ಲೀವ್-ಇನ್ ರಿಜಿಸ್ಟ್ರೇಶನ್ ಕಡ್ಡಾಯ, ಬಹುಪತ್ನಿತ್ವ ನಿಷೇಧ; ಉತ್ತರಖಂಡದಲ್ಲಿ ಸಿವಿಲ್ ಕೋಡ್ ಡ್ರಾಫ್ಟ್ ರೆಡಿ!

Published : Nov 11, 2023, 04:12 PM IST
ಲೀವ್-ಇನ್ ರಿಜಿಸ್ಟ್ರೇಶನ್ ಕಡ್ಡಾಯ, ಬಹುಪತ್ನಿತ್ವ ನಿಷೇಧ; ಉತ್ತರಖಂಡದಲ್ಲಿ ಸಿವಿಲ್ ಕೋಡ್ ಡ್ರಾಫ್ಟ್ ರೆಡಿ!

ಸಾರಾಂಶ

ಲೀವ್ ಇನ್ ರಿಲೇಶನ್‌ಶಿಪ್ ಅಲ್ಲ, ಲೀವ್ ಇನ್ ರಿಜಿಸ್ಟ್ರೇಶನ್, ಬಹುಪತ್ನಿತ್ವ ನಿಷೇಧ ಸೇರಿದಂತೆ ಹಲವು ನಿಯಮಗಳು ಜಾರಿಯಾಗುತ್ತಿದೆ. ಏಕರೂಪ ನಾಗರೀಕ ಸಂಹಿತೆ ಡ್ರಾಫ್ಟ್ ರೆಡಿ ಮಾಡಿರುವ ಉತ್ತರಖಂಡ, ಇದೀಗ ವಿಶೇಷ ಅಧಿವೇಶನ ಕರೆದು ಮಂಡಿಸಲು ಸಜ್ಜಾಗಿದೆ.

ಡೆಹ್ರಡೂನ್(ನ.11) ಕೇಂದ್ರ ಸರ್ಕಾರ ಏಕರೂಪ ನಾಗರೀಕ ಸಂಹಿತೆ ಕುರಿತು ಹಲವು ಚರ್ಚೆ ನಡೆಸಿದೆ. ಶೀಘ್ರದಲ್ಲೇ ಯೂನಿಫಾರ್ಮ್ ಸಿವಿಲ್ ಕೋಡ್ ಜಾರಿಗೆ ತರಲು ತಯಾರಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಉತ್ತರಖಂಡದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರಲು ಸಜ್ಜಾಗಿದೆ. ಈಗಾಗಲೇ ಡ್ರಾಫ್ಟ್ ರೆಡಿ ಮಾಡಿದ್ದು, ವಿಶೇಷ ಅಧಿವೇಶನ ಕರೆದು ಮಂಡಿಸಲು ಸಜ್ಜಾಗಿದೆ. ಏಕರೂಪ ನಾಗರೀಕ ಸಂಹಿತೆಯ ಕರಡು ಪಟ್ಟಿಯಲ್ಲಿ ಕೆಲ ಮಹತ್ವದ ನಿಯಮಗಳು ಭಾರಿ ಚರ್ಚೆಯಾಗುತ್ತಿದೆ. 

ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ನೇತೃತ್ವದ ಸಮಿತಿ ರಚಿಸಿರು ಕರಡು ನೀತಿಯಲ್ಲಿ ಪ್ರಮುಖವಾಗಿ ಬಹುಪತ್ನಿತ್ವ ನಿಷೇಧಿಸಲಾಗಿದೆ. ಧರ್ಮದ ಆಧಾರದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ ಎಂದಿದೆ. ಇದರ ಜೊತೆಗೆ ಇತ್ತೀಚೆಗೆ ಹೆಚ್ಚಾಗುತ್ತಿರುವ ಲೀವ್ ಇನ್ ರಿಲೇಶನ್‌ಶಿಪ್ ಹಾಗೂ ಅಪರಾಧ ಪ್ರಕರಣಗಳಿಗೆ ಕಡಿಣವಾಣ ಹಾಕಲು ಹೊಸ ನಿಯಮ ರೂಪಿಸಲಾಗಿದೆ. ಲೀವ್ ಇನ್ ರಿಲೇಶನ್‌ಶಿಪ್ ಆರಂಭಿಸಲು, ರಿಜಿಸ್ಟ್ರೇಶನ್ ಕಡ್ಡಾಯ ಮಾಡಲಾಗಿದೆ. ರಿಜಿಸ್ಟ್ರೇಶನ್ ಇಲ್ಲದ ರಿಲೇಶನ್‌ಶಿಪ್ ಮಾನ್ಯವಾಗಿರುವುದಿಲ್ಲ.

ನಾಗರಿಕ ಸಂಹಿತೆ ವಿರುದ್ಧ ಕೇರಳ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕಾರ

ಇನ್ನು ಯಾವುದೇ ಧರ್ಮದ ಗಂಡು ಅಥವಾ ಹೆಣ್ಣುಮಗುವಿಗೆ ಸಮಾನ ಹಕ್ಕು ನೀಡಲಾಗುತ್ತದೆ. ಇದರಿಂದ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಗುವಿಗೆ ಇರುವಷ್ಟೇ ಅವಕಾಶವನ್ನು ಹೆಣ್ಣುಮಗುವಿಗೂ ನೀಡಲಾಗುತ್ತಿದೆ. ಈ ನಿಯಮ ಧರ್ಮ, ಎಲ್ಲಾ ಮತ ಹಾಗೂ ಪಂಥಗಳಿಗೆ ಅನ್ವಯವಾಗಲಿದೆ. ಹಲವು ಹೊಸತನ, ಕಠಿಣ ನಿಯಮಗಳನ್ನೊಳಗೊಂಡ ಸಿವಿಲ್ ಕೋಡ್ ನೀತಿ ಉತ್ತರಖಂಡದಲ್ಲಿ ಜಾರಿಯಾಗಲು ತಯಾರಿಗಳು ಭರದಿಂದ ಸಾಗಿದೆ.

ಈ ವರ್ಷದ ಆರಂಭದಲ್ಲೇ ಏಕರೂಪ ನಾಗರೀಕ ಸಂಹಿತೆ ಡ್ರಾಫ್ಟ್ ತಯಾರಿಸಲು ಸಮಿತಿ ರಚಿಸಲಾಗಿತ್ತು. ಈ ಸಮಿತಿ ನೀಡಿದ ವರದಿ ಆಧಾರದಲ್ಲಿ ಕರಡು ತಯಾರಿಸಲಾಗಿದೆ. ಏಕರೂಪ ನಾಗರೀಕ ಸಂಹಿತೆಯಲ್ಲಿನ ಸಾಮಾನ್ಯ ನೀತಿ, ಕಾನೂನುಗಳು ಎಲ್ಲರಿಗೂ ಅನ್ವಯವಾಗಲಿದೆ. ಪ್ರಮುಖವಾಗಿ ಮದುವೆ, ವಿಚ್ಚೇದನ, ಪಿತ್ರಾರ್ಜಿತ, ದತ್ತು ಸೇರಿದಂತೆ ಕೆಲ ವೈಯುಕ್ತಿಕ ಕಾನೂನುಗಳು ಎಲ್ಲಾ ಧರ್ಮದ, ಸಮುದಾಯದ ಜನತೆಗೆ ಒಂದೇ ಆಗಲಿದೆ.

ಏಕರೂಪ ನಾಗರಿಕ ಸಂಹಿತೆಗೆ ಶೇ.67ರಷ್ಟು ಮುಸ್ಲಿಂ ಮಹಿಳೆಯರ ಬೆಂಬಲ, ಸರ್ವೇಯಲ್ಲಿ ಬಹಿರಂಗ

ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳು ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರಲು ತುದಿಗಾಲಲ್ಲಿ ನಿಂತಿದ್ದರೆ, ಇತರ ರಾಜ್ಯಗಳು ಈ ಸಂಹಿತೆಯನ್ನು ವಿರೋಧಿಸುತ್ತಿದೆ. ಇದು ಜಾತ್ಯಾತೀತ ಕಲ್ಪನೆಗೆ ವಿರುದ್ದ ಅನ್ನೋ ಆರೋಪ ಮಾಡುತ್ತಿದ್ದಾರೆ.  ನಾಗಾಲ್ಯಾಂಡ್ ವಿಧಾನಸಭೆ ಸರ್ವಾನುಮತದಿಂದ ಏಕರೂಪ ನಾಗರೀಕರ ಸಂಹಿತೆ ವಿರೋಧಿಸಿ ನಿರ್ಣಯವನ್ನು ಅಂಗೀಕರಿಸಿದ ಘಟನೆಯೂ ನಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು