡೆದಿದ್ದಾರೆ. ಹೀಗೆ ಹೆಚ್ಚು ವೆಚ್ಚ ಮಾಡಿದವರಲ್ಲಿ ರಾಹುಲ್ ಗಾಂಧಿ, ಕರ್ನಾಟಕದ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಸುನೀಲ್ ಬೋಸ್ (94.88 ಲಕ್ಷ ರು.), ಶಿವಮೊಗ್ಗದ ಬಿ.ವೈ. ರಾಘವೇಂದ್ರ (ಬಿಜೆಪಿ 93.36 ಲಕ್ಷ ರು.) ಹಾಗೂ ಬಳ್ಳಾರಿಯ ಇ. ತುಕಾರಾಂ (ಕಾಂಗ್ರೆಸ್ 91.83 ಲಕ್ಷ ರು.) ಕೂಡ ಇದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿ 95 ಲಕ್ಷ ರೂಪಾಯಿ ಆಗಿದೆ. ಇನ್ನು ಕಾಂಗ್ರಸ್‌ನ ರಾಹುಲ್ ಗಾಂಧಿ ಕೇರಳದ ವಯನಾಡಲ್ಲಿ 92.82 ಲಕ್ಷ ರು. ಹಾಗೂ ಬಿಜೆಪಿಯ ಕಂಗನಾ ರಾಣಾವತ್ (ಹಿಮಾಚಲದ ಮಂಡಿ ಕ್ಷೇತ್ರ). 94.29 ಲಕ್ಷ ರು. ಖರ್ಚು ಮಾಡಿದ್ದಾರೆ.
ಆರ್‌ಟಿಐ ವ್ಯಾಪ್ತಿಗೆ ರಾಜಕೀಯ ಪಕ್ಷಗಳು?; ಆಯೋಗ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಅತಿ ಕಮ್ಮಿ ಖರ್ಚು ಕೇವಲ 12,500 ರು.: ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪ. ಬಂಗಾಳದ ಜಯನಗರ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಪ್ರತಿಮಾ ಮಂಡಲ್ ಕೇವಲ 12,500 ರು. ಖರ್ಚು ಮಾಡಿ ಅತಿ ಕಡಿಮೆ ಖರ್ಚು ಮಾಡಿದ ಅಭ್ಯರ್ಥಿ ಎನ್ನಿಸಿಕೊಂಡಿದ್ದಾರೆ. ಕಾಶ್ಮಿರದ ಬಾರಾಮುಲ್ಲಾದಲ್ಲಿ ಒಮರ್ ಅಬ್ದುಲ್ಲಾ ವಿರುದ್ಧ ಗೆದ್ದ ಭಯೋತ್ಪಾದನೆ ಕೇಸ್ ಆರೋಪಿ ಎಂಜಿನಿಯರ್ ರಶೀದ್ 2.10 ಲಕ್ಷ ರು., ಬಿಜೆಪಿಯ ಕೇಂದ್ರ ಸಚಿವ ಕಿರಣ್ ರಿಜಿಜು ಕೇವಲ 20.67 ಲಕ್ಷ ರು. ಖರ್ಚು ಮಾಡಿ ಅತಿ ಕಮ್ಮಿ ವೆಚ್ಚ ಮಾಡಿದ 15 ಅಭ್ಯರ್ಥಿಗಳ ಪಟ್ಟಿ ಸೇರಿದ್ದಾರೆ. ಒಟ್ಟಾರೆ ಗೆದ್ದ 543 ಅಭ್ಯರ್ಥಿಗಳು 310.77 ಕೋಟಿ ರು. ಹಾಗೂ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು 862.22 ಕೋಟಿ ರು. ವೆಚ್ಚ ಮಾಡಿದ್ದಾರೆ.
ಏಕಕಾಲಕ್ಕೆ 300ಕ್ಕೂ ಅಧಿಕ ಸಿಬ್ಬಂದಿ ವಜಾ ಪ್ರಕರಣ; ಇನ್ಫೋಸಿಸ್ ವಿರುದ್ಧ ಕ್ರಮಕ್ಕೆ ಕೇಂದ್ರ ಸೂಚನೆ
ದಕ್ಷಿಣದಲ್ಲಿ ಕರ್ನಾಟಕ ನಂ.1: ದಕ್ಷಿಣ ರಾಜ್ಯಗಳಲ್ಲಿ ಕರ್ನಾಟಕದ ಗೆದ್ದ ಲೋಕಸಭಾ ಅಭ್ಯರ್ಥಿಗಳು ಅತಿ ಹೆಚ್ಚು ಖರ್ಚು ಮಾಡಿದ್ದಾರೆ. 28 ವಿಜೇತರ ಸರಾಸರಿ 78.13 ಲಕ್ಷ ರುಪಾಯಿ. ನಂತರದ ಸ್ಥಾನದಲ್ಲಿ ತಮಿಳುನಾಡು (74.54 ಲಕ್ಷ ರು.) ಹಾಗೂ ಕೇರಳ (73.87 ಲಕ್ಷ ರು.) ಇವೆ. ದೇಶದಲ್ಲ ಅತಿ ಹೆಚ್ಚು ಖರ್ಚು ಮಾಡಿದ್ದು ಹಿಮಾಚಲದ ಅಭ್ಯರ್ಥಿಗಳು. ಅವರ ಸರಾಸರಿ 85.46 ಲಕ್ಷ ರೂಪಾಯಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ