ಮರವೇರಿ ಮರಿಕೋತಿಯ ಬೇಟೆಯಾಡಿದ ಚೀತಾ: ವಿಡಿಯೋ ವೈರಲ್‌

By Anusha Kb  |  First Published Jul 1, 2022, 5:26 PM IST

ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತಾರಣ್ಯದಲ್ಲಿ ಚಿರತೆಯೊಂದು ಮರವೇರಿ ಕೋತಿಯನ್ನು ಬೇಟೆಯಾಡಿದ ವಿಡಿಯೋವೊಂದು ವೈರಲ್ ಆಗಿತ್ತು. ಈಗ ಅದೇ ಸ್ಥಳದಲ್ಲಿ ಮತ್ತೊಂದು ಅದೇ ರೀತಿಯ ಘಟನೆ ನಡೆದಿದೆ.


ಭೋಪಾಲ್‌: ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತಾರಣ್ಯದಲ್ಲಿ ಚಿರತೆಯೊಂದು ಮರವೇರಿ ಕೋತಿಯನ್ನು ಬೇಟೆಯಾಡಿದ ವಿಡಿಯೋವೊಂದು ವೈರಲ್ ಆಗಿತ್ತು. ಈಗ ಅದೇ ಸ್ಥಳದಲ್ಲಿ ಮತ್ತೊಂದು ಅದೇ ರೀತಿಯ ಘಟನೆ ನಡೆದಿದೆ. ಈ ಬಾರಿ ಬಲಿಯಾಗಿದ್ದು ಮಾತ್ರ ಮರಿಕೋತಿ. ಇದರ ವಿಡಿಯೋವನ್ನು ಪನ್ನಾ ಹುಲಿ ಸಂರಕ್ಷಿತಾರಣ್ಯಕ್ಕೆ ಸೇರಿದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ. 

ಛಂಗನೆ ಮರವೇರುವ ಚಿರತೆ ಮರದ ಮೇಲೆ ನೇತಾಡುತ್ತಿದ್ದ ಕೋತಿಯ ಮರಿಯನ್ನು ಬೇಟೆಯಾಡಿ ಬಾಯಲ್ಲಿ ಕಚ್ಚಿಕೊಂಡು ಮರದಿಂದ ಕೆಳಗಿಳಿಯುತ್ತದೆ. ಜೂನ್ 28 ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 5,000 ಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಟ್ವಿಟರ್ ಬಳಕೆದಾರರು ಈ ದೃಶ್ಯಗಳನ್ನು ಕುತೂಹಲ ಮತ್ತು ಗಾಬರಿಯಿಂದ ವೀಕ್ಷಿಸಿದ್ದಾರೆ. 

1/n
A rare sight @pannatigerreserve. A leopard can be seen hunting a baby monkey by jumping on the tree. pic.twitter.com/utT4h58uuF

— Panna Tiger Reserve (@PannaTigerResrv)

Tap to resize

Latest Videos

 

ಈ ಪನ್ನಾ ಹುಲಿ ಸಂರಕ್ಷಿತಾರಣ್ಯವೂ ಹುಲಿಗಳು, ಕರಡಿಗಳು, ಭಾರತೀಯ ತೋಳಗಳು, ಪ್ಯಾಂಗೊಲಿನ್‌ಗಳು, ಚಿರತೆಗಳು, ಘಾರಿಯಲ್‌ಗಳು ಮತ್ತು ಭಾರತೀಯ ನರಿಗಳು ಸೇರಿದಂತೆ ಹಲವಾರು ಕಾಡು ಪ್ರಾಣಿಗಳ ಆವಾಸ ಸ್ಥಾನವಾಗಿದೆ. ಇಲ್ಲಿ ಹೆಚ್ಚಾಗಿ ಭಾರತೀಯ ರಣಹದ್ದುಗಳು, ಕೆಂಪು ತಲೆಯ ರಣಹದ್ದು, ಹೂವು ತಲೆಯ ಗಿಳಿ, ಕ್ರೆಸ್ಟೆಡ್ ಜೇನು ಬಜಾರ್ಡ್ ಮತ್ತು ಬಾರ್ ಹೆಡೆಡ್ ಹೆಬ್ಬಾತುಗಳಂತಹ ಸುಮಾರು 200 ವಿವಿಧ ಪಕ್ಷಿ ಪ್ರಭೇದಗಳಿಗೂ ಇದು ನೆಲೆಯಾಗಿದೆ.

ಇದನ್ನು ಓದಿ: ತಾಯಿಯರಿಬ್ಬರ ಅಪೂರ್ವ ಸಮ್ಮಿಲನ... ಮನುಷ್ಯರಲ್ಲೂ ಇಲ್ಲದ ಅನುಬಂಧವಿದು: ವಿಡಿಯೋ

ಚಿರತೆ ಅತ್ಯಂತ ಚುರುಕು ಹಾಗೂ ಶರವೇಗದಲ್ಲಿ ಚಲಿಸುವ ಪ್ರಾಣಿಯಾಗಿದ್ದು, ಬೇಟೆ ಮೇಲೆ ಕಣ್ಣಿಟ್ಟಿದೆ ಎಂದಾದರೆ ಸಿಗುವವರೆಗೂ ಬಿಡದು  ಸಾಮಾನ್ಯವಾಗಿ ಚಿರತೆಗಳು ನೆಲದ ಮೇಲೆ ಓಡಾಡುವ ಜಿಂಕೆ, ಮೊಲ, ಕಾಡೆಮ್ಮೆ ಮುಂತಾದವುಗಳನ್ನು ಬೇಟೆಯಾಡುತ್ತವೆ. ಆದರೆ ಈ ರಕ್ಷಿತಾರಣ್ಯದಲ್ಲಿ ಮರವೇರಿ ಕೋತಿಯನ್ನು ಕೂಡ ಚಿರತೆಗಳು ಭೇಟೆಯಾಡಿವೆ. 

ಪ್ರಾಣಿಗಳ ಸಾಮ್ರಾಜ್ಯವು ಬಹಳ ಆಸಕ್ತಿದಾಯಕವಾದ ಪ್ರಪಂಚವಾಗಿದ್ದು, ಪ್ರತಿದಿನ ಒಂದೊಂದು ಅದ್ಭುತಗಳು ನಡೆಯುತ್ತಿರುತ್ತವೆ. ಪ್ರಾಣಿ ಪ್ರಪಂಚದ ಹಲವು ವಿಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೋಡಿರಬಹುದು. ಅದೇ ರೀತಿ ಈ ಭಯಾನಕ ವಿಡಿಯೋ ಈಗ ವೈರಲ್ ಆಗಿದೆ. 

 

ಕೆಲ ದಿನಗಳ ಹಿಂದಷ್ಟೇ ಮೂರು ಸಿಂಹಗಳು ಜೊತೆಯಾಗಿ ಮೊಸಳೆಯೊಂದನ್ನು ಬೇಟೆಯಾಡುತ್ತಿರುವ ದೃಶ್ಯ ವೈರಲ್ ಆಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಈ ವೀಡಿಯೊವನ್ನು 62,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದರು. ಇದು ಎರಡು ಸಿಂಹಿಣಿಗಳು ಮತ್ತು ಒಂದು ಸಿಂಹ ಸೇರಿ ಆಳವಿಲ್ಲದ  ಉಪ್ಪು ನೀರಿನ ಸರೋವರದಲ್ಲಿ ಮೊಸಳೆಯ ಮೇಲೆ ದಬ್ಬಾಳಿಕೆ ನಡೆಸುವ ದೃಶ್ಯವಾಗಿದೆ. 

ಮೂರು ಹಸಿದ ಸಿಂಹಗಳು ಮೊಸಳೆಯನ್ನು ಬೇಟೆಯಾಡಲು ಅದರ ಮೇಲೆ ಹಾರಿದಾಗ ಮೊಸಳೆಯು ತನ್ನ ಪ್ರಾಣಕ್ಕಾಗಿ ತೀವ್ರವಾಗಿ ಹೋರಾಡುತ್ತಿರುವುದನ್ನು ಕಾಣಬಹುದು. ಮೊದಲಿಗೆ, ಒಂದು ಸಿಂಹವು ಮೊಸಳೆಯೊಂದಿಗೆ ಸ್ವತಃ ಹೋರಾಡುತ್ತಿದ್ದವು. ಆದರೆ ಜೊತೆಗಿದ್ದ  ಸಿಂಹಿಣಿಗಳಿಗೆ ಅದನ್ನು ಆತನೋರ್ವನೆ ನಿಭಾಯಿಸಲು ಸಾಧ್ಯವಿಲ್ಲ ಎಂದು ತಿಳಿದಿದ್ದು, ಅವುಗಳು ಕೂಡ ಆತನಿಗೆ ಸಹಾಯ ಮಾಡಲು ಹೋಗಿವೆ. ಮೂರು ಸಿಂಹಗಳು ಒಂದು ಮೊಸಳೆಯನ್ನು ಹಿಡಿದು ಎಳೆದಾಡುತ್ತಿವೆ. 

ಇದನ್ನು ಓದಿ: ಕೈಯಲ್ಲಿ ಚಾಕು ಹಿಡಿದು ಡಾನ್‌ ತರ ಜನರ ಬೆದರಿಸಿದ ಕೋತಿ: ವಿಡಿಯೋ ವೈರಲ್

ಕೆಲದಿನಗಳ ಹಿಂದೆ ಜಿಂಕೆಗಾಗಿ ಮೊಸಳೆ ಹಾಗೂ ಸಿಂಹ ಎಳೆದಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.ಜಿಂಕೆಗಾಗಿ (deer) ಹರಿಯುವ ನೀರಿನಲ್ಲಿ ಮೊಸಳೆ ಹಾಗೂ ಸಿಂಹವೊಂದು ಕಾದಾಡುವ ಭಯಾನಕ ದೃಶ್ಯ ಇದಾಗಿದೆ. ಜಿಂಕೆಯನ್ನು ಕಚ್ಚಿ ಮೊಸಳೆ ಹಾಗೂ ಸಿಂಹ ಅತ್ತಿಂದಿತ್ತ ಎಳೆದಾಡುತ್ತಿವೆ. ಆದರೆ ಈ ಜಿಂಕೆ ನೀರಿಗೆ ಹೇಗೆ ಹೋಯಿತೆಂಬುದು ತಿಳಿಯುತ್ತಿಲ್ಲ. ಬಹುಶಃ ಜಿಂಕೆಯೊಂದು ನೀರು ಕುಡಿಯಲು ಹೋದಂತಹ ಸಂದರ್ಭದಲ್ಲಿ ಈ ಘಟನೆ ನಡೆದಿರಬಹುದು. ನೀರು ಕುಡಿಯಲು ಹೋಗಿ ಈ ಕ್ರೂರ ಪ್ರಾಣಿಗಳ ಬಾಯಿಗೆ ಸಿಕ್ಕಿರಬಹುದು. 
 

click me!