
ಪಿಟಿಐ ಕುಲ್ತಲಿ (ಪಶ್ಚಿಮ ಬಂಗಾಳ) (ನ.9): ದೇಶದಲ್ಲಿ ಸಲಿಂಗ ವಿವಾಹದ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೇ, ಪಶ್ಚಿಮ ಬಂಗಾಳದ ಸುಂದರಬನದಲ್ಲಿ ಇಬ್ಬರು ಯುವತಿಯರು ಪರಸ್ಪರ ಒಪ್ಪಿಗೆ ಮೇರೆಗೆ ಹಸೆಮಣೆ ಏರಿದ್ದಾರೆ.
ಸಲಿಂಗ ವಿವಾಹಕ್ಕೆ ದೇಶದಲ್ಲಿ ಮಾನ್ಯತೆ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತ ವಿಚಾರಣೆ ಬಾಕಿಯಿರುವಾಗಲೇ ಈ ಪ್ರಸಂಗ ನಡೆದಿದೆ. ವೃತ್ತಿಪರ ನೃತ್ಯಪಟುಗಳಾದ ರಿಯಾ ಸರ್ದಾರ್ ಮತ್ತು ರಾಖಿ ನಸ್ಕರ್ ನ.4ರಂದು ಕುಲ್ತಲಿಯ ಜಲಬೇರಿಯಾದಲ್ಲಿರುವ ಪಲೇರ್ ಚಕ್ ದೇವಸ್ಥಾನದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ರಿಯಾ ವಧುವಿನಂತೆ ಸಿಂಗರಿಸಿಕೊಂಡರೆ, ರಾಖಿ ಮದುಮಗನ ದಿರಿಸಿನಲ್ಲಿ ಗಮನ ಸೆಳೆದರು. ಅನೇಕ ಮಂದಿ ಹಳ್ಳಿಗರು ವಿವಾಹಕ್ಕೆ ಆಗಮಿಸಿದ್ದರು.
ಈ ಅಪರೂಪದ ವಿವಾಹವನ್ನು ನೋಡಿ ಕೆಲವು ಅಚ್ಚರಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ಮೌನವಾಗಿ ಸಮ್ಮತಿ ತೋರಿದರು.ಈ ನಡುವೆ ಮಾತನಾಡಿರುವ ರಾಖಿ, ‘ನಾವು ವಯಸ್ಕರು. ನಮ್ಮ ಜೀವನವನ್ನು ನಾವೇ ನಿರ್ಧರಿಸಬಹುದು. ಜೀವನಸಂಗಾತಿಯನ್ನು ಆಯ್ಕೆ ಮಾಡುವಾಗ ಲಿಂಗ ಏಕೆ ಮುಖ್ಯ?’ ಎಂದು ಪ್ರಶ್ನಿಸಿದ್ದಾರೆ.
‘ಮದುವೆ ಬಗ್ಗೆ ನಮಗೆ ಯಾವುದೇ ಅಧಿಕೃತ ವರದಿ ಬಂದಿಲ್ಲ. ಹಳ್ಳಿಗರು ದೇವಸ್ಥಾನದ ಕಾರ್ಯಕ್ರಮದಲ್ಲಿ ಶಾಂತವಾಗಿ ಸೇರಿದರೆ, ನಾವು ಏನೂ ಮಾಡಲು ಆಗುವುದಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ