
ಚೆನ್ನೈ (ಆ.04) ತಮಿಳುನಾಡಿನ ಮಾಜಿ ಉಪ ಮುಖ್ಯಮಂತ್ರಿ, ಹಾಲಿ ವಿಪಕ್ಷ ನಾಯಕ, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅರೆಸ್ಟ್ ಆಗಿದ್ದಾರೆ. ನಟಿ ತೃಷಾ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಪ್ರಕರಣಗಳು ದಾಖಲಾಗಿತ್ತು. ಬಂಧನದ ಸುಳಿವು ಪಡೆದ ಉದಯನಿಧಿ ಸ್ಟಾಲಿನ್ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಆದೇಶ ಬರುವ ಮೊದಲೇ ತಂಜಾವೂರು ಪೊಲೀಸರು ಸ್ಟಾಲಿನ್ ಅರೆಸ್ಟ್ ಮಾಡಿದ್ದಾರೆ. ಅಧಿಕಾರ ಕಳೆದುಕೊಂಡ ಬಳಿಕವೂ ಅವಾಚ್ಯ, ಅವಹೇಳಕಾರಿ ಹೇಳಿಕೆ ನೀಡುವುದು ಮುಂದುವರಿಸಿದ ಉದಯನಿಧಿ ಸ್ಟಾಲಿನ್ ವಿರುದ್ಧ ತಮಿಳುನಾಡು ಬಿಜೆಪಿ ಸೇರಿದಂತೆ ಟಿವಿಕೆ ನಾಯಕರು ಭಾರಿ ಆಕ್ರೋಶ ಹೊರಹಾಕಿದ್ದರು.
ಅರೆಸ್ಟ್ ಕುರಿತು ತಮಿಳುನಾಡಿನಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ. ಈ ಅರೆಸ್ಟ್ ಕುರಿತು ಸ್ಪಷ್ಟನೆ ನೀಡಿರುವ ಟಿವಿಕೆ ನಾಯಕ ಎ ನಾರಾಯಣನ್, ಉದಯನಿಧಿ ಸ್ಟಾಲಿನ್ ಅರೆಸ್ಟ್ ಕುರಿತು ವಿವರಣೆ ನೀಡಿದ್ದಾರೆ. ಉದಯನಿಧಿ ಸ್ಟಾಲಿನ್ ಬಂಧನ ಹಿಂದೆ ಟಿವಿಕೆ ಅಥವಾ ಸಿಎಂ ವಿಜಯ್ ವಿರುದ್ಧ ನೀಡಿದ ಹೇಳಿಕೆಯಲ್ಲ. ಉದಯನಿಧಿ ಸ್ಟಾಲಿನ್ ಮಹಿಳೆಯನ್ನು ಅಪಮಾನಿಸಿದ್ದಾರೆ. ತಮಿಳುನಾಡಿನ ಪ್ರತಿಯೊಬ್ಬ ಮಹಿಳೆಗೆ ಗೌರವ ನೀಡಬೇಕು. ಕನಿಷ್ಠ ಗೌರವ ನೀಡಲು ಸಾಧ್ಯವಾಗದಿದ್ದರೆ ಅಪಮಾನ ಮಾಡಬಾರದು. ಮಹಿಳೆಗೆ ಮಾಡಿದ ಅವಮಾನಕ್ಕಾಗಿ ಉದಯನಿಧಿ ಸ್ಟಾಲಿನ್ ಅರೆಸ್ಟ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅರೆಸ್ಟ್ ಬೆನ್ನಲ್ಲೇ ಹೇಳಿಕೆ ನೀಡಿರುವ ಉದಯನಿಧಿ ಸ್ಟಾಲಿನ್,ಟಿವಿಕೆ ಹಾಗೂ ಸಿಎಂ ಜೊಸೆಫ್ ವಿಜಯ್ ರಾಜಕೀಯ ದ್ವೇಷ ಸಾಧಿಸುತ್ತಿದ್ದಾರೆ. ಅಧಿಕಾರ ಇದೆ ಎಂದು ಡಿಎಂಕೆ ಪ್ರತಿಯೊಬ್ಬ ಕಾರ್ಯಕರ್ತರ ಮೇಲೂ ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆ ಎಂದಿದ್ದಾರೆ. ಇಷ್ಟೇ ಅಲ್ಲ ಭಾಷಣಧಲ್ಲಿ ನಾನು ತೃಷಾ ಹೆಸರನ್ನು ಉಲ್ಲೇಖಿಸಿಲ್ಲ. ಯಾರ ಹೆಸರು ಹೇಳದೆ ಕೆಲ ಘಟನೆಗಳನ್ನು ಉಲ್ಲೇಖಿಸಿದ್ದೇನೆ. ಹೀಗಾಗಿ ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಡಿಎಂಕೆ ಪಕ್ಷ ಆಯೋದಿಸಿದ ಕಾವೇರಿ ನದಿ ನೀರು ಹೋರಾಟದಲ್ಲಿ ಪಾಲ್ಗೊಂಡ ಉದಯನಿಧಿ ಸ್ಟಾಲಿನ್ ಜನತೆಯನ್ನುದ್ದೇಶಿ ಮಾತನಾಡಿದ್ದರು. ಈ ವೇಳೆ ಟಿವಿಕೆ ಪಕ್ಷದ ವಿರುದ್ದ ಹರಿಹಾಯ್ದಿದ್ದರು. ಸಿಎಂ ವಿಜಯ್ ಕಾವೇರಿ ನದಿ ನೀರು ಕುರಿತು ಮಾತನಾಡುತ್ತಿಲ್ಲ. 45 ಟಿಎಂಸಿ ನೀರು ಬರಬೇಕು, ಆದರೆ ಕರ್ನಾಟಕ ನೀರು ಬಿಟ್ಟಿಲ್ಲಿ, ಸಿಎಂ ವಿಜಯ್ ಮಾತನಾಡುತ್ತಿಲ್ಲ ಎಂದಿದ್ದರು. ಈ ವೇಳೆ ನೆರೆದಿದ್ದ ಜನ ತ್ರಿಷಾ, ತ್ರಿಷಾ ಎಂದು ಕೂಗಿದ್ದಾರೆ. ಭಾಷಣ ಒಂದು ಸೆಕೆಂಡ್ ನಿಲ್ಲಿಸಿದ ಉದಯನಿಧಿ ಸ್ಟಾಲಿನ್ ವಿವಾದಿತ ಹೇಳಿಕೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ