ಮೋದಿ ಪ್ಲಾನ್ ವರ್ಕೌಟ್ ಆಗಲ್ಲ, ಕೊರೋನಾ ನಿಯಂತ್ರಿಸಲು ರಾಹುಲ್ ಗಾಂಧಿ ಹೊಸ ಸೂತ್ರ!

Suvarna News   | Asianet News
Published : Apr 16, 2020, 07:07 PM IST
ಮೋದಿ ಪ್ಲಾನ್ ವರ್ಕೌಟ್ ಆಗಲ್ಲ, ಕೊರೋನಾ ನಿಯಂತ್ರಿಸಲು ರಾಹುಲ್ ಗಾಂಧಿ ಹೊಸ ಸೂತ್ರ!

ಸಾರಾಂಶ

ಕೊರೋನಾ ವೈರಸ್ ನಿಯಂತ್ರಿಸಲು ಮೋದಿ ಸರ್ಕಾರ ಕೈಗೊಂಡ ನಿರ್ಧಾರಗಳು ತಾತ್ಕಾಲಿಕವಾಗಿ ಕೊರೋನಾ ತಗ್ಗಿಸಬಹುದು. ಆದರೆ ನಿಯಂತ್ರಿಸಲು ಸಾಧ್ಯವಿಲ್ಲ. ಇದೀಗ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ನಿಯಂತ್ರಿಸಲು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಸೂತ್ರ ಮುಂದಿಟ್ಟಿದ್ದಾರೆ.   

ನವದೆಹಲಿ(ಏ.16): ದೇಶದಲ್ಲಿ ಕೊರೋನಾ ವೈರಸ್ ಹರಡುವಿಕೆ ವೇಗ ಹೆಚ್ಚುತ್ತಿದೆ. ಸೋಂಕಿತರ ಸಂಖ್ಯೆ 12,000ಕ್ಕೇರಿಕೆಯಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೊರೋನಾ ನಿಯಂತ್ರಿಸಲು ಕೇಂದ್ರ ಸರ್ಕಾರಕ್ಕೆ ಹೊಸ ಸೂತ್ರ ಮುಂದಿಟ್ಟಿದ್ದಾರೆ. ಮೋದಿ ಸರ್ಕಾರ ಕೈಗೊಂಡಿರುವ ಲಾಕ್‌ಡೌನ್ ಪ್ಲಾನ್‌ನಿಂದ ಕೊರೋನಾ ನಿಯಂತ್ರಣ ಸಾಧ್ಯವಿಲ್ಲ. ಲಾಕ್‌ಡೌನ್‌ನಿಂದ ಕೊರೋನಾ ಹರಡುವಿಕೆ ಪ್ರಮಾಣ ತಗ್ಗಬಹುದು. ಆದರೆ ಕೊರೋನಾ ನಿರ್ಮೂಲನೆ ಅಸಾಧ್ಯ ಎಂದು ರಾಹುಲ್ ಹೇಳಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ 3 ಕಠಿಣ ಕ್ರಮ ಇಂದಿನಿಂದಲೇ ಜಾರಿ.

ಕೇಂದ್ರ ಸರ್ಕಾರ ಇದೀಗ ಪರಿಣಾಮಕಾರಿಯಾಗಿ ಹಾಗೂ ಆಕ್ರಮಣಕಾರಿಯಾಗಿ ಪರೀಕ್ಷೆಗೆ ಒಳಪಡಿಸವುದೇ ಹೆಚ್ಚು ಸೂಕ್ತ. ವೈರಸ್ ಬೆನ್ನಟ್ಟಿ ಹೋಗಬೇಕಿದೆ. ಸೋಂಕಿತರು ಸಂಪರ್ಕಿಸಿದ ವ್ಯಕ್ತಿ ಟ್ರಾವೆಲ್ ಹಿಸ್ಟರಿ ಮೂಲಕ ಅವರೆಲ್ಲನ್ನೂ ಪರೀಕ್ಷೆ ಒಳಪಡಿಸಬೇಕು. ಲಾಕ್‌ಡೌನ್‌ನಿಂದ ಕೆಲ ದಿನಗಳ ವರೆಗೆ ಕೊರೋನಾ ಹರಡುವಿಕೆ ತಡೆಯಬಹುದು. ಆದರೆ ಶಾಶ್ವತ ಪರಿಹಾರವಲ್ಲ ಎಂದು ಗಾಂಧಿ ಹೇಳಿದ್ದಾರೆ.

ಸೋಂಕಿತರ ಟ್ರಾವೆಲ್ ಹಿಸ್ಟರ್ ಪಡೆದರೆ ಸೋಂಕು ಯಾವ ದಿಕ್ಕಿನಲ್ಲಿ ಹರಡುತ್ತಿದೆ ಅನ್ನೋ ಮಾಹಿತಿ ಲಭ್ಯವಾಗುತ್ತದೆ. ಇದನ್ನು ಬಳಸಿ ಎಲ್ಲರ ಪರೀಕ್ಷೆ ನಡೆಸಬೇಕು. ಸೋಂಕು ಕಂಡುಬಂದಲ್ಲಿ ಚಿಕಿತ್ಸೆ, ಕ್ವಾರಂಟೈನ್ ಸೇರಿದಂತೆ ಇತರ ಮಾರ್ಗಗಳನ್ನು ಬಳಸಿ ಕೊರೋನಾ ನಿಯಂತ್ರಣಕ್ಕೆ ತರಲು ಸಾಧ್ಯವಿದೆ. ಆಕ್ರಮಣಕಾರಿಯಾದ ಪರೀಕ್ಷೆ ಒಂದೇ ಕೊರೋನಾ ಸೋಂಕಿಗೆ ಪರಿಹಾರ. ಇದು ಕೇಂದ್ರ ಸರ್ಕಾರಕ್ಕೆ ನನ್ನ ಸಲಹೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!
ವಾಟ್ಸಾಪ್ ಬಳಕೆದಾರರೇ ಎಚ್ಚರ: ಈ ಮೂರು ತಪ್ಪುಗಳು ಮಾಡಿದ್ರೆ ಜೈಲು ಪಾಲಾಗೋದು ಫಿಕ್ಸ್!