ಯಾವಾಗಿನಿಂದ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ? MCCಯಿಂದ ಆಗುವ ಬದಲಾವಣೆ ಏನು?

By Suvarna NewsFirst Published Mar 15, 2024, 8:26 PM IST
Highlights

ಲೋಕಸಭಾ ಚುನಾವಣಾ ದಿನಾಂಕ ಮಾರ್ಚ್ 16 ರಂದು ಘೋಷಣೆಯಾಗಲಿದೆ. ಆಯೋಗ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಹಾಗಾದರೆ ಚುನಾವಣೆಯ ನೀತಿ ಸಂಹಿತೆ ಯಾವಾಗಿನಿಂದ ಜಾರಿಯಾಗಲಿದೆ? ಜಾರಿಯಿಂದ ಆಗುವ ಬದಲಾವಣೆ ಏನು?
 

ನವದೆಹಲಿ(ಮಾ.15) ಚುನಾವಣಾ ಆಯೋಗ ಮಾರ್ಚ್ 16ರಂದು ಸುದ್ದಿಗೋಷ್ಠಿ ನಡೆಸಿ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಲಿದೆ. ಚುನಾವಣೆ ದಿನಾಂಕ ಘೋಷಣೆಯೊಂದಿಗೆ ನೀತಿ ಸಂಹಿತೆ( ಮಾಡೆಲ್ ಕೋಡ್ ಆಫ್ ಕಂಡಕ್ಟ್) ಜಾರಿಯಾಗಲಿದೆ. ಅಂದರೆ ಮಾರ್ಚ್ 16ರಿಂದ ನೀತಿ ಸಂಹಿತೆ ಜಾರಿಯಾಗುತ್ತಿದೆ. ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದಗಿನಿಂದ ಫಲಿತಾಂಶ ದಿನದ ವರೆಗೆ ಕೋಡ್ ಆಫ್ ಕಂಡಕ್ಟ್(MCC) ಜಾರಿಯಲ್ಲಿರಲಿದೆ. 17ನೇ ಲೋಕಸಭಾ ಅವಧಿ ಜೂನ್ 16ಕ್ಕೆ ಅಂತ್ಯವಾಗಲಿದೆ. ಇದರೊಳಗೆ ಹೊಸ ಸರ್ಕಾರ ರಚನೆಯಾಗಬೇಕು.

ನೀತಿ ಸಂಹಿತೆ ಎಂದರೇನು?
ಮಾಡೆಲ್ ಕೋಡ್ ಆಫ್ ಕಂಡಕ್ಟ್ ಅಥವಾ ನೀತಿ ಸಂಹಿತೆ ಚುನಾವಣಾ ಆಯೋಗ ಜಾರಿಗೊಳಿಸುವ ಕಟ್ಟುನಿಟ್ಟಿನ ಮಾರ್ಗಸೂಚಿಯಾಗಿದೆ. ಪ್ರಮುಖವಾಗಿ ಪಕ್ಷ, ಅಭ್ಯರ್ಥಿಗಳಿಗೆ ನಿಯಂತ್ರಿಸಲು ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ನೀತಿ ಸಂಹಿತೆ ಜಾರಿ ಮಾಡಲಾಗುತ್ತದೆ. ಪಕ್ಷ, ಅಭ್ಯರ್ಥಿಗಳು, ಅಥವಾ ಆಡಳಿತ ಸರ್ಕಾರ ಯಾವುದೇ ರೀತಿಯಲ್ಲಿ ಮತದಾರರ ಮೇಲೆ ಪ್ರಭಾವ ಬೀರದೆ, ನ್ಯಾಯಯುತವಾಗಿ ಮತದಾನ ಮಾಡಲು ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಗೊಳಿಸುತ್ತದೆ.

Breaking: ಲೋಕಸಭೆ ಚುನಾವಣೆ ದಿನಾಂಕ ಮಾ.16ಕ್ಕೆ ಘೋಷಣೆ

ನೀತಿ ಸಂಹಿತೆ ಮಾರ್ಗಸೂಚಿ
ನೀತಿ ಸಂಹಿತೆ ಜಾರಿಯಾದ ಬಳಿಕ ಆಡಳಿತ ಪಕ್ಷದ ಅಭ್ಯರ್ಥಿಗಳು, ಪಕ್ಷ, ನಾಯಕರು ಹೊಸ ಘೋಷಣೆ, ಯೋಜನೆಗಳ ಘೋಷಣೆ, ಆರ್ಥಿಕ ಅನುದಾನ ನೀಡುವಂತಿಲ್ಲ. ಯಾವುದೇ ಕಾರಣಕ್ಕೂ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಘೋಷಣೆ ಮಾಡುವಂತಿಲ್ಲ.

ಆಡಳಿತ ಯಂತ್ರವನ್ನು, ಸಂಪನ್ಮೂಲವನ್ನು ಬಳಕೆ ಚುನಾವಣಾ ಜಾಹೀರಾತು, ಸರ್ಕಾರದ ಯೋಜನೆಗಳ ಜಾಹೀರಾತು, ಸಾಮಾಜಿಕ ಜಾಲತಾಣಗಳ ಅಭಿಯಾನಕ್ಕೆ ಬಳಸುವಂತಿಲ್ಲ. ಸರ್ಕಾರಿ ವಾಹನ, ಸರ್ಕಾರಿ ಕಟ್ಟಡ, ಸರ್ಕಾರಿ ಅಧಿಕಾರಿಗಳನ್ನು ಚನಾವಣಾ ಚಟುವಟಿಕೆಗೆ ಬಳಸುವಂತಿಲ್ಲ.

ಯಾವುದೇ ಪಕ್ಷ, ನಾಯಕರು, ಸಮುದಾಯದ ಮುಖಂಡರು ದ್ವೇಷಪೂರಿತ ಭಾಷಣ, ಹೇಳಿಕೆ, ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ. ಯಾವುದೇ ಕಾರಣಕ್ಕೂ ಹಿಂಸಾಚಾರ, ಶಾಂತಿ ಭಂಗ ತರುವಂತಿಲ್ಲ.

ಅಭ್ಯರ್ಥಿಗಳು, ಪಕ್ಷ, ನಾಯಕರು ಮತದಾರರಿಗೆ ತಪ್ಪು ಮಾಹಿತಿ ನೀಡುವಂತಿಲ್ಲ. ಮಾನನಷ್ಟ ಮಾಹಿತಿ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಬದಲಿಸುವ, ಪ್ರಚೋದಿಸುವ, ಮಾಹಿತಿಗಳನ್ನು ನೀಡುವಂತಿಲ್ಲ.

ಮಾಧ್ಯಮಗಳು ಎಲ್ಲಾ ಅಭ್ಯರ್ಥಿಗಳನ್ನು, ಪಕ್ಷಗಳನ್ನು ಸಮಾನವಾಗಿ ಕಾಣಬೇಕು. ಯಾವುದೇ ತಾರತಮ್ಯ, ಪಕ್ಷಪಾತ ಸುದ್ದಿಗಳು ಬಿತ್ತರಿಸುವಂತಿಲ್ಲ, ಪ್ರಕಟಿಸುವಂತಿಲ್ಲ.

 

Breaking: ಜ್ಞಾನೇಶ್ ಕುಮಾರ್, ಸುಖ್ಬೀರ್ ಸಿಂಗ್ ಸಂಧು ಚುನಾವಣಾ ಆಯುಕ್ತರಾಗಿ ನೇಮಕ

ಚುನವಣಾ ಅಧಿಕಾರಿಗಳು, ಚುನಾವಣೆಗೆ ನಿಯೋಜನೆಗೊಳ್ಳುವ ಅಧಿಕಾರಿಗಳು ಪಕ್ಷಪಾತ ಮಾಡವಂತಿಲ್ಲ, ಪಾದರ್ಶಕವಾಗಿ, ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಅನುವು ಮಾಡಿಕೊಡಬೇಕು. ಆಡಳಿತ ಯಂತ್ರದ ಸಚಿವರು, ನಾಯಕರು  ಸಾರ್ವಜನಿಕರ ಹಣವನ್ನು ಬಳಸುವಂತಿಲ್ಲ. 

ನೀತಿ ಸಂಹಿತಿ ಉಲ್ಲಂಘಿಸಿದರೆ ಹಲವು ಪ್ರಮಾಣದಲ್ಲಿ ಶಿಕ್ಷೆ ವಿಧಿಸುವ ಅಧಿಕಾರ ಚುನಾವಣಾ ಆಯೋಗಕ್ಕಿದೆ. ಎಚ್ಚರಿಕೆ, ದಂಡ, ಅಭ್ಯರ್ಥಿಗಳ ಅನರ್ಹಗೊಳಿಸುವಿಕೆ ಸೇರಿದಂತೆ ಹಲವು ಪ್ರಮಾಣದಲ್ಲಿ ಶಿಕ್ಷೆ ವಿಧಿಸಲಾಗುತ್ತದೆ.

click me!