ಹೀಗೆ ಮಾಡದಿದ್ದರೆ ಪ್ರಧಾನಿ ಮೋದಿ ಹತ್ಯೆ ಜತೆಗೆ ಮೋದಿ ಸ್ಟೇಡಿಯಂ ಉಡಾಯಿಸ್ತೇವೆ: ಎನ್‌ಐಎಗೆ ಬಂತು ಬೆದರಿಕೆ ಇಮೇಲ್

By BK Ashwin  |  First Published Oct 7, 2023, 11:43 AM IST

ಭಾರತ ಸರ್ಕಾರ 500 ಕೋಟಿ ರೂ. ನೀಡಲು ವಿಫಲವಾದರೆ ಮತ್ತು ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು ಬಿಡುಗಡೆ ಮಾಡದಿದ್ದರೆ ಪ್ರಧಾನಿ ಮೋದಿ ಹತ್ಯೆ ಮಾಡೋದಾಗಿ ಮತ್ತು ನರೇಂದ್ರ ಮೋದಿ ಕ್ರೀಡಾಂಗಣವನ್ನು ಸ್ಫೋಟಿಸುವುದಾಗಿ ಇ - ಮೇಲ್‌ ಮೂಲಕ ಬೆದರಿಕೆ ಹಾಕಲಾಗಿದೆ. 


ಮುಂಬೈ (ಅಕ್ಟೋಬರ್ 7, 2023): ಪ್ರಧಾನಿಮೋದಿಯನ್ನು ಹತ್ಯೆ ಮಾಡೋದಾಗಿ ಮತ್ತೊಂದು ಬೆದರಿಕೆ ಕೇಳಿಬಂದಿದೆ. ಅಲ್ಲದೆ, ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ ಆರಂಭವಾದ ಬೆನ್ನಲ್ಲೇ ಗುಜರಾತ್‌ನ ಅಹಮದಾಬಾದ್‌ನಲ್ಲಿರೋ ಮೋದಿ ಸ್ಟೇಡಿಯಂ ಅನ್ನು ಉಡಾಯಿಸೋದಾಗಿಯೂ ಬೆದರಿಕೆ ಬಂದಿದೆ. 

ಭಾರತ ಸರ್ಕಾರ 500 ಕೋಟಿ ರೂ. ನೀಡಲು ವಿಫಲವಾದರೆ ಮತ್ತು ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು ಬಿಡುಗಡೆ ಮಾಡದಿದ್ದರೆ ಪ್ರಧಾನಿ ಮೋದಿ ಹತ್ಯೆ ಮಾಡೋದಾಗಿ ಮತ್ತು ನರೇಂದ್ರ ಮೋದಿ ಕ್ರೀಡಾಂಗಣವನ್ನು ಸ್ಫೋಟಿಸುವುದಾಗಿ ಇ - ಮೇಲ್‌ ಕಳಿಸಿದವರು ಬೆದರಿಕೆ ಹಾಕಿದ್ದಾರೆ. ಅಅಲ್ಲೆ, ಭಯೋತ್ಪಾದಕ ಗುಂಪು ಈಗಾಗಲೇ ದಾಳಿ ನಡೆಸಲು ಜನರನ್ನು ನಿಯೋಜಿಸಿದೆ ಎಂದೂ ಇಮೇಲ್‌ನಲ್ಲಿ ಉಲ್ಲೇಖಿಸಿದೆ.

Latest Videos

undefined

ಇದನ್ನು ಓದಿ: ಭಾರತ ಶಕ್ತಿಶಾಲಿ ದೇಶವಾಗಿದೆ; ಮೋದಿ ನಾಯಕತ್ವದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆ: ನಮೋ ಹಾಡಿ ಹೊಗಳಿದ ಪುಟಿನ್

ಸದ್ಯ ಲಾರೆನ್ಸ್‌ ಬಿಷ್ಣೋಯಿ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ. ಪೊಲೀಸರ ಪ್ರಕಾರ, ಬೆದರಿಕೆ ಮೇಲ್ ಅನ್ನು ಆರಂಭದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗೆ ಕಳುಹಿಸಲಾಗಿದೆ, ಇದು ಸ್ಪಷ್ಟವಾಗಿ ಯುರೋಪ್‌ನಿಂದ ಬಂದಿದೆ ಎನ್ನಲಾಗಿದ್ದು, ಫೆಡರಲ್ ಏಜೆನ್ಸಿ ಮುಂಬೈ ಪೊಲೀಸರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದೆ.

“ನಾವು NIA ಯಿಂದ ಇಮೇಲ್ ಅನ್ನು ಸ್ವೀಕರಿಸಿದ್ದೇವೆ, ಅದು ಇತರ ಸ್ಥಳಗಳಲ್ಲಿಯೂ ಎಲ್ಲಾ ಸಂಬಂಧಪಟ್ಟ ಏಜೆನ್ಸಿಗಳನ್ನು ಎಚ್ಚರಿಸಿದೆ. ಎನ್‌ಐಎ ಇಮೇಲ್ ಪಡೆದ ಇಮೇಲ್ ಐಡಿಯನ್ನು ಸಹ ನಾವು ಪಡೆದುಕೊಂಡಿದ್ದೇವೆ ಮತ್ತು ಅದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಮತ್ತು ಇ ಮೇಲ್ ಯುರೋಪ್‌ನಿಂದ ಬಂದಿದೆ ಎಂದು ಮೇಲ್ನೋಟಕ್ಕೆ ತೋರುತ್ತದೆ’’ ಎಂದು ಪೋಲೀಸ್ ಅಧಿಕಾರಿಯೊಬ್ಬರು ಹೇಳಿದರು. ವಿದೇಶದಲ್ಲಿ ಕುಳಿತು ಯಾರಾದರೂ ಕಿಡಿಗೇಡಿತನವನ್ನು ಮಾಡಿದ್ದಾರೆ ಎನ್ನಬಹುದು. ಆದರೂ ಮೇಲ್‌ ಕಳುಹಿಸುವವರಿಗಾಗಿ ಶೋಧವನ್ನು ಪ್ರಾರಂಭಿಸಿದ್ದೇವೆ ಮತ್ತು ಎಲ್ಲಾ ಕ್ರಿಕೆಟ್ ಪಂದ್ಯಗಳ ಭದ್ರತೆಯನ್ನು ಪರಿಶೀಲಿಸಲಾಗುತ್ತದೆ ಮತ್ತು ಅಗತ್ಯವಿದ್ದರೆ ಹೆಚ್ಚಿಸಲಾಗುತ್ತದೆ ಎಂದೂ ಹೇಳಿದರು.

ಮತ್ತೆ ಗೆದ್ದು ಹ್ಯಾಟ್ರಿಕ್ ಹೀರೋ ಆಗ್ತಾರಾ ಮೋದಿ..? ಮೋದಿಗಿಂತಾ ರಾಹುಲ್ ಮೇಲೇ ಮುಸ್ಲಿಮರ ಒಲವು!

“ ಕೇಂದ್ರ ಸರ್ಕಾರವು ನಮಗೆ ₹ 500 ಕೋಟಿ ಪಾವತಿಸಲು ಮತ್ತು ಲಾರೆನ್ಸ್ ಬಿಷ್ಣೋಯ್ ಅವರನ್ನು ಬಿಡುಗಡೆ ಮಾಡಲು ವಿಫಲವಾದರೆ ನಾವು ನರೇಂದ್ರ ಮೋದಿ ಮತ್ತು ನರೇಂದ್ರ ಮೋದಿ ಕ್ರೀಡಾಂಗಣವನ್ನು ಸ್ಫೋಟಿಸುತ್ತೇವೆ. ಹಿಂದೂಸ್ತಾನದಲ್ಲಿ ಎಲ್ಲವೂ ಮಾರಾಟವಾಗುತ್ತದೆ. ನಾವು ಸಹ ಏನನ್ನೋ ಖರೀದಿಸಿದ್ದೇವೆ. ನೀವು ಎಷ್ಟೇ ಸುರಕ್ಷಿತರಾಗಿದ್ದರೂ ನಮ್ಮಿಂದ ತಪ್ಪಿಸಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ. ನೀವು ಮಾತನಾಡಲು ಬಯಸಿದರೆ, ಇ ಇಮೇಲ್‌ ಮಾಡಿ’’ ಎಂದೂ NIA ಗೆ ಕಳುಹಿಸಲಾದ ಇಮೇಲ್ ಹೇಳುತ್ತದೆ.

ವಿಶ್ವಕಪ್ ಪಂದ್ಯಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಮೂರು ವಾರಗಳ ಹಿಂದೆ ಶಹೀದ್ ನಿಜಾರ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿಯೂ ಬೆದರಿಕೆ ಹಾಕಲಾಗಿತ್ತು.

ಇದನ್ನೂ ಓದಿ: ಈಗ ಲೋಕಸಭಾ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು? ಸಮೀಕ್ಷೆ ಹೇಳೋದೀಗೆ..

click me!