
ಅಯೋಧ್ಯೆ(ಫೆ.18): ಸುಪ್ರೀಂಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಇಡೀ ದೇಶವೇ ಎದುರು ನೋಡುತ್ತಿದೆ. ಅದರಂತೆ ಕೇಂದ್ರ ಸರ್ಕಾರ ಕೂಡ ಭೂಮಿ ಪರಭಾರೆಗೆ ಸಮಿತಿ ರಚಿಸಿ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಆದರೆ ಈ ಪ್ರಕ್ರಿಯೆಗೆ ತಡೆ ನೀಡಲು ಮುಂದಾಗಿರುವ ವಕೀಲ ಎಂ.ಆರ್ ಶಂಷದ್, ಹೊಸ ಕ್ಯಾತೆಯೊಂದನ್ನು ತೆಗೆದಿದ್ದಾರೆ. ಉದ್ದೇಶಿತ ರಾಮ ಮಂದಿರ ಕಟ್ಟುವ ಜಾಗದಲ್ಲಿ ಮುಸ್ಲಿಮರ ಗೋರಿಗಳಿದ್ದು, ಗೋರಿಗಳ ಮೇಲೆ ಮಂದಿರ ಕಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ದೇವಾಲಯ ಟ್ರಸ್ಟ್ ನಾಯಕತ್ವ ವಹಿಸಿರುವ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕೆ.ಕೆ. ಪರಾಶರನ್ ಪತ್ರ ಬರೆದಿರುವ ಶಂಷದ್, ಗೋರಿಗಳ ಮೇಲೆ ಮಂದಿರ ಕಟ್ಟಿದರೆ ಸನಾತನ ಧರ್ಮದ ಉಲ್ಲಂಘನೆ ಮಾಡಿದಂತ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬಾಬ್ರಿ ಮಸೀದಿ ನೆಲಸಮವಾದ ಸ್ಥಳದ ಸುತ್ತ ಸ್ಮಶಾನವಿದೆ. 1885ರ ಗಲಭೆಯಲ್ಲಿ ಮೃತಪಟ್ಟ 75 ಮುಸ್ಲಿಮರನ್ನು ಅಲ್ಲಿಯೇ ಸಮಾಧಿ ಮಾಡಲಾಗಿದೆ. ಹೀಗಾಗಿ ಗೋರಿಗಳ ಮೇಲೆ ಮಂದಿರ ನಿರ್ಮಿಸುವುದರಿಂದ ಧರ್ಮಕ್ಕೆ ಅಪಚಾರ ಮಾಡಿದಂತಾಗುತ್ತದೆ ಎಂದು ಶಂಷದ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮುಸ್ಲಿಮರ ಸಮಾಧಿಯ ಮೇಲೆ ರಾಮ ಮಂದಿರ ನಿರ್ಮಿಸುವುದು ಸರಿಯೇ ಎಂದು ಪರಿಗಣಿಸುವಂತೆ ಪತ್ರದಲ್ಲಿ ಕೋರಲಾಗಿದೆ. ಈ ಮೂಲಕ ಮಂದಿರ ನಿರ್ಮಾಣಕ್ಕೆ ತಡೆ ನೀಡುವ ಪ್ರಯತ್ನ ಮಾಡಲಾಗಿದ್ದು, ಈ ಕುರಿತು ದೇವಾಲಯ ಸಮಿತಿ ಏನು ನಿರ್ಧಾರ ತಳೆಯಲಿದೆ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ