ಉದ್ಯೋಗ,ಆರ್ಥಿಕವಕಾಶ ಒದಗಿಸುವ ಭಾರತದ ಟಾಪ್ 10 ಸಣ್ಣ ನಗರ, ಸಮೀಕ್ಷೆ ಪ್ರಕಟ

Published : Jul 15, 2025, 04:02 PM IST
Andhra govt decides to allocate Harbour Park land in Visakhapatnam to LuLu Group

ಸಾರಾಂಶ

ಮಹಾನಗರ ಹೊರತುಪಡಿಸಿ ಭಾರತದ ಇತರ ನಗರಗಳಲ್ಲಿ ಯಾವ ನಗರ ಹೆಚ್ಚು ಉದ್ಯೋಗವಕಾಶ, ಆರ್ಥಿಕವಕಾಶ ಒದಗಿಸುವ ಭಾರತದ ಟಾಪ್ 10 ನಗರ ಪಟ್ಟಿ ಬಿಡುಗಡೆಯಾಗಿದೆ. ಲಿಂಕ್ಡ್‌ ಇನ್ ಸಿಟೀಸ್ ಆನ್ ದಿ ರೈಸ್ ಪಟ್ಟಿಯಲ್ಲಿ ಸ್ಥಾನ ಪಡೆದ ನಗರ ಯಾವುದು, ಕರ್ನಾಟಕದ ನಗರವಿದೆಯಾ?

ನವದೆಹಲಿ (ಜು.15) ಭಾರತದಲ್ಲಿ ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್ ಸೇರಿದಂತೆ ಹಲವು ಮೆಟ್ರೋ ಸಿಟಿಗಳು ಉದ್ಯೋಗ, ಆರ್ಥಿಕವಕಾಶ ನೀಡುವ ಪ್ರಮುಖ ನಗರಗಳಾಗಿದೆ. ಈ ಮಹಾ ನಗರ ಹೊರತುಪಡಿಸಿದರೆ, ಭಾರತದ ಯಾವ ನಗರ ಉದ್ಯೋಗ, ಆರ್ಥಿಕವಕಾಶ, ಪ್ರತಿಭೆಗಳಿಗೆ ಅವಕಾಶ ನೀಡುವ ನಗರವಿದೆ ಅನ್ನೋದು ಇದೀಗ ಸಮೀಕ್ಷೆಯಲ್ಲಿ ಬಯಲಾಗಿದೆ. ಜಗತ್ತಿನ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್‌ ಇನ್ ತನ್ನ ಮೊದಲ ಸಿಟೀಸ್ ಆನ್ ದಿ ರೈಸ್ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಮೊದಲ ಸ್ಥಾನ ಪಡೆದುಕೊಂಡಿದೆ.

ಲಿಂಕ್ಡ್‌ ಇನ್‌ ನ ಸಿಟೀಸ್ ಆನ್ ದಿ ರೈಸ್ ಪಟ್ಟಿಯಲ್ಲಿರುವ 10 ಟಾಪ್ ನಗರಗಳ ಹೆಸರು:

1. ವಿಶಾಖಪಟ್ಟಣ

2. ರಾಂಚಿ

3. ವಿಜಯವಾಡ

4. ನಾಸಿಕ್

5. ರಾಯ್‌ಪುರ್

6. ರಾಜ್‌ಕೋಟ್

7. ಆಗ್ರಾ

8. ಮದುರೈ

9. ವಡೋದರಾ

10. ಜೋಧ್ ಪುರ

ಸಿಟೀಸ್ ಆನ್ ದಿ ರೈಸ್ ಎಂಬುದು ಲಿಂಕ್ಡ್‌ ಇನ್‌ ನ ಮೊದಲ ಪ್ರದೇಶಾಧಾರಿತ ಶ್ರೇಯಾಂಕವಾಗಿದ್ದು, ಇದನ್ನು ಭಾರತದಾದ್ಯಂತ ನೇಮಕಾತಿ, ಉದ್ಯೋಗ ಸೃಷ್ಟಿ ಮತ್ತು ಪ್ರತಿಭಾ ವಲಯದ ಬೆಳವಣಿಗೆಯನ್ನು ಲಿಂಕ್ಡ್‌ ಇನ್‌ ನ ಮಾಹಿತಿಗಳ ಆಧಾರದಿಂದ ಗುರುತಿಸಲಾಗುತ್ತದೆ.

ಐವರಲ್ಲಿ ನಾಲ್ವರು ಬಯಸುತ್ತಿದ್ದಾರೆ ಉದ್ಯೋಗ ಬದಲಾವಣೆ

ಈ ವರ್ಷ ಐದರಲ್ಲಿ ನಾಲ್ಕು ಭಾರತೀಯ ವೃತ್ತಿಪರರು ಉದ್ಯೋಗ ಬದಲಾವಣೆಗೆ ಇಚ್ಛಿಸುತ್ತಿದ್ದು, ಈ ಸಂದರ್ಭದಲ್ಲಿ ಸಿಟೀಸ್ ಆನ್ ದಿ ರೈಸ್ ಪಟ್ಟಿಯು ಸಾಂಪ್ರದಾಯಿಕ ಮಹಾ ನಗರಗಳಾಚೆಗಿನ ಪ್ರದೇಶಗಳಲ್ಲಿ ಎಲ್ಲಿ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬಹುದು ಎಂಬುದರು ಕುರಿತು ಮಾರ್ಗದರ್ಶನ ನೀಡುತ್ತದೆ. ಈ ಪಟ್ಟಿಯು ಸ್ಥಳಾಂತರಗೊಳ್ಳಲು, ಹೊಸ ಕೈಗಾರಿಕಾ ವಲಯಗಳಲ್ಲಿ ಹುದ್ದೆಗಳನ್ನು ಹುಡುಕಲು ಅಥವಾ ಸ್ಥಳೀಯವಾಗಿ ವೃತ್ತಿಜೀವನವನ್ನು ಬೆಳೆಸಲು ಬಯಸುವ ವೃತ್ತಿಪರರಿಗೆ ಎರಡನೇ ಮತ್ತು ಮೂರನೇ ಹಂತದ ನಗರಗಳನ್ನು ಸೂಚಿಸುತ್ತಿದೆ.

ತಂತ್ರಜ್ಞಾನ, ಔಷಧ ಮತ್ತು ಹಣಕಾಸು ಕಂಪನಿಗಳ ಹೂಡಿಕೆಯಿಂದ ಎರಡನೇ ಮತ್ತು ಮೂರನೇ ಹಂತದ ಭಾರತೀಯ ನಗರಗಳು ಕರಿಯರ್ ಹಬ್ ಗಳಾಗಿ ಬದಲಾಗುತ್ತಿವೆ ಡೇಟಾ ಮತ್ತು ಎಐ ಬೂಮ್‌ ನ ಮಧ್ಯೆ, ಮಿರಾಕಲ್ ಸಾಫ್ಟ್‌ ವೇರ್ ಸಿಸ್ಟಮ್ಸ್ ಇಂಕ್ (ವಿಶಾಖಪಟ್ಟಣ), ಹೆಚ್ ಸಿ ಎಲ್ ಟೆಕ್ (ವಿಜಯವಾಡ, ಮದುರೈ), ಇನ್ಫೋಸಿಸ್ (ವಿಜಯವಾಡ), ಡೇಟಾಮ್ಯಾಟಿಕ್ಸ್ (ನಾಸಿಕ್), ಬುಲ್ ಐಟಿ ಸರ್ವೀಸಸ್ (ಮದುರೈ) ಮುಂತಾದ ತಂತ್ರಜ್ಞಾನ ಕಂಪನಿಗಳು ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕಚೇರಿಗಳನ್ನು ಸ್ಥಾಪಿಸುತ್ತಿವೆ. ಈ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಒದಗಿಸುತ್ತಿವೆ. ಹೆಲ್ತ್ ಕೇರ್ ಮತ್ತು ಫಾರ್ಮಾ ಕಂಪನಿಗಳಾದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಲಾರಸ್ ಲ್ಯಾಬ್ಸ್ ಲಿಮಿಟೆಡ್, ಅಲೆಂಬಿಕ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್, ಸನ್ ಫಾರ್ಮಾ ಮುಂತಾದ ಕಂಪನಿಗಳು ವಿಶಾಖಪಟ್ಟಣ ಮತ್ತು ವಡೋದರಾದಲ್ಲಿ ಉದ್ಯಾವಕಾಶಗಳನ್ನು ಸೃಷ್ಟಿಸುತ್ತಿವೆ. ಹೆಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸಂಸ್ಥೆಗಳು ರಾಯ್‌ಪುರ್, ಆಗ್ರಾ, ಮತ್ತು ಜೋಧ್‌ಪುರ್‌ನಲ್ಲಿ ಹಣಕಾಸು ಸೇವಾ ವಿಭಾಗದಲ್ಲಿ ಅಭಿವೃದ್ಧಿ ಸಾಧಿಸುತ್ತಿವೆ.

ಈ ನಗರಗಳಲ್ಲಿ ಬಿಸಿನೆಸ್ ಡೆವಲಪ್ಮೆಂಟ್ ಮತ್ತು ಎಂಜಿನಿಯರಿಂಗ್ ಹುದ್ದೆಗಳಿಗೆ ಜಾಸ್ತಿ ಬೇಡಿಕೆ 

10 ಅಭಿವೃದ್ಧಿಶೀಲ ನಗರಗಳಲ್ಲಿ 6 ನಗರಗಳಲ್ಲಿ ಬಿಸಿನೆಸ್ ಡೆವಲಪ್ಮೆಂಟ್ ಹುದ್ದೆಗಳಿಗೆ ಜಾಸ್ತಿ ಉದ್ಯೋಗಾವಕಾಶ ದೊರಕುತ್ತಿವೆ. ಇದರಲ್ಲಿ ನಾಸಿಕ್, ರಾಯ್‌ಪುರ್, ರಾಜ್‌ಕೋಟ್, ಆಗ್ರಾ, ವಡೋದರಾ, ಮತ್ತು ಜೋಧ್‌ಪುರ್ ಮುಂಚೂಣಿಯಲ್ಲಿವೆ. ವಿಶಾಖಪಟ್ಟಣ, ವಿಜಯವಾಡ, ಮತ್ತು ಮದುರೈನ ವೃತ್ತಿಪರರಿಗೆ ಎಂಜಿನಿಯರಿಂಗ್ ವಿಭಾಗದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಸೇಲ್ಸ್, ಆಪರೇಷನ್ಸ್, ಮತ್ತು ಶಿಕ್ಷಣ ವಿಭಾಗಗಳು ಎರಡನೇ ಮತ್ತು ಮೂರನೇ ಹಂತದ ನಗರಗಳ ವೃತ್ತಿಪರರು ಉದ್ಯೋಗವನ್ನು ಹುಡುಕಬಹುದಾದ ಇತರ ಪ್ರಮುಖ ಕ್ಷೇತ್ರಗಳಾಗಿವೆ.

ಸರ್ಕಾರವು ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ ಮೂಲಕ ಸಣ್ಣ ಊರುಗಳನ್ನೂ ಕರಿಯರ್ ಹಾಟ್ ಸ್ಪಾಟ್ ಗಳಾಗಿ ಪರಿವರ್ತಿಸುತ್ತಿದೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಥಳೀಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಸಣ್ಣ ನಗರಗಳು ಅಭಿವೃದ್ಧಿ ಹೊಂದುತ್ತಿರುವುದು ಸಾಧ್ಯವಾಗಿದೆ. ವಿಶೇಷವಾಗಿ ರಾಂಚಿ (#2) ಯಲ್ಲಿ, ಸ್ಮಾರ್ಟ್ ಸಿಟಿ ಯೋಜನೆಗಳು ನಡೆಯುತ್ತಿದ್ದು, ಅದರ ರಾಜಧಾನಿಯಾದ ಜಾರ್ಖಂಡ್‌ ವೃತ್ತಿಪರರಿಗೆ ಆಕರ್ಷಕ ಕರಿಯರ್ ಹಬ್ ಆಗಿ ರೂಪುಗೊಂಡಿದೆ. ರಾಜ್‌ಕೋಟ್ (#6) ನಲ್ಲಿ ರಸ್ತೆ ಸಂಪರ್ಕವನ್ನು ಸುಧಾರಿಸಲು ಅತ್ಯುತ್ತಮ ಯೋಜನೆ ಹಾಕಲಾಗಿದ್ದು, ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದೆ. ಛತ್ತೀಸ್‌ಗಢ ಸರ್ಕಾರದ ‘ನಯಾ ರಾಯ್‌ಪುರ್’ ಯೋಜನೆಯಿಂದ ಅಲ್ಲಿ ಮೂಲಸೌಕರ್ಯದ ಮೇಲಿನ ಹೂಡಿಕೆ ಹೆಚ್ಚುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..