ಚೀನಾ​ದ​ಲ್ಲಿನ ಕೊನೆಯ ಭಾರ​ತೀಯ ಪತ್ರ​ಕ​ರ್ತ​ನಿಗೂ ಗೇಟ್‌​ಪಾ​ಸ್‌ ನೀಡಿದ ಚೀನಾ

Published : Jun 13, 2023, 06:45 AM IST
 ಚೀನಾ​ದ​ಲ್ಲಿನ ಕೊನೆಯ ಭಾರ​ತೀಯ ಪತ್ರ​ಕ​ರ್ತ​ನಿಗೂ ಗೇಟ್‌​ಪಾ​ಸ್‌ ನೀಡಿದ ಚೀನಾ

ಸಾರಾಂಶ

ಪತ್ರ​ಕ​ರ್ತ​ರಿಗೆ ಸಂಬಂಧಿ​ಸಿ​ದಂತೆ ಭಾರತ ಹಾಗೂ ಚೀನಾ ನಡು​ವಿನ ಸಂಘರ್ಷ ಮುಂದು​ವ​ರಿ​ದಿದ್ದು, ಚೀನಾ​ದಲ್ಲಿ ಬಾಕಿ ಉಳಿ​ದಿದ್ದ ಕೊನೆಯ ಭಾರ​ತೀಯ ಪತ್ರಕರ್ತ​ನಿಗೂ ಸ್ವದೇ​ಶಕ್ಕೆ ತೆರ​ಳು​ವಂತೆ ಕ್ಸಿ ಜಿನ್‌​ಪಿಂಗ್‌ ಸರ್ಕಾರ ಸೂಚಿ​ಸಿ​ದೆ.

ಬೀಜಿಂಗ್‌: ಪತ್ರ​ಕ​ರ್ತ​ರಿಗೆ ಸಂಬಂಧಿ​ಸಿ​ದಂತೆ ಭಾರತ ಹಾಗೂ ಚೀನಾ ನಡು​ವಿನ ಸಂಘರ್ಷ ಮುಂದು​ವ​ರಿ​ದಿದ್ದು, ಚೀನಾ​ದಲ್ಲಿ ಬಾಕಿ ಉಳಿ​ದಿದ್ದ ಕೊನೆಯ ಭಾರ​ತೀಯ ಪತ್ರಕರ್ತ​ನಿಗೂ ಸ್ವದೇ​ಶಕ್ಕೆ ತೆರ​ಳು​ವಂತೆ ಕ್ಸಿ ಜಿನ್‌​ಪಿಂಗ್‌ ಸರ್ಕಾರ ಸೂಚಿ​ಸಿ​ದೆ.  ಭಾರ​ತದ ದೊಡ್ಡ ಸುದ್ದಿ​ಸಂಸ್ಥೆ​ಯಾದ ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ (ಪಿ​ಟಿ​ಐ) ವರ​ದಿ​ಗಾರ ಕೆಜೆಎಂ ವರ್ಮಾ ಅವ​ರಿಗೆ ಇದೇ ತಿಂಗಳು ದೇಶ ತೊರೆ​ಯು​ವಂತೆ ಚೀನಾ ಸರ್ಕಾರ ಆದೇ​ಶಿ​ಸಿದೆ. ಇದ​ರೊಂದಿಗೆ ಚೀನಾ​ದಲ್ಲಿ ಇನ್ನು ಯಾವುದೇ ಭಾರ​ತದ ಮಾಧ್ಯಮ ಪ್ರತಿ​ನಿಧಿಯ ಉಪ​ಸ್ಥಿತಿ ಇರು​ವು​ದಿ​ಲ್ಲ.

ಈ ಮುನ್ನ ಪಿಟಿಐ (PTI), ಹಿಂದು​ಸ್ತಾ​ನ ಟೈಮ್ಸ್‌ (Hindustan Times), ದ ಹಿಂದೂ (The Hindu) ಹಾಗೂ ಪ್ರಸಾರ ಭಾರ​ತಿ ಪತ್ರ​ಕ​ರ್ತರು (ನಾ​ಲ್ವ​ರು) ಚೀನಾ​ದಲ್ಲಿ ಇರು​ತ್ತಿ​ದ್ದರು. ಕಳೆದ 2 ತಿಂಗ​ಳ​ಲ್ಲಿ 3 ಪತ್ರ​ಕ​ರ್ತ​ರಿಗೆ ಗೇಟ್‌​ಪಾಸ್‌ ನೀಡಿದ್ದ ಚೀನಾ, ಈಗ ಕೊನೆಯ ಪತ್ರ​ಕ​ರ್ತ​ನನ್ನೂ ಹೊರ​ಹಾ​ಕಲು ತೀರ್ಮಾ​ನಿ​ಸಿ​ದೆ.

ಪ್ರಧಾನಿ ಮೋದಿ ಭೇಟಿಗೂ ಮುನ್ನ 'ನ್ಯಾಟೋ' ಆಫರ್‌ ನೀಡಿದ ಅಮೆರಿಕ, ತಿರಸ್ಕರಿಸಿದ ಭಾರತ!

ಕಾರಣ ಏನು?:

ಭಾರ​ತ​ದಲ್ಲಿನ ಇಬ್ಬರು ಚೀನಾ ಪತ್ರ​ಕ​ರ್ತರ ವೀಸಾ ನವೀ​ಕ​ರ​ಣಕ್ಕೆ (Visa Renovation) ಭಾರತ ನಿರಾ​ಕ​ರಿ​ಸಿತ್ತು. ಇದರ ಬೆನ್ನ​ಲ್ಲೇ ಚೀನಾ ಮಾಧ್ಯಮ ಪ್ರತಿ​ನಿ​ಧಿಗ​ಳನ್ನು ಸರಿ​ಯಾಗಿ ನಡೆ​ಸಿ​ಕೊ​ಳ್ಳು​ತ್ತಿಲ್ಲ ಎಂದು ಕ್ಸಿ ಜಿನ್‌​ಪಿಂಗ್‌ ಸರ್ಕಾರ ದೂರಿ​ತ್ತು. ಇದರ ಬೆನ್ನಲ್ಲೇ ಪ್ರತೀ​ಕಾರ ಕ್ರಮ ಆರಂಭಿ​ಸಿ​ತ್ತು. ಆದರೆ ಚೀನಾ ಪತ್ರ​ಕ​ರ್ತ​ರನ್ನು ಸೌಜ​ನ್ಯ​ದಿಂದ ನೋಡಿ​ಕೊಂಡಿ​ದ್ದೇವೆ ಎಂದು ಭಾರತ ಸರ್ಕಾರ ಸ್ಪಷ್ಟ​ಪ​ಡಿ​ಸಿ​ತ್ತು. ಇದೇ ವೇಳೆ, ಚೀನಾ​ದ​ಲ್ಲಿನ ಭಾರ​ತೀಯ ಪತ್ರ​ಕ​ರ್ತ​ರು ಚೀನಾ ಮೂಲದ ಪತ್ರ​ಕ​ರ್ತ​ರನ್ನು ತಮ್ಮ ಸಹಾ​ಯಕ ವರ​ದಿ​ಗಾ​ರ​ರ​ನ್ನಾಗಿ ನೇಮಿ​ಸಿ​ಕೊಂಡಿ​ದ್ದರು ಎನ್ನ​ಲಾ​ಗಿದೆ. ಇದು ಕ್ಸಿ ಸರ್ಕಾ​ರದ ಕೆಂಗ​ಣ್ಣಿಗೆ ಗುರಿ​ಯಾ​ಗಿ​ತ್ತು.

ಭಾರತ ಯಾವುದೇ ದೇಶದ ಮಿಲಿಟರಿ ಮೈತ್ರಿಯ ಭಾಗವಾಗಿಲ್ಲ: ಅಮೆರಿಕ ಜತೆಗಿನ ಸಂಬಂಧದ ಬಗ್ಗೆ ಚೀನಾಗೆ ಸ್ಪಷ್ಟನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: 8100mAh ದೈತ್ಯ ಬ್ಯಾಟರಿಯ ವಿವೋ Y500 ಸ್ಮಾರ್ಟ್‌ಫೋನ್ ಬಿಡುಗಡೆ; ಕ್ಯಾಮೆರಾ, ಬೆಲೆ ಎಷ್ಟು?
ವಿವಾಹಿತ ಮಹಿಳೆ ವಿಲ್ ಬರೆಯದೆ ಸತ್ತರೆ ಆಸ್ತಿ ಯಾರಿಗೆ? ಪೋಷಕರಿಗೋ ಅಥವಾ ಗಂಡನ ಕುಟುಂಬಕ್ಕೋ?