ನೆರೆ ಸಂತ್ರಸ್ತರಿಗೆ ಬಂದ ಹಣದಲ್ಲಿ ಕಮೀಷನ್‌: ಇಡಿಯಿಂದ ಕೇರಳ ಸಿಎಂ ಮಾಜಿ ಕಾರ್ಯದರ್ಶಿ ಬಂಧನ

By Suvarna News  |  First Published Feb 15, 2023, 8:19 AM IST

ಲೈಫ್ ಮಿಷನ್ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಕೇರಳ ಸಿಎಂ ಮಾಜಿ ಕಾರ್ಯದರ್ಶಿ ಶಿವಶಂಕರ್ ಅವರನ್ನು ಇಡಿ ಬಂಧಿಸಿದೆ.  


ಬೆಂಗಳೂರು: ಲೈಫ್ ಮಿಷನ್ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಕೇರಳ ಸಿಎಂ ಮಾಜಿ ಕಾರ್ಯದರ್ಶಿ ಶಿವಶಂಕರ್ ಅವರನ್ನು ಇಡಿ ಬಂಧಿಸಿದೆ.  ಕೇರಳದ ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಲು ರೆಡ್ ಕ್ರೆಸೆಂಟ್ ಎನ್‌ಜಿಒ ಕಳುಹಿಸಿದ ಹಣದಲ್ಲಿ ಅಧಿಕಾರಿಗಳಿಗೆ ಕಮೀಷನ್ ನೀಡಲು ಮುಖ್ಯ ಗುತ್ತಿಗೆದಾರರು ಒಪ್ಪಿದ್ದಕ್ಕೆ ಸಂಬಂಧಿಸಿದಂತೆ ಪ್ರಕರಣ ಇದಾಗಿದೆ.  ಕೇರಳದ ಅಸಹಾಯಕ ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕಾಗಿ ರೆಡ್ ಕ್ರೆಸೆಂಟ್ ಎನ್‌ಜಿಒ ಹಣ ಕಳುಹಿಸಿತ್ತು. ಇದರಲ್ಲಿ  ಅಧಿಕಾರಿಗಳಿಗೆ ಮುಂಗಡ ಕಮಿಷನ್ ನೀಡಲು ಮುಖ್ಯ ಗುತ್ತಿಗೆದಾರರು ಒಪ್ಪಿಕೊಂಡಿದ್ದರು ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ಅನ್ನು  ರದ್ದು ಮಾಡುವಂತೆ ಕೋರಿ ಕೇರಳ ಹೈಕೋರ್ಟ್‌ಗೆ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆ ಅಮಾನತು ಮಾಡಿದ ಕೇರಳ ಹೈಕೋರ್ಟ್, ತನಿಖೆ ಮುಂದುವರಿಸುವಂತೆ ಸಿಬಿಐಗೆ ಸೂಚಿಸಿತ್ತು. ಇದೇ ವೇಳೆ ಇದೊಂದು ಬುದ್ಧಿವಂತಿಕೆಯ ಪ್ರಕರಣ ಎಂದು ಕೋರ್ಟ್ ಹೇಳಿತ್ತು. ಕೇರಳ ನೆರೆ ಸಂತ್ರಸ್ತರಿಗೆ ಮನೆಗಳನ್ನು ಮಾಡಿಕೊಡುವ ಸಲುವಾಗಿ ವಿದೇಶದಿಂದ ಬಂದ  ಹಣದಲ್ಲಿ ವಿದೇಶಿ ನೆರವಿನ ನಿಯಂತ್ರಣದ ಉಲ್ಲಂಘನೆಯಾಗಿದ್ದು, ಹಾಗೂ ಕೇರಳ ಸರ್ಕಾರದ ಲೈಫ್ ಮಿಷನ್ ಯೋಜನೆಯಲ್ಲಿನ ಭ್ರಷ್ಟಾಚಾರದ ಪ್ರಕರಣ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಲೈಫ್ ಮಿಷನ್ ಯೋಜನೆಯ ಸಿಇಒ ಹಾಗೂ ಗುತ್ತಿಗೆದಾರ ಸಂಸ್ಥೆ ಯುನಿಟೆಕ್ (Unitac) ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ಗಣನೆಗೆ ತೆಗೆದುಕೊಂಡಿತ್ತು. 

Tap to resize

Latest Videos

ಕಳೆದ ಪ್ರವಾಹದಲ್ಲಿ ಹುಟ್ಟಿದ ಪ್ರೀತಿ ಈ ಪ್ರವಾಹದಲ್ಲಿ ಮದುವೆಯೊಂದಿಗೆ ಸುಖಾಂತ್ಯ!

ಪ್ರಸ್ತುತ ಜಾರಿ ನಿರ್ದೇಶನಾಲಯದಿಂದ ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಜಿ ಕಾರ್ಯದರ್ಶಿ ಶಿವಶಂಕರ್ ಬಂಧನವಾಗಿದ್ದು, ವೈದ್ಯಕೀಯ ತಪಾಸಣೆ ಬಳಿಕ ಅವರನ್ನು ಎರ್ನಾಕುಲಂನ ಪ್ರಿನ್ಸಿಪಲ್ ಸೆಷನ್ ಕೋರ್ಟ್‌ಗೆ ಇಂದು ಹಾಜರುಪಡಿಸಲಾಗುವುದು. ನಿನ್ನೆ ರಾತ್ರಿ ಶಿವಶಂಕರ್ ಅವರನ್ನು ಇಡಿ ಬಂಧಿಸಿದ್ದು, ಇದರೊಂದಿಗೆ ಶಿವಶಂಕರ್ ಮೂರನೇ ಬಾರಿ ಬಂಧನಕ್ಕೊಳಗಾಗುತ್ತಿದ್ದಾರೆ. ಮಾಜಿ ಶಾಸಕ ಅನಿಲ್ ಅಕ್ಕರಾ ಅವರು ಈ ಬಂಧನವನ್ನು ಸ್ವಾಗತಿಸಿದ್ದು, ಈ ಪ್ರಕರಣದಲ್ಲಿ ಇನ್ನಷ್ಟು  ಆರೋಪಿಗಳ ಬಂಧನವಾಗಲಿದೆ ಎಂದು ಅವರು ಹೇಳಿದರು. 

ನೆರೆಪೀಡಿತ ಕೇರಳದಲ್ಲಿ ಮಹಿಳೆಯರಿಗೆ ಒಳ ಒಡುಪು ಬೇಕೆಂದ ಆ್ಯಕ್ಟಿವಿಸ್ಟ್ ಸೆರೆ!

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲೈಫ್ ಮಿಷನ್ ಸಿಇಒ ವಿರುದ್ಧದ ತನಿಖೆಗೆ ಕೋರ್ಟ್ ತಡೆ ನೀಡಿತ್ತು.  ಆದರೆ  ನಿರ್ಮಾಣ ಸಂಸ್ಥೆ ಯುನಿಟೆಕ್ ವಿರುದ್ಧ ತನಿಖೆ ಮುಂದುವರಿಸುವಂತೆ ಸೂಚಿಸಿತ್ತು.  2020 ರ ರಾಜತಾಂತ್ರಿಕ ಮಟ್ಟದಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ (diplomatic gold smuggling case)ಬಂಧನ ಸೇರಿದಂತೆ ಮೂರನೇ ಬಾರಿ  ಶಿವಶಂಕರ್ ಬಂಧನವಾಗಿದೆ. ನಿವೃತ್ತ ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಶಿವಶಂಕರ್ ಅವರನ್ನು ಇಡಿ ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಸುತ್ತಿದ್ದು, ನಿನ್ನೆ  ರಾತ್ರಿ 11 ಗಂಟೆ ಸುಮಾರಿಗೆ ಬಂಧಿಸಿದೆ. 

ಯುಎಇ ಕಾನ್ಸುಲೇಟ್ ಮೂಲಕ ವಿದೇಶೀ ಎನ್‌ಜಿಒ ರೆಡ್ ಕ್ರೆಸೆಂಟ್ ನೀಡಿದ 18.5 ಕೋಟಿ ರೂ.ಗಳಲ್ಲಿ 14.5 ಕೋಟಿ ರೂ.ಗಳನ್ನು ಖರ್ಚು ಮಾಡಿ ತ್ರಿಶೂರ್ ಜಿಲ್ಲೆಯ ವಡಕ್ಕಂಚೇರಿಯಲ್ಲಿ ( Wadakkanchery) ಪ್ರವಾಹದಿಂದ ಹಾನಿಗೊಳಗಾದ 140 ಕುಟುಂಬಗಳಿಗೆ ಮನೆ ನಿರ್ಮಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ಲೈಫ್ ಮಿಷನ್ ಯೋಜನೆಯಲ್ಲಿ (LIFE Mission scheme) ನಡೆದ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಉಳಿದ ಮೊತ್ತವನ್ನು ಬಳಸಿಕೊಂಡು ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಗುತ್ತಿಗೆ ನೀಡಲು ನಿರ್ಧರಿಸಲಗಿತ್ತು. ಯೋಜನೆಗಾಗಿ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ (Swapna Suresh) ಸೇರಿದಂತೆ ಆರೋಪಿಗಳು 3.8 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಗುತ್ತಿಗೆದಾರ, ಯುನಿಟೆಕ್ ವ್ಯವಸ್ಥಾಪಕ ನಿರ್ದೇಶಕ(Unitac managing director) ಸಂತೋಷ್ ಈಪನ್ (Santhosh Eapan) ಹೇಳಿಕೆ ನೀಡಿದ್ದರು. 

 

 

 

click me!