ಆಯೋಧ್ಯೆ ರಾಮ ಮಂದಿ ಹಾಗೂ ಬಾಬ್ರಿ ಮಸೀದಿ ವಿವಾದಕ್ಕೆ ಸುಪ್ರೀಂ ಕೋರ್ಟ್ ಇತಿಶ್ರಿ ಹಾಡಿದ ಬಳಿಕ ಇದೀಗ ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದೀಗ ಆಯೋಧ್ಯೆಯಲ್ಲಿ ಹೊಸ ವಿವಾದ ಶುರುವಾಗಿದೆ. ರಾಮ ಮಂದಿರ ಸಮಿತಿಗೆ ನೀಡಿದ್ದ ಸ್ಥಳೀಯ ಮಸೀದಿ ಜಾಗವನ್ನು ಮುಸ್ಲಿಮರು ವಾಪಸ್ ನೀಡುವಂತೆ ಪಟ್ಟು ಹಿಡಿದ್ದಾರೆ.
ಆಯೋಧ್ಯೆ(ಅ.07) ಆಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. 2024ರ ಜನವರಿಯಲ್ಲಿ ಮಂದಿರದ ಉದ್ಘಾಟನೆ ಆಗಲಿದೆ. ಹಲವು ಶತಮಾನಗಳ ಹೋರಾಟ ಕೋರ್ಟ್‌ನಲ್ಲಿ ಅಂತ್ಯಗೊಂಡು ಕೊನೆಗೂ ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿದೆ. ರಾಮ ಮಂದಿರ ಕೆಡಮಿ ಬಾಬ್ರಿ ಮಸೀದಿ ನಿರ್ಮಾಣದಿಂದ ಆರಂಭಗೊಂಡ ವಿವಾದ ಬಗೆಹರಿದಿದೆ. ಇದೀಗ ಹೊಸ ವಿವಾದವೊಂದು ಶುರುವಾಗಿದೆ. ಆಯೋಧ್ಯೆ ರಾಮ ಮಂದಿರ ಪಕ್ಕದಲ್ಲಿದ್ದ ಮತ್ತೊಂದು ಸ್ಥಳೀಯ ಮಸೀದಿ ಹಾಗೂ ಜಾಗವನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಮಾರಾಟ ಮಾಡಲಾಗಿದೆ. ಮಸೀದಿ ಮೇಲ್ವಿಚಾರಕ ಈ ಜಾಗವನ್ನು ಮಾರಾಟ ಮಾಡಿದ್ದಾರೆ. ಆದರೆ ಇದಕ್ಕೆ ಸುನ್ನಿ ಮುಸ್ಲಿಂ ಬೋರ್ಡ್ ಹಾಗೂ ಸ್ಥಳೀಯ ಮುಸ್ಲಿಮರು ಭಾರಿ ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ನಿರ್ಮಾಣ ಹಂತದಲ್ಲಿರುವ ರಾಮ ಮಂದಿರ ಪಕ್ಕದಲ್ಲೇ ಸ್ಥಳೀಯ ಮಸೀದಿಯೊಂದು ಕಾರ್ಯನಿರ್ವಹಿಸುತ್ತಿತ್ತು. ಭವ್ಯ ಮಂದಿರದ ಜಾಗಕ್ಕೆ ತಾಗಿಕೊಂಡೆ ಇದ್ದ ಮಸೀದಿ ಜಾಗವನ್ನು ಮಸೀದಿ ಮೇಲ್ವಿಚಾರಕ ಮಾರಾಟ ಮಾಡಲು ಮುಂದಾಗಿದ್ದಾನೆ. ಸೆಪ್ಟೆಂಬರ್ 1 ರಂದು ಮಸೀದಿ ಸ್ಥಳವನ್ನು ಆಯೋಧ್ಯೆ ಶ್ರೀರಾಮ ಮಂದಿರ ಸಮಿತಿಗೆ ಮಾರಾಟಕ್ಕೆ ಒಪ್ಪಂದ ಮಾಡಿದ್ದಾರೆ. 30 ಲಕ್ಷ ರೂಪಾಯಿಗೆ ಈ ಸ್ಥಳ ಮಾರಾಟಕ್ಕೆ ಒಪ್ಪಂದ ಮಾಡಲಾಗಿದೆ.
ಸಾವಿನ ಸೂಚನೆ ಸಿಗ್ತಿದ್ದಂತೆಯೇ ರಾಮ ಮಂದಿರದ ಉದ್ಘಾಟನೆಗಾಗಿ ಭಜನೆ ರೆಕಾರ್ಡ್ ಮಾಡಿದ ಲತಾ ದೀದಿ!
ಈ ಮಾಹಿತಿ ಪಡೆದ ಮುಸ್ಲಿಮರು ಹಾಗೂ ಅಂಜುಮ್ ಮುಹಾಫಿಜ್ ಮಸ್ಜಿದ್ ಮುಕ್ಬಿರ್ ಅಧ್ಯಕ್ಷ ಹಾಗೂ ಇತರ ಮಸೀದಿ ಸಮಿತಿ ಸದಸ್ಯರು ಸಮಿತಿ ರಚಿಸಿ ಇದೀಗ ಆಯೋಧ್ಯೆಯಲ್ಲಿರುವ ವಕ್ಫ್ ಆಸ್ತಿಗಾಗಿ ಹೋರಾಟ ಆರಂಭಿಸಿದ್ದಾರೆ. ಸ್ಥಳೀಯ ಮುಸ್ಲಿಮರು, ಅಂಜುಮ ಮುಹಾಫಿಜ್ ಮುಕ್ಬೀರ್ ಅಧ್ಯಕ್ಷ ಅಜಮ್ ಖಾದ್ರಿ ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಮರು ಜಿಲ್ಲಾಧಿಕಾರಿ ಭೇಟಿಯಾಗಿ ಮಾರಾಟ ಒಪ್ಪಂದ ರದ್ದು ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲ ಈ ಕುರಿತು ದೂರು ದಾಖಲಿಸಿ ಸೂಕ್ತ ನ್ಯಾಯ ಒದಗಿಸುವಂತೆ ಕೋರಿದ್ದಾರೆ.
ಮಸೀದಿ ಮೇಲ್ವಿಚಾರಕ ಮೊಹಮ್ಮದ್ ರಾಯಿಸ್ ಈಗಾಗಲೇ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜೊತೆ ಮಾರಾಟ ಒಪ್ಪಂದ ಮಾಡಿಕೊಂಡಿದ್ದಾರೆ. 30 ಲಕ್ಷ ರೂಪಾಯಿ ಒಪ್ಪದಂದದಲ್ಲಿ 15 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾರೆ. ಆಯೋಧ್ಯೆಯಲ್ಲಿರುವ ಸ್ಥಳೀಯ ಮಸೀದಿ ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿ ಅಡಿಯಲ್ಲಿ ನೋಂದಣಿಯಾಗಿದೆ.
ಮೂರು ರಾಮಲಲ್ಲಾ ಮೂರ್ತಿ ಕೆತ್ತನೆ, ಒಂದು ಮಾತ್ರ ರಾಮಮಂದಿರದಲ್ಲಿ ಪ್ರತಿಷ್ಠಾಪನೆ!
ಇದೀಗ ಮುಸ್ಲಿಮ್ ಹೋರಾಟ ಸಮಿತಿ ಪ್ರತಿಭಟನೆ ಆರಂಭಿಸಿದೆ. ಮಸೀದಿ ಇರುವುದು ವಕ್ಫ್ ಆಸ್ತಿ. ಇದನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಭಟನ ಆರಂಭಿಸಿದೆ.