ಅಮಾನತುಗೊಂಡಿದ್ದ ಜಮ್ಮು ಕಾಶ್ಮೀರ ಲೆ. ಗವರ್ನರ್ ಟ್ವಿಟರ್ ಖಾತೆ ಸಕ್ರಿಯ!

By Suvarna NewsFirst Published May 10, 2021, 10:04 PM IST
Highlights
  • ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಟ್ವಿಟರ್ ಖಾತೆ ಅಮಾನತು
  • ಟ್ವಿಟರ್ ಹಾಗೂ ರಾಜಭವನ ಹೇಳುತ್ತಿರುವ ಕಾರಣ ಭಿನ್ನ
  • ಕೆಲ ಗಂಟೆಗಳ ಬಳಿಕ ಖಾತೆ ಸಕ್ರಿಯ

ಜಮ್ಮು ಮತ್ತು ಕಾಶ್ಮೀರ(ಮೇ.10): ಟ್ವಿಟರ್ ಖಾತೆ ಅಮಾನತು ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಖಾತೆ ಸಸ್ಪೆಂಡ್ ಆದ ಬಳಿಕ ಖಾತೆ ಅಮಾನತು ಘಟನೆಗಳು ಹೆಚ್ಚು ವರದಿಯಾಗುತ್ತಿದೆ. ಇತ್ತೀಚೆಗೆ ಬಾಲಿವುಡ್ ನಟಿ ಕಂಗನಾ ರನಾವತ್ ಟ್ವಿಟರ್ ಖಾಖೆ ಅಮಾನತು ಮಾಡಲಾಗಿತ್ತು. ಇದು ಪರ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹ ಟ್ವಿಟರ್ ಖಾತೆ ಅಮಾನತುಗೊಂಡಿದೆ. ಆದರೆ ಕೆಲ ಗಂಟೆಗಳ ಬಳಿಕ ಖಾತೆ ಸಕ್ರಿಯಗೊಂಡಿದೆ.

ರಾಜ್ಯದ ಭದ್ರತೆ ಹಿತದೃಷ್ಟಿಯಿಂದ ಶಾಲಾ ಶಿಕ್ಷಕ ಅಮಾನತು !.

ಮನೋಜ್ ಸಿನ್ಹ ಟ್ವಿಟರ್‌ನಲ್ಲಿ 50,000 ಫಾಲೋವರ್ಸ್ ಹೊಂದಿದ್ದರು. ಮನೋಜ್ ಸಿನ್ಹಾ ಖಾತೆ ಇದೀಗ ತೆರೆಯುತ್ತಿಲ್ಲ. ಬದಲಾಗಿ ಟ್ವಿಟರ್ ನಿಯಮ ಉಲ್ಲಂಘಿಸಿದ ಕಾರಣ ಅಮಾನತು ಮಾಡಲಾಗಿದೆ ಎಂಬ ಸಂದೇಶ ಕಾಣುತ್ತಿತ್ತು.

ಜಮ್ಮು ಕಾಶ್ಮೀರ ಅಭಿವೃದ್ಧಿಗೆ 1,350 ಕೋಟಿ ರೂಪಾಯಿ ಪ್ಯಾಕೇಜ್!.

ಆದರೆ ರಾಜಭವನ ಈ ಮಾತನ್ನು ಅಲ್ಲಗೆಳೆದಿದೆ. ಇದು ತಾಂತ್ರಿಕ ಕಾರಣದಿಂದ ಆಗಿದೆ. ಗವರ್ನರ್ ಖಾತೆಯಲ್ಲಿ ಕಂಡು ಬಂದಿರುವ ಟೆಕ್ನಿಕಲ್ ಎರರ್ ಸರಿಯಾದ ಬೆನ್ನಲ್ಲೇ ಖಾತೆ ಸಕ್ರಿಯವಾಗಲಿದೆ ಎಂದು ಜಮ್ಮ ಮತ್ತು ಕಾಶ್ಮೀರ ರಾಜಭವನ ಖಚಿತ ಪಡಿಸಿತ್ತು.

ಕೆಲ ಗಂಟೆಗಳ ಬಳಿಕ ಮನೋಜ್ ಸಿನ್ಹಾ ಖಾತೆ ಸಕ್ರಿಯವಾಗಿದೆ. ಇಷ್ಟೇ ಅಲ್ಲ ಇದು ಕೆಲ ತಾಂತ್ರಿಕ ಕಾರಣಗಳಿಂದ ಆಗಿದೆ ಎಂಬುದು ಸಾಬೀತಾಗಿದೆ. ಕಾರಣ ಟ್ವಿಟರ್ ಅಮಾನತು ಮಾಡಿದ ಖಾತೆ ಮತ್ತೆ ಸಕ್ರಿಯಗೊಳ್ಳುವ ಸಾಧ್ಯತೆ ವಿರಳ. ಟ್ವಿಟರ್ ನಿಯಮ ಉಲ್ಲಂಘಿಸಿದ ಮನೋಜ್ ಸಿನ್ಹಾ ಖಾತೆ ಇದೀಗ ಸಕ್ರಿಯವಾಗಿದೆ

click me!