ಲೋಕಸಭೆಗೆ 5ನೇ ಹಂತದ ಚುನಾವಣೆ ಮೇ 20 ರಂದು ನಡೆಯಲಿದೆ. 8 ರಾಜ್ಯಗಳ 49 ಕ್ಷೇತ್ರಗಳಲ್ಲಿ 695 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಲೋಕಸಭೆ ಜೊತೆಗೆ ಒಡಿಶಾ ವಿಧಾನಸಭೆಯ 35 ಕ್ಷೇತ್ರಗಳಿಗೂ ಮತದಾನ ನಡೆಯಲಿದೆ.
ನವದೆಹಲಿ (ಮೇ.20): ಲೋಕಸಭೆಗೆ 5ನೇ ಹಂತದ ಚುನಾವಣೆ ಮೇ 20 ರಂದು ನಡೆಯಲಿದೆ. 8 ರಾಜ್ಯಗಳ 49 ಕ್ಷೇತ್ರಗಳಲ್ಲಿ 695 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಲೋಕಸಭೆ ಜೊತೆಗೆ ಒಡಿಶಾ ವಿಧಾನಸಭೆಯ 35 ಕ್ಷೇತ್ರಗಳಿಗೂ ಮತದಾನ ನಡೆಯಲಿದೆ.
5ನೇ ಹಂತದಲ್ಲಿ ಒಟ್ಟು 8.95 ಕೋಟಿ ಮತದಾರರಿದ್ದು, 94,732 ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ. ಇದರಲ್ಲಿ 4.69 ಕೋಟಿ ಪುರುಷ ಮತದಾರರು, 4.26 ಕೋಟಿ ಮಹಿಳೆಯರು ಹಾಗೂ 5,409 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ.
ಪ್ರಧಾನಿ ಮೋದಿಯವರನ್ನ ಹೊಗಳಿದ್ದಕ್ಕೆ ಕಾಶ್ಮೀರದಲ್ಲಿ ಮಾಜಿ ಸರಪಂಚ್‌ನ ಹತ್ಯೆ?
85 ವರ್ಷಕ್ಕೂ ಮೆಲ್ಪಟ್ಟ 7.81 ಕೋಟಿ ಮಂದಿ ಹಾಗೂ ನೂರು ವರ್ಷ ದಾಡಿದ 24,79 ಮಂದಿ ಹಿರಿಯ ನಾಗರಿಕರು ನೋಂದಣಿ ಮಾಡಿಕೊಂಡಿದ್ದಾರೆ. ಹಾಗೆಯೇ 7.03 ಕೋಟಿ ವಿಶೇಷಚೇತನರು ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಚುನಾವಣೆಯ ಫಲಿತಾಂಶ ಜೂ. 4 ರಂದು ಹೊರಬೀಳಲಿದೆ.
ಎಲ್ಲೆಲ್ಲಿ ಚುನಾವಣೆ?
ಉತ್ತರ ಪ್ರದೇಶ (14), ಮಹಾರಾಷ್ಟ್ರ (13), ಪಶ್ಚಿಮ ಬಂಗಾಳ (7), ಬಿಹಾರ (5), ಒಡಿಶಾ (5), ಜಾರ್ಖಂಡ್ (3), ಲಡಾಖ್ (1 ), ಜಮ್ಮು ಮತ್ತು ಕಾಶ್ಮೀರ (1)
ಇಂಥ ಹೇಳಿಕೆ ನೀಡಲು ಎಷ್ಟು ಧೈರ್ಯ?: ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ ಪ್ರಧಾನಿ
ಪ್ರಮುಖ ಅಭ್ಯರ್ಥಿಗಳು:
ರಾಹುಲ್ ಗಾಂಧಿ, ಸ್ಮೃತಿ ಇರಾನಿ, ರಾಜ್‌ನಾಥ್ ಸಿಂಗ್, ಒಮರ್ ಅಬ್ದುಲ್ಲಾ, ಪಿಯೂಷ್ ಗೋಯಲ್, ರಾಜೀವ್ ಪ್ರತಾಪ್ ರೂಢಿ, ರೋಹಿಣಿ ಅಚಾರ್ಯ, ಚಿರಾಗ್ ಪಾಸ್ವಾನ್, ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ.