ಹಗ್ಗ ಅಲ್ಲ ಹಾವು ಹಿಡ್ಕೊಂಡು ಮನೆಗೆ ಬಂದ ಪೋರ: ವೈರಲ್ ವೀಡಿಯೋ : ಮನೆಯಲ್ಲಿದ್ದವರು ಜೂಟ್

By Anusha Kb  |  First Published Jul 17, 2023, 4:39 PM IST

ಬಾಲಕನೋರ್ವ ತನಗಿಂತಲೂ ಉದ್ದದ ಹಾವನ್ನು ಸ್ವಲ್ಪವೂ ಹೆದರದೇ ಸಲೀಸಾಗಿ ಕೈಯಲ್ಲಿ ಹಿಡಿದುಕೊಂಡು ಮನೆಯೊಳಗೆ ಬಂದಿದ್ದು, ಇದನ್ನು ನೋಡಿದ  ಮನೆಯೊಳಗೆ ಇದ್ದ ಮಹಿಳೆಯರು ಹೆದರಿ ಓಡಲೆತ್ನಿಸಿದ್ದಾರೆ.


ಹಾವುಗಳು ಈ ಪ್ರಪಂಚದಲ್ಲಿರುವ ಅತ್ಯಂತ ಅಪಾಯಕಾರಿ ವಿಷಜಂತುಗಳು, ಇವುಗಳು ಒಂದು ಸಣ್ಣ ಕುಟುಕು ಮನುಷ್ಯನನ್ನು ಪರಲೋಕಕ್ಕೆ ಕಳುಹಿಸಬಲ್ಲದು. ಇಂತಹ ಹಾವು ಕಂಡರೆ ಬಹುತೇಕರು ದೂರ ಓಡೋದೆ ಹೆಚ್ಚು ಅಂತಹದರಲ್ಲಿ ಸಣ್ಣ ಪೋರನೋರ್ವ ಹಾವನ್ನು ಹಗ್ಗದಂತೆ ಹಿಡಿದುಕೊಂಡು ಮನೆಯೊಳಗೆ ಬಂದಿದ್ದು, ಬಾಲಕನ ಈ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋವನ್ನು 𝙁𝙞𝙧𝙨𝙩_𝙡𝙤𝙫𝙚_𝙖𝙙𝙙𝙞𝙘𝙩𝙞𝙤𝙣 ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, 17 ಮಿಲಿಯನ್‌ ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ. ಹಾವನ್ನು ಎಳೆದುಕೊಂಡು ಹೋಗುತ್ತಿರುವ ಶೂರ ಬಾಲಕ ಯಾರು ಎಂಬ ಬಗ್ಗೆ ಈ ವೀಡಿಯೋದಲ್ಲಾಗಲಿ ಶೀರ್ಷಿಕೆಯಲ್ಲಾಗಲಿ ಉಲ್ಲೇಖವಿಲ್ಲ. 

ವೀಡಿಯೋದಲ್ಲೇನಿದೆ. 

Tap to resize

Latest Videos

ವೀಡಿಯೋದಲ್ಲಿ ಬಾಲಕನೋರ್ವ ತನಗಿಂತಲೂ ಉದ್ದದ ಹಾವನ್ನು ಸ್ವಲ್ಪವೂ ಹೆದರದೇ ಸಲೀಸಾಗಿ ಕೈಯಲ್ಲಿ ಹಿಡಿದುಕೊಂಡು ಮನೆಯೊಳಗೆ ಬಂದಿದ್ದು, ಇದನ್ನು ನೋಡಿದ  ಮನೆಯೊಳಗೆ ಇದ್ದ ಮಹಿಳೆಯರು ಹೆದರಿ ಹೋಗಿದ್ದು, ಅಲ್ಲಿದ್ದ ಇತರ ಮಕ್ಕಳನ್ನು ಮೇಲೆತ್ತಿಕೊಂಡು ಅಲ್ಲಿಂದ ದೂರ ಹೋಗಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಪುರುಷರೊಬ್ಬರು, ಹಾವು ಹಿಡಿದುಕೊಂಡಿದ್ದ ಬಾಲಕನನ್ನು ಆತನ ಮತ್ತೊಂದು ಕೈಯಲ್ಲಿ ಹಿಡಿದುಕೊಂಡು ಅಲ್ಲಿಂದ ದೂರ ಕರೆದೊಯ್ಯುತ್ತಾರೆ. 

ಟೊಮೆಟೋ ಹಣ್ಣಿನ ರಾಶಿ ಮಧ್ಯದಲ್ಲಿ ಸರ್ಪರಾಜ: ಮುಟ್ಟಲು ಹೋದವರನ್ನೇ ಕಚ್ಚಲು ಬಂದ ಹಾವು..!

ನೋಡುಗರ ಫನ್ನಿ ಕಾಮೆಂಟ್ ಇಲ್ಲಿದೆ

ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಅನೇಕರನ್ನು ಸೆಳೆದಿದ್ದು, ಬಾಲಕನ ಧೈರ್ಯಕ್ಕೆ ಅನೇಕರು ಮೆಚ್ಚಿದ್ದಾರೆ. ವೀಡಿಯೋ ನೋಡಿದ ಅನೇಕರು ತಮಾಷೆಯಾದ ಕಾಮೆಂಟ್ ಮಾಡಿದ್ದಾರೆ. ಅಮ್ಮ ನೋಡಿಲ್ಲಿ ನನ್ನ ಹೊಸ ಫ್ರೆಂಡ್ ಎಂದು ಬಾಲಕ ಹೇಳುತ್ತಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಸಂಬಂಧಿಕರು ಶಾಲೆಯಲ್ಲಿ ನಿಮಗೆಷ್ಟು ಫರ್ಸೆಂಟೇಜ್ ಬಂತು ಎಂದು ಕೇಳಿದಾಗ? ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ನನ್ನ ಮಾಜಿ ಗೆಳತಿಯನ್ನು ಕುಟುಂಬಕ್ಕೆ ಪರಿಚಿಸಿದ ಕ್ಷಣವನ್ನು ಈ ವೀಡಿಯೋ ನೆನಪಿಸಿದೆ ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ಬಾ ನಾಚಿಕೆ ಪಡಬೇಡ ನಾನು ನನ್ನ ಕುಟುಂಬಕ್ಕೆ ನಿನ್ನನ್ನು ಪರಿಚಯಿಸುತ್ತೇನೆ ಎಂದು ಬಾಲಕ ಹೇಳುತ್ತಿದ್ದರೆ, ಹಾವು ನೋ ನನಗೆ ನಾಚಿಕೆ ಆಗುತ್ತಿದೆ ನನ್ನ ಬಿಟ್ಟುಬಿಡು ಎಂದು ಹಾವು ಹೇಳುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆತ ಆ ಕೋಣೆಯನ್ನು ಎಷ್ಟು ಬೇಗ ಕ್ಲಿಯರ್ ಮಾಡಿದ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಮುತ್ತಿನ ನಗರಿ ನೋಡಲು ಹಾವಿಗೂ ಆಸೆ: ಕಾರ್ಗೋ ಟ್ರಕ್‌ ಏರಿ ಗುಜರಾತ್‌ನಿಂದ ಹೈದರಾಬಾದ್‌ಗೆ ಹಾವಿನ ಸವಾರಿ

 

click me!