ಕೆರೆಯಲ್ಲಿ ಪತ್ತೆಯಾದ ಗಾಯಕ ಯೇಸುದಾಸ್ ಸಹೋದರನ ಶವ: ಆತ್ಮಹತ್ಯೆ ಶಂಕೆ!

Suvarna News   | Asianet News
Published : Feb 06, 2020, 09:21 PM IST
ಕೆರೆಯಲ್ಲಿ ಪತ್ತೆಯಾದ ಗಾಯಕ ಯೇಸುದಾಸ್ ಸಹೋದರನ ಶವ: ಆತ್ಮಹತ್ಯೆ ಶಂಕೆ!

ಸಾರಾಂಶ

ಖ್ಯಾತ ಗಾಯಕ ಯೇಸುದಾಸ್ ಸಹೋದರನ ಶವ ಪತ್ತೆ| ಕೇರಳದ ಕೊಚ್ಚಿಯ ಕೆರೆಯಲ್ಲಿ ಕೆಜೆ ಜಸ್ಟಿನ್ ಶವ ಪತ್ತೆ| ಜಸ್ಟಿನ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದ ಪೊಲೀಸರು| ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಯೇಸುದಾಸ್ ಸಹೋದರ|

ಕೊಚ್ಚಿ(ಫೆ.06): ತಮ್ಮ ಸುಮಧುರ ಕಂಠದ ಮೂಲಕ ಭಾರತೀಯರ ಮನೆ ಮಾತಾಗಿರುವ ಖ್ಯಾತ ಗಾಯಕ ಯೇಸುದಾಸ್ ಅವರ ಸಹೋದರ ಕೆಜೆ ಜಸ್ಟಿನ್ ಅವರ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಜಸ್ಟಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.  

ಕೇರಳದ ಕೊಚ್ಚಿಯ ಕರೆಯಲ್ಲಿ ಯೇಸುದಾಸ್ ಅವರ ಸಹೋದರ ಕೆಜೆ ಜಸ್ಟಿನ್ ಅವರ ಶವ ಪತ್ತೆಯಾಗಿದ್ದು, ಜಸ್ಟಿನ್ ಕೆರೆಯಲ್ಲಿ ಮುಳುಗಿ ಅಸುನೀಗಿದ್ದಾರೆ ಎಂದು ಕೊಚ್ಚಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. 

ನಿನ್ನೆ ರಾತ್ರಿಯಿಂದ ಜಸ್ಟಿನ್ ಮನಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಕೊಚ್ಚಿಯ ಕೆರೆಯಲ್ಲಿ ಜಸ್ಟಿನ್ ಶವವನ್ನು ಪತ್ತೆ ಹಚ್ಚಿದ್ದಾರೆ.

ಕುಟುಂಬದ ಮೂಲಗಳ ಪ್ರಕಾರ ಜಸ್ಟಿನ್ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇತ್ತೀಚಿಗೆ ಬಹಳ  ವ್ಯಾಕುಲತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.

ಜಸ್ಟಿನ್ ಆತ್ಮಹತ್ಯೆ ಮಾಡಿಕೊಂಡರಬಹುದು ಎಂದು ಶಂಕಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

"

ಈ ಕುರಿತು ಏಶಿಯಾನೆಟ್ ನ್ಯೂಸ್.ಕಾಂನ ಮಲಯಾಳಂ ಆವೃತ್ತಿಯಲ್ಲಿ ಪ್ರಸಾರವಾಗಿರುವ  ವಿಡಿಯೋ ಸುದ್ದಿ  ಮಾಹಿತಿ ಇಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?