
ನವದೆಹಲಿ(ಏ.15): ದೇಶ ಸ್ವಾತಂತ್ರ್ಯ ಪಡೆದಿತ್ತು, ಸಾಮಾನ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಗೆಲುವು ಸಾಧಿಸಿತ್ತು. 1952ರಲ್ಲಿ ನಡೆದಿದ್ದ ಸಾಮಾನ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಯಶಸ್ಸಿಗೆ ಸಂಬಂಧಿಸಿದಂತೆ ಭಾರತದ ಮೊಟ್ಟ ಮೊದಲ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರೂ ಎಡ್ವಿನಾ ಮೌಂಟ್‌ಬೆಟನ್‌ಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಅವರು ಭಾರತದಲ್ಲಿ ಕಾಂಗ್ರೆಸ್‌ನ ಗೆಲುವು ಹಾಗೂ ವಿರೋಧಿಗಳ ಸೋಲಿನ ಬಗ್ಗೆ ಉಲ್ಲೇಖಿಸಿದ್ದರು. ಇದರಲ್ಲಿ ಅವರು ಅಂಬೇಡ್ಕರ್‌ರವರ ಸೋಶಿಯಲಿಸ್ಟ್‌ರವರೊಂದಿಗಿನ ಮೈತ್ರಿಯ ಸೋಲಿನ ಬಗ್ಗೆಯೂ ಉಲ್ಲೇಖಿಸಿದ್ದರು. ಅಂಬೇಡ್ಕರ್ ಜಯಂತಿಯಂದು ಮತ್ತೊಂದು ಬಾರಿ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ.
ಅಂಬೇಡ್ಕರ್ ಭವನಕ್ಕೆ ಶಾಸಕರೇ ಸೈಟ್ ಹುಡುಕಿಕೊಡಿ: ರಾಮುಲು
ಎಡ್ವಿನಾರಿಗೆ ನೆಹರೂ ಬರೆದಿದ್ದ ಪತ್ರ ಬಹಳ ಉದ್ದವಿದೆ. ಆದರೆ ಇದರ ಕೆಲ ಅಂಶಗಳು ಹೀಗಿವೆ
ಪಂಡಿತ್ ನೆಹರೂ ಬರೆದದ್ದು ಹೀಗೆ: ನಾವು ಬಾಂಬೆ ಸಿಟಿ ಹಾಗೂ ಬಾಂಬೆ ಪ್ರಾಂತ್ಯದಲ್ಲಿ ಊಹೆಗಿಂತಲೂ ಮೀರಿ ಯಶಸ್ಸು ಗಳಿಸಿದ್ದೇವೆ. ಅಂಬೇಡ್ಕರ್ ಈ ಚುನಾವಣೆಯಲ್ಲಿ ಹೊರಗುಳಿದಿದ್ದಾರೆ. ಸೋಶಿಯಲಿಸ್ಟ್‌ಗಳೂ ಬಹಳ ನಿರಾಶಾದಾಯಕ ಪ್ರದರ್ಶನ ತೋರಿದ್ದಾರೆ. ಆದರೆ ಕಮ್ಯೂನಿಸ್ಟ್ ಹಾಗೂ ಕಮ್ಯೂನಿಸ್ಟ್ ನೇತೃತ್ವದ ಒಂದು ತಂಡ ಬಹಳ ಉತ್ತಮ ಸಾಧನೆ ತೋರಿದೆ. ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಇಡೀ ದೇಶದಲ್ಲಿ ನಾವು ಅತ್ಯುತ್ತಮ ಸಾಧನೆ ಮಾಡಿದ್ದೇವೆ. ಕೆಲ ಪಕ್ಷೇತರರೂ ಗೆದ್ದಿದ್ದಾರೆ ಎಂದಿದ್ದಾರೆ.
ಮುಂದುವರೆಸಿ ಬರೆದಿರುವ ನೆಹರೂ 'ಈ ಚುನಾವಣೆಯಲ್ಲಿ ಇತರ ಕೆಲ ರಾಜಕೀಯ ಪಕ್ಷಗಳು ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲು ವೈಯುಕ್ತಿಕ ವಾಗ್ದಾಳಿಗೆ ಹೆಚ್ಚು ಒತ್ತು ನೀಡಿದ್ದವು. ಉತ್ತರ ಭಾರತದಲ್ಲಿ ನಮ್ಮ ಪ್ರಮುಖ ವಿರೋಧ ಪಕ್ಷ ಹಿಂದೂ ಹಾಗೂ ಸಿಖ್ಖರ ಪ್ರಮುಖ ಸಾಂಪ್ರದಾಯಿಕ ಪಕ್ಷವಿದೆ. ಇವರ ಗುರಿಯೇ ನಾನು ಎಂದಿದ್ದಾರೆ.
ಇಷ್ಟೇ ಅಲ್ಲದೇ ಈ ಚುನಾವಣೆಯ ಅತ್ಯಂತ ಶಾಕಿಂಗ್ ಹಾಗೂ ದೌರ್ಭಾಗ್ಯಶಾಲಿ ವಿಚಾರವೆಂದರೆ ವಿರೋಧಿ ವಿಚಾರಧಾರೆಯುಳ್ಳ ಪಕ್ಷಗಳೆಲ್ಲವೂ ಮೈತ್ರಿ ಮಾಡಿಕೊಂಡಿವೆ. ಸೋಶಿಯಲಿಸ್ಟ್‌ಗಳ ಮೈತ್ರಿ ಅಂಬೇಡ್ಕರ್ ಪಕ್ಷದೊಂದಿಗೆ ಆಗಿದೆ. ಇದರ ಪರಿಣಾಮವಾಗಿ ಇವರು ಜನರ ವಿಶ್ವಾಸ ಕಳೆದುಕೊಂಡರು. ಅಂಬೇಡ್ಕರ್ ಹಿಂದೂ ಸಾಂಪ್ರದಾಯಿಕ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡರು. ಕೃಪಲಾನಿ ಕೂಡಾ ವಿಚಿತ್ರವಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಅವರ ಪಕ್ಷ ಬಲಪಂಥೀಯರೊಡನೆ ಸೇರಿಕೊಂಡಿದೆ ಎಂದಿದ್ದಾರೆ.
ಸಾಮಾನ್ಯ ಚುನಾವಣೆಯಲ್ಲಿ, ವಿಚಾರಧಾರೆಗಳಲ್ಲಿ ಹತ್ತಿರ ಬರಲಾಗದ ಮೈತ್ರಿಗಳಾದವು. ಇವರೆಲ್ಲರೂ ಕಾಂಗ್ರೆಸ್‌ನ್ನು ಸೋಲಿಸಲು ಒಗ್ಗಟ್ಟು ಪ್ರದರ್ಶಿಸಿದವರು ಎಂದೂ ಬರೆದಿದ್ದಾರೆ.
ನಾವು ಗಮನಿಸದ ಬಾಬಾ ಸಾಹೇಬ್ ಇನ್ನೊಂದು ಮುಖ
ಭಾರತದ ಆಂತರಿಕ ರಾಜಕೀಯ ಆಗು ಹೋಗುಗಳ ಬಗ್ಗೆ ಬರೆದಿದ್ದ ಪತ್ರಕ್ಕೆ ಖಂಡನೆ
ದೇಶದಲ್ಲಿ ನಡೆದ ಚುನಾವಣೆ ಹಾಗೂ ಆಂತರಿಕ ರಾಜಕೀಯದ ಬಗ್ಗೆ ಪಂಡಿತ್ ಜವಾಹರಲಾಲ್ ನೆಹರೂರವರು ಎಡ್ವಿನಾರಿಗೆ ಬರೆದ ಈ ಪತ್ರ ಭಾರೀ ವೈರಲ್ ಆಗಿದೆ. ಹೀಗಿರುವಾಗ ಆಂತರಿಕ ರಾಜಕೀಯ ಸೂಲಕ್ಷ್ಮ ವಿಚಾರಗಳನ್ನು ವಿದೇಶೀ ಮಹಿಳೆ ಜೊತೆ ಹಂಚಿಕೊಂಡಿರುವ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ