ಸಾಮಾನ್ಯವಾಗಿ ಬಾಲ್ಯದಲ್ಲಿ ಊರಿನ ಜಾತ್ರೆಗಳಿಗೆ ಗೆಳತಿಯರು, ಕುಟುಂಬದವರು, ಸ್ನೇಹಿತರೊಂದಿಗೆ ಜೊತೆಯಾಗಿ ಸುತ್ತುವ ನಾವು ಅಲ್ಲಿ ಮನೋರಂಜನೆ ನೀಡುವ ಜೈಂಟ್ ವಿಲ್, ತಲೆಕೆಳಗಾಗುವ ದೋಣಿ, ತೊಟ್ಟಲುಗಳು, ಮರಣಬಾವಿ ಮುಂತಾದವುಗಳ ಮೇಲೆ ಕುಳಿತು ಎಂಜಾಯ್ ಮಾಡುವುದರ ಜೊತೆ ಯಾರಾದರೂ ಗುಂಪಿನಲ್ಲಿ ಭಯಪಡುವವರಿದ್ದರೆ ಅವರನ್ನು ಜೊತೆಯಲ್ಲೇ ಕುಳಿರಿಸಿಕೊಂಡು ಮತ್ತಷ್ಟು ಭಯಪಡಿಸಿ ಜೋರಾಗಿ ಬೊಬ್ಬೆ ಹಾಕಿ ಕೂಗಾಡಿ ಎಂಜಾಯ್ ಮಾಡುತ್ತೇವೆ. ಇಂತಹ ವಿಡಿಯೋಗಳನ್ನು ನೀವು ಸಾಕಷ್ಟು ನೋಡಿರುತ್ತೀರಿ. ಊರಿನ ಜಾತ್ರೆಯಲ್ಲಿ ಮಜಾ ಮಾಡುವ ಚಂದವೇ ವಿಶಿಷ್ಠವಾದುದು. ಈ ಮನೋರಂಜನೆ ನೀಡುವ ತೊಟ್ಟಿಲುಗಳ ಮೇಲೆ ನಾವೇ ಕೂರುವುದಕ್ಕಿಂತ ಅದರಲ್ಲಿ ಈಗಾಗಲೇ ಕೂತು ಸಂಕಟ ಖುಷಿ ಎರಡನ್ನು ಒಂದೇ ಕ್ಷಣ ಅನುಭವಿಸುತ್ತಿರುವ ಬೇರೆಯವರನ್ನು ನೋಡುವುದು ಇನ್ನಷ್ಟ ಮಜಾ ನೀಡುತ್ತದೆ.
ಬಹುತೇಕ ಕೆಲ ವಯಸ್ಕರು ಕೂಡ ಈ ತೂಗುವ ತೊಟ್ಟಿಲುಗಳು ದೋಣಿಗಳ ಮೇಲೆ ಕೂರಲು ಭಯಪಡುತ್ತಾರೆ. ಯುವಕರು ಕೂಡ ಸ್ನೇಹಿತರ ಜೊತೆ ಸೇರಿಕೊಂಡು (ತಮಾಷೆಗೂ ನಿಜವಾಗಿಯೋ ತಿಳಿಯದು) ಜೋರಾಗಿ ಕಾಪಾಡಿ ಎಂದು ಬೊಬ್ಬೆ ಹಾಕುತ್ತಾ ಉಳಿದವರಿಗೆ ಮನೋರಂಜನೆ ನೀಡುವ ವಿಡಿಯೋಗಳನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಬಾಲಕ ಇಂತಹ ತಲೆಕೆಳಗೆ ಮಾಡುವಂತಹ ದೋಣಿಯ ಮೇಲೆ ಗಂಭೀರವಾಗಿ ಅದೂ ಒಂಟಿಯಾಗಿ ಕುಳಿತು ಎಂಜಾಯ್ ಮಾಡುತ್ತಿದ್ದಾನೆ. ಆತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಬಾಲಕನ ಧೈರ್ಯವನ್ನು ಅನೇಕರು ಕೊಂಡಾಡಿದ್ದಾರೆ.
ಮನೋರಂಜನಾ ಪಾರ್ಕ್ ಒಂದರ ವಿಡಿಯೋ ಇದಾಗಿದ್ದು, ಇದಾಗಿದ್ದು, ಪೀಪಲ್ ಮ್ಯಾಗಜೀನ್ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋ ವೈರಲ್ ಆಗಿದೆ. 3.4 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವೈರಲ್ ಹಗ್ ಯೂಟ್ಯೂಬ್ ಚಾನೆಲ್‌ನಿಂದಲೂ ಈ ವಿಡಿಯೋ ಪೋಸ್ಟ್ ಆಗಿದೆ. ಇದರಲ್ಲಿ ಬಾಲಕನ ಹಿಂದಿನ ಸೀಟಿನಲ್ಲಿ ಕುಳಿತಿರುವ ಯುವತಿಯೊಬ್ಬಳು ದೋಣಿ ಅತ್ತಿತ್ತ ಸಾಗುತ್ತಿದ್ದಂತೆ ಜೋರಾಗಿ ಬೊಬ್ಬೆ ಹೊಡೆಯುತ್ತಿದ್ದರೆ ಈತ ಮಾತ್ರ ಅತ್ತ ಸಂತೋಷವೂ ಇಲ್ಲದ ಇತ್ತ ದುಖಃ ಬೇಸರ ಭಯವೂ ಇಲ್ಲದ ನಿರ್ಲಿಪ್ತ ಭಾವದಿಂದ ಕುಳಿತಿದ್ದಾನೆ.
ಈ ವಿಡಿಯೋ ನೋಡಿದ ಅನೇಕರು ಬಾಲಕನೇಕೆ ಒಂಟಿಯಾಗಿ ಕುಳಿತಿದ್ದಾನೆ. ಆತನ ಜೊತೆಗೆ ಯಾಕೆ ದೊಡ್ಡವರು ಯಾರು ಇಲ್ಲ ಎಂದು ಕೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಗುವೊಂದು ಏಕಾಂಗಿಯಾಗಿ ಸಾಗರದಲ್ಲಿ ಸರ್ಫಿಂಗ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸರ್ಫಿಂಗ್ ಭಾರತದಲ್ಲಿ ಅಷ್ಟೊಂದು ಖ್ಯಾತಿ ಪಡೆದಿಲ್ಲ. ಆದರೆ ವಿದೇಶದಲ್ಲಿ ಪುಟ್ಟ ಮಕ್ಕಳು ಕೂಡ ಸಾಗರದಲ್ಲಿ ಸರ್ಫಿಂಗ್ ಮಾಡುತ್ತಾರೆ.
ಮಧ್ಯದಲ್ಲಿ ಕೆಟ್ಟು ನಿಂತ ರೋಲರ್ ಕೋಸ್ಟರ್: 235 ಅಡಿ ಎತ್ತರದಲ್ಲಿ ಪ್ರವಾಸಿಗರ ಪರದಾಟ
ಮಗು ಸರ್ಫಿಂಗ್ ಮಾಡುತ್ತಿರುವ 22 ಸೆಕೆಂಡ್‌ಗಳ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ 'TheFigen' ಎಂಬ ಬಳಕೆದಾರರು ಪೋಸ್ಟ್ ಮಾಡಿದ್ದರು. Aweeeeee little big surfer!. ಆಹಾ ದೊಡ್ಡ ಪುಟಾಣಿ ಸರ್ಫರ್ ಎಂದು ಅವರು ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋದಲ್ಲಿ ಸಣ್ಣ ಮಗು ಸ್ಪೀಡ್‌ಬೋಟ್‌ನ ಹಿಂದೆ ಸರ್ಫಿಂಗ್ ಮಾಡುವುದನ್ನು ನೋಡಬಹುದು. ಮುದ್ದಾದ ಪುಟ್ಟ ಸರ್ಫಿಂಗ್ ವೇಳೆ ಮುಗ್ಗರಿಸದಂತೆ ತಡೆಯಲು ಮಗುವಿನ ದೇಹಕ್ಕೆ ಸುರಕ್ಷತಾ ಬೆಲ್ಟ್ ಜೋಡಿಸಲಾಗಿದ್ದು, ಸರ್ಫ್‌ಬೋರ್ಡ್‌ನಲ್ಲಿ ಮಗು ನಿಂತಿದೆ.
ಸರ್ಫಿಂಗ್ ಬೋಟ್‌ನ ಸ್ಟ್ಯಾಂಡ್‌ನ್ನು ಹಿಡಿದುಕೊಂಡಿರುವ ಮಗು ಹಾಯಾಗಿ ನಿಂತು ಸರ್ಫಿಂಗ್‌ನ್ನು ಆನಂದಿಸುತ್ತಿದೆ. ಮಗುವಿನ ತಂದೆ ಸಮೀಪದ ಬೋಟ್‌ನಲ್ಲಿ ಇದ್ದು, ಮಗು ಬೀಳದಂತೆ ಆಗಾಗ ಹಿಂದಿನಿಂದ ಆತನ ಬೆನ್ನಿಗೆ ಕೈ ಇಡುವುದನ್ನು ಕಾಣಬಹುದು. ಮೂರು ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 17 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ